ತಮ್ಮ ಉದ್ಯೋಗಿಗಳ ವ್ಯಾಕ್ಸಿನೇಷನ್ ಗೆ ಹಣ ಪಾವತಿಸಲಿರುವ ಇನ್ಫೋಸಿಸ್ ಮತ್ತು ಅಕ್ಸೆಂಚರ್

1 min read
Infosys and Accenture

ತಮ್ಮ ಉದ್ಯೋಗಿಗಳ ವ್ಯಾಕ್ಸಿನೇಷನ್ ಗೆ ಹಣ ಪಾವತಿಸಲಿರುವ ಇನ್ಫೋಸಿಸ್ ಮತ್ತು ಅಕ್ಸೆಂಚರ್

ಹೊಸದಿಲ್ಲಿ, ಮಾರ್ಚ್05: ಜಾಗತಿಕ ಸಾಫ್ಟ್‌ವೇರ್ ದಿಗ್ಗಜರಾದ ಇನ್ಫೋಸಿಸ್ ಮತ್ತು ಅಕ್ಸೆಂಚರ್ ಕಂಪನಿಗಳು ತಮ್ಮ ಉದ್ಯೋಗಿಗಳ ಕೊರೋನಾ ವ್ಯಾಕ್ಸಿನೇಷನ್ ಗೆ ಹಣ ನೀಡುವುದಾಗಿ ತಿಳಿಸಿದೆ.
Infosys and Accenture

ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬಕ್ಕೆ ಲಸಿಕೆ ವೆಚ್ಚವನ್ನು ನಾವು ಆರೋಗ್ಯ ಮತ್ತು ಸ್ವಾಸ್ಥ್ಯದತ್ತ ಕೇಂದ್ರೀಕರಿಸುವ ಭಾಗವಾಗಿ ಭರಿಸುತ್ತೇವೆ ಎಂದು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು ಬಿ ಪ್ರವೀಣ್ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಗರ ಮೂಲದ ಐಟಿ ಕಂಪೆನಿ ಆರೋಗ್ಯ ಸೇವೆ ಒದಗಿಸುವವರೊಂದಿಗೆ ಪಾಲುದಾರರಾಗಿ ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ ಮತ್ತು ಕಾರ್ಯವಿಧಾನಗಳ ಪ್ರಕಾರ ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಲಿದೆ.

ಯುಎಸ್ ಮೂಲದ ಅಕ್ಸೆಂಚರ್‌ ಭಾರತದ ತನ್ನ ಉದ್ಯೋಗಿಗಳಿಗೆ ಮತ್ತು ಅವರ ಅವಲಂಬಿತರಿಗೆ, ವೈದ್ಯಕೀಯ ಕಾರ್ಯಕ್ರಮದ ಭಾಗವಾಗಿರುವ ಕೊರೋನಾ ಲಸಿಕೆ ವೆಚ್ಚವನ್ನು ಪಾವತಿಸುವುದಾಗಿ ಹೇಳಿದೆ.
ನಮ್ಮ ನೌಕರರು ಮತ್ತು ಅವರ ಅವಲಂಬಿತರಿಗೆ ಲಸಿಕೆ ಹಾಕುವ ವೆಚ್ಚವನ್ನು ನಾವು ಭರಿಸುತ್ತೇವೆ. ವ್ಯಾಕ್ಸಿನೇಷನ್ ಅನ್ನು ಉತ್ತೇಜಿಸುವ ವೈಜ್ಞಾನಿಕ ಮತ್ತು ಸಾರ್ವಜನಿಕ ಆರೋಗ್ಯ ಸಲಹೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
Vaccination phase
ದೇಶಾದ್ಯಂತ ಜನವರಿ 16 ರಿಂದ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಣಿ ಯೋಧರಿಗೆ ಲಸಿಕೆ ಹಾಕುವ ಮುಖಾಂತರ ಸರ್ಕಾರ ತನ್ನ ವ್ಯಾಕ್ಸಿನೇಷನ್ ಚಾಲನೆಯನ್ನು ಚುರುಕುಗೊಳಿಸಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರಿಗೆ ಲಸಿಕೆ ಹಾಕುವ ಮೂಲಕ ಎರಡನೇ ಹಂತದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd