india got talent – ಭಯಾನಕ ಸ್ಪರ್ಧಿಗೆ ಬೆಚ್ಚಿಬಿದ್ದ ಶಿಲ್ಪ ಶೆಟ್ಟಿ
ಸೋನಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ india got talent ಶೋನಲ್ಲಿ ಸ್ಪರ್ಧಿಯೊಬ್ಬನ ವಿಶೇಷ ಪ್ರತಿಭೆಯನ್ನ ನೋಡಿ ನಟಿ ಶಿಲ್ಪಾ ಶೆಟ್ಟಿ, ಮತ್ತು ಕಿರಣ್ ಖೇರ್ ಬೆಚ್ಚಿಬಿದ್ದಿದ್ದಾರೆ.
ಇತ್ತೀಚಿನ ಇಂಡಿಯಾ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಪ್ರೋಮೋದಲ್ಲಿ ಸ್ಪರ್ಧಿಯೊಬ್ಬ ಮೈಯಲ್ಲಿ ಮೂಳೆಗಳೆ ಇಲ್ಲವೆನೋ ಎನ್ನುವಂತೆ ಮೈ ಕೈ ತಿರುಚಿ ಡ್ಯಾನ್ಸ್ ಮಾಡಿರುವುದು ನೊಡುಗರನ್ನ ಬೆಚ್ಚಿಬೀಳಿಸುತ್ತದೆ.
ಆದಿತ್ಯಾ ಮಾಳವಿಯ ಎನ್ನುವ ಸ್ಪರ್ಧಿ ಪ್ರದರ್ಶಿಸಿದ ವಿಭಿನ್ನ ಟ್ಯಾಲೆಂಟ್ ನ ಪ್ರೋಮೋ ವೈರಲ್ ಆಗಿದೆ. ವೇದಿಕೆಯಿಂದ ಕೆಳಗಿಳಿದು ಜಡ್ಜ್ ನ ಮುಂದೆಯೇ ಟ್ಯಾಲೆಂಟ್ ತೊರಿಸಿದಾಗ ಶಿಲ್ಪಾ ಶೆಟ್ಟಿಯಂತೂ ಅಕ್ಷರ ಸಹ ನಡುಗಿ ಹೋದರು. ಸಾಕು ನಿಲ್ಲಿಸಿ ಇನ್ನೆಷ್ಟು ಹೆದರಿಸುತ್ತೀರಿ ಎಂದು ಶಿಲ್ಪಾ ಶೆಟ್ಟಿ ಬೇಡಿಕೊಂಡರು.