Indonesia-ಜಕಾರ್ತ: 61 ವರ್ಷದ ವ್ಯಕ್ತಿಯೊಬ್ಬನು ತನ್ನ ಮಾಜಿ ಪತ್ನಿಯನ್ನು 88ನೇ ಭಾರಿಗೆ ಮದುವೆಯಾಗಲು ಸಿದ್ಧನಾಗಿರುವ ವಿಚಿತ್ರ ಘಟನೆ ಇಂಡೋನೇಷ್ಯಾದ ಪಶ್ಚಿಮ ಜಾವಾ ಮಜಲೆಂಗ್ಕಾದಲ್ಲಿ ನಡೆದಿದೆ.
88ನೇ ಭಾರಿಗೆ ತನ್ನ ಮಾಜಿ ಪತ್ನಿಯನ್ನು ಮದುವೆಯಾಗಲು ಸಿದ್ಧನಾಗಿದ ವ್ಯಕ್ತಿಯು ಕಾನ್ (61)ಎಂದು ತಿಳಿದು ಬಂದಿದೆ . ಈ ವ್ಯಕ್ತಿಯು ಅನೇಕ ಬಾರಿ ಬೇರೆ ಬೇರೆ ಮಹಿಳೆಯನ್ನು ಮದುವೆಯಾಗಿದ್ದ.
ಈತನು ಪ್ಲೇಬಾಯ್ ಕಿಂಗ್ ಎಂಬ ಹೆಸರನ್ನು ಸಹ ಹೊಂದಿದ್ದಾನೆ. ಕಾನ್ ಮದುವೆಯಾಗುತ್ತಿರುವ ಮಹಿಳೆನ ಇತನ 86ನೇ ಪತ್ನಿಯಾಗಿದ್ದಳು ಎಂದು ತಿಳಿದು ಬಂದಿದೆ. ಇವಳೊಂದಿಗೆ ಮದುವೆಯಾಗಿ ಕಾನ್ ಹೆಚ್ಚು ದಿನಗಳ ಕಾಲ ಜೊತೆ ಇರಲಾಗಲಿಲ್ಲ . ಕೇವಲ ಒಂದು ತಿಂಗಳಷ್ಟೇ ಜೊತೆಯಲ್ಲಿದ್ದರೂ ಈ ದಂಪತಿಯ ಪ್ರೀತಿ ಹಾಗೇ ಗಟ್ಟಿಯಾಗಿತ್ತು.
ಹಾಗೂ ಅಚ್ಚರಿಕರ ವಿಷಯವೆಂದರೆ ಈಕೆ ಕಾನ್ನ 86ನೇ ಪತ್ನಿಯಾಗಿದ್ದಳೆ . 86ನೇ ಪತ್ನಿಗೆ ಕಾನ್ನ ಮೇಲೆ ಪ್ರೀತಿ ಹಾಗೆಇದ್ದಿದ್ದರಿಂದ ಮತ್ತೆ ಮದುವೆಯಾಗುವುದಾಗಿ ಕೇಳಿದ್ದಾಳೆ ಇದಕ್ಕೆ ಕಾನ್ ಸಹ ಒಪ್ಪಿಎದ್ದಾನೆ.
14 ವರ್ಷವಿದ್ದಾಗ ಕಾನ್ ಮೊದಲ ವಿವಾಹವಾಗಿದ್ದನು. ಮೊದಲ ಪತ್ನಿ ಕಾನ್ಗಿಂತ 2 ವರ್ಷ ದೊಡ್ಡವಳಾಗಿದ್ದಳು ಆದರೆ ಕಾನ್ ವರ್ತನೆಯಿಂದಾಗಿ ಮದುವೆಯಾಗಿ 2 ವರ್ಷಗಳ ನಂತರ ವಿಚ್ಛೇದನವನ್ನು ಪಡೆದುಕೊಂಡಳು ಎಂದು ತಿಳಿದು ಬಂದಿದೆ.