INDvsWI ಇಂದಿನಿಂದ ಭಾರತ –ವಿಂಡೀಸ್ ಟೆಸ್ಟ್ ಸರಣಿ ಆರಂಭ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿನ ಆಘಾತದಿಂದ ಹೊರಬರುವ ಜತೆಗೆ 2023-25ರ ಚಾಂಪಿಯನ್ ಶಿಪ್ ನಲ್ಲಿ ಗೆಲುವಿನ ಆರಂಭ ಪಡೆಯಲು ಎದರು ನೋಡುತ್ತಿರುವ ಭಾರತ ಇಂದಿನಿಂದ ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಸರಣಿ ಆಡಲಿದೆ.
ಮೊದಲ ಪಂದ್ಯ ಡೊಮಿನಿಕಾದ ವಿಂಡ್ಸರ್ ಪಾರ್ಕ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಟೀಮ್ ಇಂಡಿಯಾ ಟೆಸ್ಟ್ ವಿಶ್ವಕಪ್ ಬಳಿಕ ಮೊದಲ ಬಾರಿ ಅಂತಾರಾಷ್ಟ್ರೀ ಪಂದ್ಯವಾಡುತ್ತಿದೆ. ಅಟಗಾರರು ಒಂದು ತಿಂಗಳ ವಿಶ್ರಾಂತಿ ಬಳಿಕ ಮೈದಾನಕ್ಕೆ ಮರಳಿದ್ದಾರೆ.
ಮತ್ತೊಂದಡೆ ಸತತ ಸೋಲುಗಳನ್ನು ಕಂಡು ಮುಖಭಂಗಕ್ಕೆ ಒಳಗಾಗಿರುವ ವಿಂಡೀಸ್ ತವರಿನಲ್ಲಿ ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸಲಿದೆ.
ದೇಸಿ ಟೂರ್ನಿಯಲ್ಲಿ ರನ್ ಮಳೆ ಸುರಿಸಿದ್ದ ಜೈಸ್ವಾಲ್ ಇಂದು ಮೊದಲ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಜತೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಶುಭಮ್ನ ಗಿಲ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಉಳಿದಂತೆ ಕೊಹ್ಲಿ, ರಹಾನೆ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ವೈಫಲ್ಯ ಅನುಭವಿಸುತ್ತಿರುವ ಭರತ್ಗೆ ಮತ್ತೊಂದು ಅವಕಾಶ ನೀಡಲಾಗುತ್ತೊ ಇಲ್ಲ ಇಶಾನ್ ಕಿಶ್ನಗೆ ಅವಕಾಶ ನೀಡುತ್ತಾರೋ ಅನ್ನೊ ಕುತೂಹಲ ಇದೆ.
ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆಲ್ರೌಂಡ್ ಜವಾಬ್ದಾರಿ ಹೊರಲಿದ್ದಾರೆ. ವೇಗಿಗಳ ವಿಭಾಗದಲ್ಲಿ ಸಿರಾಜ್, ಜಯದೇವ್ ಉನಾದ್ಕತ್ ಕಣಕ್ಕಿಳಿಯುವ ಪಕ್ಕಾ ಆಗಿದೆ. ಶಾರ್ದೂಲ್, ಮುಕೇಶ್ ಕುಮಾರ್ ಮತ್ತು ಸೈನಿ ನಡುವೆ ಪೈಪೋಟಿ ಇದೆ.
ಇನ್ನು ವಿಂಡೀಸ್ ತಂಡದಲ್ಲಿ ಅನುಭವಿಗಳ ಜತೆ ಹೊಸ ಮುಖಗಳಿವೆ. ರೋಚ್, ಅಲ್ಜಾರಿ ಜೋಸೆಫ್, ಹೋಲ್ಡರ್, ಗ್ಯಾಬ್ರಿಯಲ್ ಅವರನ್ನೊಳಗೊಂಡ ಬೌಲಿಂಗ್ ಪಡೆ ಭಾರತೀಯ ಬ್ಯಾಟರ್ಗಳಿಗೆ ಶಾಕ್ ಕೊಡಲು ಎದುರು ನೋಡುತ್ತಿದೆ.
ಏಷ್ಯಾ ಕಪ್ ಫೈನಲ್ ಪ್ರವೇಶಿಸಿದ ಭಾರತ ತಂಡ!!
ಮಹಿಳಾ ಏಷ್ಯಾಕಪ್ 9ನೇ ಆವೃತ್ತಿಯ ಫೈನಲ್ ಗೆ ಭಾರತೀಯ ಮಹಿಳಾ ತಂಡ ಪ್ರವೇಶಿಸಿದೆ. ಈ ಮೂಲಕ ಭಾರತ ತಂಡ ಸತತ 9ನೇ ಬಾರಿ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್...