INDvsBAN: ರೋಚಕ ಪಂದ್ಯದಲ್ಲಿ 5 ರನ್ ಗಳಿಂದ ಭರ್ಜರಿ ಜಯ ಸಾಧಿಸಿದ ಭಾರತ….
ಟಿ20 ವಿಶ್ವಕಪ್ ನಲ್ಲಿ ಬುಧವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 5 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್‌ನ ಸಮೀಪಕ್ಕೆ ತಲುಪಿದೆ.
ಮೊದಲು ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ಶಕೀಬ್ ಉಲ್ ಹಸನ್ ಟೀಂ ಇಂಡಿಯಾವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಅವರ ಅರ್ಧಶತಕ ಮತ್ತು ಸೂರ್ಯ ಅವರ ಅಮೋಘ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.
ಇದಕ್ಕುತ್ತರವಾಗಿ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್ ಭರ್ಜರಿ ಆರಂಭ ನೀಡಿದರು. ಮಳೆ ಆರಂಭವಾಗುವ ಮೊದಲು ಬಾಂಗ್ಲಾದೇಶ 7 ಓವರ್‌ಗಳಲ್ಲಿ 66 ರನ್ ಗಳಿಸಿ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ.
ಆನಂತರ ಮಳೆ ಬಂದು ಪಂದ್ಯವನ್ನ ಕೆಲ ಕಾಲ ನಿಲ್ಲಿಸಲಾಸಯಿತು. ಈ ನಂತರ ಬಾಂಗ್ಲಾದೇಶಕ್ಕೆ ಡಕ್ವರ್ತ್ ಲೂಯಿಸ್ ಅಡಿಯಲ್ಲಿ 16 ಓವರ್ಗಳಲ್ಲಿ 151 ರನ್ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಇಲ್ಲಿಂದ ರೋಹಿತ್ ಪಡೆ ತಿರುಗೇಟು ನೀಡಿ ಬಾಂಗ್ಲಾದೇಶವನ್ನ ಮಣಿಸಿತು.
ಕೆಎಲ್ ರಾಹುಲ್-ವಿರಾಟ್ ಕೊಹ್ಲಿ ನಡುವೆ 67 ರನ್ ಮತ್ತು ಕೊಹ್ಲಿ ಮತ್ತು ಸೂರ್ಯಕುಮಾರ್ ನಡುವೆ 38 ರನ್ ಜೊತೆಯಾಟ ಸಾಗಿಬಂತು. ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ಮ್ಯಾಜಿಕ್ ಮಾಡಿದರು. ಮತ್ತು ಈ ವಿಶ್ವಕಪ್‌ನಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಗಳಿಸಿದರು. ಇದು ಅವರ ಟಿ 20 ಅಂತಾರಾಷ್ಟ್ರೀಯ ವೃತ್ತಿ ಬದುಕಿನ 36ನೇ ಅರ್ಧಶತಕವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
INDvsBAN: India won by 5 runs in an exciting match…