ಚೆನೈಗೆ ಬಿಗ್ ಶಾಕ್ – ದೀಪಕ್ ಚಾಹರ್ IPL ನಿಂದ ಹೊರಬೀಳುವ ಸಾಧ್ಯತೆ…
IPL ಆರಂಭಕ್ಕೆ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದ್ದಾರೆ. ಮೆಗಾ ಹರಾಜಿನಲ್ಲಿ 14 ಕೋಟಿ ಗೆ ಹರಾಜಾಗಿದ್ದ ದೀಪಕ್ ಚಾಹರ್ ಈ ಬಾರಿಯ ಐಪಿಎಲ್ ನ ಮೊದಲ ಕೆಲ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳುವ ಸಾಧ್ಯೆತೆ ಇದೆ.
ಐಪಿಎಲ್ ಸೀಸನ್ ಆರಂಭಕ್ಕೆ ಇನ್ನು 15 ದಿನ ಬಾಕಿ ಉಳಿದಿರುವಾಗಲೇ ಚೆನೈನ ಅತ್ಯಂತ ದುಬಾರಿ ಆಟಗಾರನ ಅಲಭ್ಯತೆಯಿಂದ ಚೆನೈ ತಂಡಕ್ಕೆ ಹಿನ್ನಡೆ ಉಂಟಾಗಿದೆ. ಈಗಾಗಲೇ ಚೆನ್ನೈ ತಂಡ ಗುಜರಾರತ್ ನ ಸೂರತ್ನಲ್ಲಿ ಅಭ್ಯಾಸವನ್ನ ಆರಂಭಿಸಿದೆ. ಆದರೆ ದೀಪಕ್ ಚಹರ್ ಟೂರ್ನಿಯಿಂದ ಹೊರಬೀಳುವ ಬಗ್ಗೆ ಆಂತಕ ಸೃಷ್ಟಿಯಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ದೀಪಕ್ ಚಹರ್ ಇಂಜುರಿಗೆ ತುತ್ತಾಗಿದ್ದರು ಬೌಲಿಂಗ್ ಮಾಡುತ್ತಿದ್ದ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಮೈದಾನದಿಂದ ಹೊರನಡೆದಿದ್ದರು, ಮುಂಬರುವ ಶ್ರೀಲಂಕಾ ವಿರುದ್ದದ ಸರಣಿಯಿಂದಲೂ ಚಾಹರ್ ವಂಚಿತರಾಗಿದ್ದಾರೆ.
ವೈದ್ಯರು ಕನಿಷ್ಠ 6 ರಿಂದ 8 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಆಟಗಾರನಿಗೆ ಸೂಚಿಸಿದ್ದಾರೆ. ಒಂದು ವೇಳೆ ವಿಶ್ರಾಂತಿಯ ಅಗತ್ಯ ಹೆಚ್ಚಾದರೆ ಚೆನ್ನೈ ಆಡುವ ಮೊದಲ ಕೆಲ ಪಂದ್ಯಗಳಿಂದ ಚಹರ್ ಅಲಭ್ಯತೆ ಕಾಡಲಿದೆ.