ನವದೆಹಲಿ : ಹೆಮ್ಮಾರಿ ಕೊರೊನಾ ವೈರಸ್ ಸೋಂಕಿನ ಪಟ್ಟಿಗೆ ಮತ್ತೊಂದು ಹೊಸ ಲಕ್ಷಣ ಸೇರ್ಪಡೆಗೊಂಡಿದೆ. ಕಾಲು ಅಥವಾ ಕಾಲಿನ ಬೆರಳುಗಳಲ್ಲಿ ಉರಿಯೂತ ಕಂಡು ಬಂದರೆ ಅದು ಕೊರೊನಾ ವೈರಸ್ ನ ಲಕ್ಷಣ ಎಂದು ತಜ್ಞರು ಹೇಳಿದ್ದಾರೆ.
ಇಟಲಿಯಲ್ಲಿ ಕೆಲವು ಮಕ್ಕಳು ಮತ್ತು ಮಧ್ಯವಯಸ್ಕ ರೋಗಿಗಳ ಬೆರಳು ಮತ್ತು ಕಾಲುಗಳಲ್ಲಿ ಉರಿಯೂತ ಕಂಡ ಬಳಿಕ ಈ ಬಗ್ಗೆ ಯುರೋಪ್ ಮತ್ತು ಅಮೆರಿಕದ ಚರ್ಮರೋಗದ ತಜ್ಞರು ಅಧ್ಯಯನ ನಡೆಸಿದ್ದರು. ಈ ಅಧ್ಯಯನದಲ್ಲಿ ಉರಿಯೂತ ಕೊರೊನಾ ಲಕ್ಷಣ ಎಂದು ತಿಳಿದುಬಂದಿದೆ.
ಇಟಲಿಯಲ್ಲಿ ಕೋವಿಡ್-19 ರೋಗಿಗಳ ಹೆಚ್ಚಿನ ಸಾಂದ್ರತೆಯಿರುವ ಪ್ರದೇಶಗಳಲ್ಲಿ ಚರ್ಮರೋಗ ತಜ್ಞರು ಕಾಲು ಅಥವಾ ಕಾಲಿನ ಬೆರಳುಗಳಲ್ಲಿ ಉರಿಯೂತ ಸಮಸ್ಯೆ ಹೆಚ್ಚು ಪ್ರಚಲಿತದಲ್ಲಿ ಇರುವುದನ್ನು ಪತ್ತೆ ಮಾಡಿದ್ದಾರೆ. ಹೀಗಾಗಿ ಈ ಸ್ಥಿತಿಗೆ “ಕೋವಿಡ್ ಟೋಸ್” ಎಂದು ಅಡ್ಡ ಹೆಸರು ಇಟ್ಟಿದ್ದಾರೆ. ಅಮೆರಿಕನ್ ಅಕಾಡೆಮಿ ಆಫ್ ಡರ್ಮಾಟಾಲಜಿಸ್ಟ್ ಗೆ ಸಂಬಂಧಿಸಿದ ವೈದ್ಯರು ಕಾಲಿನ ಬೆರಳಲ್ಲಿ ಉರಿಯೂತ ಕಂಡು ಬಂದರೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ.