ವಾಷಿಂಗ್ಟನ್ : ಭಾರತ ದೇಶ ಕೊರೊನಾ ಸಂಕಷ್ಟ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಭಾರತಕ್ಕೆ ಖುಷಿ ಕ್ಷಣವೊಂದು ಹತ್ತಿರವಾಗುತ್ತಿದೆ. ದಶಕಗಳ ಕನಸು ನನಸಾಗಿಸುವ ತವಕದಲ್ಲಿ ಭಾರತವಿದೆ. ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಕಾಲದಿಂದಲೂ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ಸೇರಲು ಭಾರತ ಪ್ರಯತ್ನ ಮಾಡುತ್ತಿತ್ತು. ಇದೀಗ ಬಹು ದಿನ ಆಶಯ ಈಡೇರಿಕೆಯಾಗುವ ಹಂತದಲ್ಲಿ ಭಾರತವಿದೆ.
2021- 22 ಸಾಲಿನ ಖಾಯಂ ಸದಸ್ಯ ಅಲ್ಲದ ದೇಶಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ. ಆ ಮೂಲಕ ಭಾರತದ ಭದ್ರತಾ ಮಂಡಳಿಗೆ ಸೇರುವ ಕನಸು ನನಸಾಗುವ ಅವಕಾಶ ಒದಗಿ ಬಂದಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಚುನಾವಣೆ ನಡೆಯಲಿದೆ. ಬಲಿಷ್ಠ ಭದ್ರತಾ ಮಂಡಳಿಗೆ ಭಾರತ ಸೇರುವ ವಿಶ್ವಾಸವಿದೆ. ಜೊತೆಗೆ 75ನೇ ಅಧಿವೇಶನದ ಅಧ್ಯಕ್ಷ ಭದ್ರತಾ ಮಂಡಳಿಯ ಐದು ಖಾಯಂ ಅಲ್ಲದ ಸದಸ್ಯ ದೇಶಗಳ ಮತ್ತು ಆರ್ಥಿಕ ಸಾಮಾಜಿಕ ಮಂಡಳಿಯ ಸದಸ್ಯ ಹುದ್ದೆಗೆ 193 ಸದಸ್ಯ ರಾಷ್ಟ್ರಗಳು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಚುನಾವಣೆ ನಡೆಸಲಿದೆ.
ಭಾರತ ದೇಶವು ಏಷ್ಯಾ – ಪೆಸಿಫಿಕ್ ಕಡೆಯಿಂದ ಸ್ಪರ್ಧೆ ಮಾಡುತ್ತಿದೆ. ಅಲ್ಲದೆ ಈ ವಿಭಾಗದಿಂದ ಕಣಕ್ಕಿಳಿದರುವುದು ಭಾರತ ಮಾತ್ರವಾಗಿದೆ. ಜೊತೆಗೆ ಭಾರತದ ಉಮೇದುವಾರಿಕೆಗೆ 55 ಸದಸ್ಯ ಏಷ್ಯಾ – ಫೆಸಿಫಿಕ್ ಗುಂಪು ಸಹಿ ಹಾಕಿವೆ. ವಿಶೇಷ ಎಂದರೆ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಲು ಪಾಕಿಸ್ಥಾನ ಹಾಗೂ ಚೀನ ಕೂಡ ಬೆಂಬಲ ನೀಡಿದೆ.