Rahul | ರಾಹುಲ್ ಗೆ ಗಾಯ.. ಪಂತ್ ಗೆ ಪಟ್ಟ..!!
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಚುಟುಕು ಕ್ರಿಕೆಟ್ ನ ಸಮರಕ್ಕೆ ಸಜ್ಜಾಗಿದೆ.
ಕೊಲ್ಕತ್ತಾದಲ್ಲಿ ನಾಳೆಯಿಂದ ಟಿ 20 ಸರಣಿ ಆರಂಭವಾಗಿದೆ. ಆದ್ರೆ ಈ ಸರಣಿಯಿಂದ ಗಾಯದ ಸಮಸ್ಯೆಯಿಂದಾಗಿ ಕೆ.ಎಲ್ .ರಾಹುಲ್ ಹೊರಗುಳಿದಿದ್ದಾರೆ.
ಹೀಗಾಗಿ ನಾಯಕ ರೋಹಿತ್ ಶರ್ಮಾಗೆ ಡೆಪ್ಯೂಟಿಯಾಗಿ ವಿಕೆಟ್ ಕೀಪರ್ ರಿಷಬ್ ಪಂತ್ ನೇಮಕ ಆಗಿದ್ದಾರೆ.
ಈ ಬಗ್ಗೆ ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದ ಕೆ.ಎಲ್.ರಾಹುಲ್, ಎರಡನೇ ಪಂದ್ಯಕ್ಕೆ ವಾಪಸ್ ಆಗಿದ್ದರು.
ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಾಹುಲ್ ಗಾಯಗೊಂಡಿದ್ದು, ಮೂರನೇ ಏಕದಿನ ಪಂದ್ಯದಿಂದ ದೂರ ಉಳಿದಿದ್ದರು.
ಇದೀಗ ಟಿ 20 ಸರಣಿಯಿಂದಲೂ ದೂರವಾಗಿದ್ದಾರೆ. ಹೀಗಾಗಿ ಪಂತ್ ಗೆ ವೈಸ್ ಕ್ಯಾಪ್ಟನ್ ಪಟ್ಟ ಒಲಿದು ಬಂದಿದೆ.