ಆಸ್ಪತ್ರೆಗಾಗಿ ಸ್ವಂತ ಮನೆ, ತೆಂಗಿನ ತೋಟ ದಾನ ಮಾಡಿದ್ದ ಜಿ.ಮಾದೇಗೌಡರ ಬದುಕು-ಸಾಧನೆಗಳ ಮಾಹಿತಿ

1 min read
G. Madegowda

ಆಸ್ಪತ್ರೆಗಾಗಿ ಸ್ವಂತ ಮನೆ, ತೆಂಗಿನ ತೋಟ ದಾನ ಮಾಡಿದ್ದ ಜಿ.ಮಾದೇಗೌಡರ ಬದುಕು-ಸಾಧನೆಗಳ ಮಾಹಿತಿ

ಕಾವೇರಿ ಕುವರ ಎಂದೇ ಪ್ರಖ್ಯಾತಿ ಪಡೆದಿದ್ದ ಹಿರಿಯ ರಾಜಕಾರಣಿ, ಹೋರಾಟಗಾರ ಜಿ ಮಾದೇಗೌಡರು ಶನಿವಾರ ನಮ್ಮ ನಿಮ್ಮೆಲ್ಲರನ್ನೂ ಬಿಟ್ಟು ಇಹಲೋಕ ತ್ಯೆಜಿಸಿದ್ದಾರೆ. ಅವರ ಅಗಲಿಕೆಗೆ ರಾಜಕೀಯ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಅವರ ಸುದೀರ್ಘ ಜೀವನದಲ್ಲಿ ಸಾಕಷ್ಟು ಹೋರಾಟಗಳಿವೆ. ಅವುಗಳ ಹಿನ್ನೋಟ ನಿಮಗಾಗಿ..

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗುರುದೇವರ ಹಳ್ಳಿಯಲ್ಲಿ 10-07-1928 ರಂದು ಮಾದೇಗೌಡರ ಜನನ. ತಂದೆ ಪುಟ್ಟೇಗೌಡ ತಾಯಿ ಶ್ರೀಮತಿ ಕಾಳಮ್ಮ.

ರಾಜಕೀಯ ಸಾಧನೆಯ ಹೆಜ್ಜೆ ಗುರುತುಗಳು

1938 ರಲ್ಲಿ ಶಿವಪುರ ಸತ್ಯಾಗ್ರಹ ಸಭೆಯಲ್ಲಿ ನೀರು ಕೊಡುವ ಕಾಯಕ

1942 ರಲ್ಲಿ ಕ್ವೀಟ್ ಇಂಡಿಯಾ ಚಳವಳಿ ಕರ ಪತ್ರ ವಿತರಣೆ

1958 ರಲ್ಲಿ ಮಂಡ್ಯದ ವಕೀಲಿ ವೃತ್ತಿ ಪ್ರಾರಂಭ

1959 ಮದ್ದೂರು ತಾಲೂಕು ಬೋರ್ಡಿನ ಸದಸ್ಯರು

1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ

1962, 1967, 1972, 1978, 1983, 1985ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧಿ

1980-83ರವರೆಗೆ ಗುಂಡೂರಾವ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿ ಸೇವೆ

G. Madegowda

ಕಿರುಗಾವಲು ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ವಲಸೆ.

1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿ ಗೆಲುವು

1996ರಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದ್ದಾಗ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ

1996 ನಡೆದ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕೃಷ್ಣ ವಿರುದ್ಧ ಸೋಲು

ನಂತರ 1998ರ ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್ ವಿರುದ್ಧ ಸೋಲು

ನಂತರ ಅವರು ಸಕ್ರಿಯ ರಾಜಕಾರಣದಲ್ಲಿ ಇದ್ದರೂ ಚುನಾವಣೆಗೆ ಸ್ಪರ್ಧೆ ಮಾಡಲಿಲ್ಲ.

10-06-1990 ರಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಸ್ಥಿತ್ವಕ್ಕೆ

10-06-1990 ರಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಸ್ಥಿತ್ವಕ್ಕೆ

ಇದಿಷ್ಟೆ ಅಲ್ಲದೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಜಿ.ಮಾದೇಗೌಡರು ಸಾಕಷ್ಟು ಸೇವೆ, ಸಾಧನೆಗಳನ್ನು ಮಾಡಿದ್ದಾರೆ.

1962ರಲ್ಲಿ ಕಾಳ ಮುದ್ದನ ದೊಡ್ಡಿಯಲ್ಲಿ ಪ್ರೌಢಶಾಲೆ ಪ್ರಾರಂಭ

1964-ರಿಂದ 69 ರ ವರಗೆ ಕೆ,ಎಂ.ದೊಡ್ಡಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಹೋರಾಟ.

1970 ರಲ್ಲಿ ಭಾರತಿ ಕಾಲೇಜು ಪ್ರಾರಂಭ.

1985 ರಲ್ಲಿ ಭಾರತೀಯ ಔಷಧಿ ವಿಜ್ಞಾನ (ಡಿ.ಫಾರಂ) ಕಾಲೇಜು ಪ್ರಾರಂಭ.

1986 ರಲ್ಲಿ ಭಾರತೀ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭ.

G. Madegowda

1987 ರಲ್ಲಿ ಭಾರತೀ ಎಜುಕೇಷನ್ ಟ್ರಸ್ ಬೆಳ್ಳಿ ಹಬ್ಬದ ಆಚರಣೆ.

1988 ರಲ್ಲಿ ಕಿರುಗಾವಲಿನಲ್ಲಿ ಭಾರತಿ ಕಾಲೇಜು ಶಾಖೆ.

1988 ರಲ್ಲಿ ಹನುಮಂತ ನಗರದಲ್ಲಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆರಂಭ.

1989 ರಲ್ಲಿ ಗುರುದೇವರ ಹಳ್ಳಿಯ ಸ್ವಂತ ಮನೆ ಮತ್ತು ತೆಂಗಿನ ತೋಟವನ್ನು ಸಾರ್ವಜನಿಕ ಆಸ್ಪತ್ರೆಗಾಗಿ ದಾನ.

1993- ಹನುಮಂತ ನಗರದ ಲ್ಲಿ ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನ ನಿರ್ಮಾಣ.

2003 ರಲ್ಲಿ ಹನುಂತ ನಗರದಲ್ಲಿ ಪ್ರಕೃತಿ ಆರೋಗ್ಯ ದಾಮ ಸ್ಥಾಪನೆ.

2005 ರಂದು ಮಂಡ್ಯ ನಗರದಲ್ಲಿ ಮಹಾತ್ಮಾಗಾಂಧಿ ಸ್ಮಾರಕ ಟ್ರಸ್ಟ್ ಸ್ಥಾಪನೆ

2012 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಧಾನ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd