ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸಮುದ್ರದ ಮೇಲೆ ಭಾರತದ ಮೊದಲ ಗಾಜಿನ ಸೇತುವೆಯನ್ನು ಉದ್ಘಾಟಿಸಲಾಗಿದೆ.
ಸ್ಥಳ:ತಮಿಳುನಾಡಿನ ಕನ್ಯಾಕುಮಾರಿ
ಉದ್ಘಾಟನೆ:ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 2024 ಡಿಸೆಂಬರ್ 30 ರಂದು ಉದ್ಘಾಟಿಸಿದರು.
ವಿಶೇಷತೆಗಳು:
– ಸೇತುವೆಯ ಉದ್ದ: 77 ಮೀಟರ್
– ಅಗಲ: 10 ಮೀಟರ್
– ಸಂಪರ್ಕ: ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆ
– ವೀಕ್ಷಣಾ ಅನುಭವ:ಸಮುದ್ರದ ಮೇಲೆ ನಡೆಯುವ ರೋಮಾಂಚಕ ಅನುಭವ
– ವಿನ್ಯಾಸ:ಲವಣಯುಕ್ತ ಗಾಳಿಯನ್ನು ತಡೆದುಕೊಳ್ಳುವ ಬೌಸ್ಟ್ರಿಂಗ್ ಕಮಾನು
ನಿರ್ಮಾಣ ವೆಚ್ಚ: 37 ಕೋಟಿ ರೂ.
ಪ್ರವಾಸಿಗರಿಗೆ ಆಕರ್ಷಣೆ:
– ಸಮುದ್ರದ ನೋಟ
– ಇಬ್ಬರು ಮಹಾನ್ ವ್ಯಕ್ತಿಗಳ ಸ್ಮಾರಕಗಳ ವೀಕ್ಷಣೆ
ಈ ಗಾಜಿನ ಸೇತುವೆಯನ್ನು ತಮಿಳುನಾಡು ಸರ್ಕಾರ 37 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ದಿವಂಗತ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಿದ ಬೆಳ್ಳಿಹಬ್ಬದ ಅಂಗವಾಗಿ ಸಿಎಂ ಎಂಕೆ ಸ್ಟಾಲಿನ್ ಸೇತುವೆಯನ್ನು ಉದ್ಘಾಟಿಸಿದರು.