ಭಾರತ ನಾಗರಿಕತೆಯ ಮೇಲೆ ಆಧಾರಿತ ಸುಸಂಸ್ಕೃತ ರಾಷ್ಟ್ರ – ಅಜಿತ್ ದೋವಲ್ India civilised nation
ಹೊಸದಿಲ್ಲಿ, ಅಕ್ಟೋಬರ್26: ಭಾರತವು ನಾಗರಿಕತೆಯ ಮೇಲೆ ಆಧಾರಿತ ಸುಸಂಸ್ಕೃತ ರಾಷ್ಟ್ರವಾಗಿದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾನುವಾರ ಹೇಳಿದ್ದಾರೆ. India civilised nation
ಉತ್ತರಾಖಂಡದ ಪಾರ್ಮಾರ್ಥ್ ನಿಕೇತನ್ ನಲ್ಲಿ ಮಾತನಾಡಿದ ಅವರು, 1947ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದ ಭಾರತದಲ್ಲಿ ನಾಗರಿಕತೆ ಹೇಗೆ ಅಸ್ತಿತ್ವದಲ್ಲಿದೆ ಎಂಬುದನ್ನು ಎತ್ತಿ ತೋರಿಸಿದರು.
ಕೇಂದ್ರದಿಂದ ದೀಪಾವಳಿ ಉಡುಗೊರೆ – 2 ಕೋಟಿ ರೂ.ವರೆಗಿನ ಸಾಲಗಳಿಗೆ ಚಕ್ರ ಬಡ್ಡಿ ಮನ್ನಾ
ನಮ್ಮ ರಾಷ್ಟ್ರ ಭಾರತವು ಸುಸಂಸ್ಕೃತ ರಾಷ್ಟ್ರವಾಗಿದೆ. ಅದು ಧರ್ಮವನ್ನು ಆಧರಿಸಿಲ್ಲ, ಭಾಷೆ ಅಥವಾ ಜನಾಂಗೀಯತೆಯನ್ನು ಆಧರಿಸಿಲ್ಲ ಆದರೆ ನಾಗರಿಕತೆಯ ಮೇಲೆ ಆಧಾರಿತವಾಗಿದೆ ಎಂದು ಅವರು ಹೇಳಿದರು.
ಭಾರತದ ಸಂತರು ರಾಷ್ಟ್ರ ನಿರ್ಮಾಣದಲ್ಲಿ ವಹಿಸಿದ ಪಾತ್ರವನ್ನು ಅವರು ಶ್ಲಾಘಿಸಿದರು.
ಯಹೂದಿಗಳು ನಾಗರಿಕತೆಯಾಗಿ 2000 ವರ್ಷಗಳ ಕಾಲ ಹೇಗೆ ಅಸ್ತಿತ್ವದಲ್ಲಿದ್ದರು, ಮತ್ತು ಈಜಿಪ್ಟ್‌ನಂತಹ ನಾಗರಿಕತೆಗಳು ಹೇಗೆ ಕಣ್ಮರೆಯಾದವು ಎಂಬುದಕ್ಕೆ ಉದಾಹರಣೆಗಳನ್ನು ನೀಡಿದರು.
ಅಜಿತ್ ದೋವಲ್ ಯಾವುದೇ ಪ್ರಾದೇಶಿಕ ಉದ್ವಿಗ್ನತೆಯನ್ನು ಉಲ್ಲೇಖಿಸದೆ, ರಾಷ್ಟ್ರವನ್ನು ರಕ್ಷಿಸುವುದು ಮಾತ್ರ ನಮಗೆ ಮುಖ್ಯ. ನಮಗೆ ಬೆದರಿಕೆಗಳು ಬರುವಲ್ಲಿ ನಾವು ಹೋರಾಡುತ್ತೇವೆ ಎಂದು ಹೇಳಿದರು. ನಮ್ಮ ಹೋರಾಟ ಸ್ವಾರ್ಥಿ ಉದ್ದೇಶಗಳಿಗಾಗಿ ಅಥವಾ ಪಟ್ಟಭದ್ರ ಹಿತಾಸಕ್ತಿಗಾಗಿ ಅಲ್ಲ ಆದರೆ ದೇಶ ರಕ್ಷಣೆಗಾಗಿ. ದೇಶ ರಕ್ಷಣೆ ಎಲ್ಲಕ್ಕಿಂತಲೂ ಮುಖ್ಯ ಎಂದು ಅವರು ಹೇಳಿದರು.
ಭಾರತದ ಆಧ್ಯಾತ್ಮಿಕತೆಯ ಸಂದೇಶವನ್ನು ಹರಡಲು ದೋವಲ್ ಕರೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ