30 ಕ್ಕೂ ಹೆಚ್ಚು ಮಂದಿ ಮೇಲೆ ಹುಚ್ಚು ನಾಯಿಗಳ ದಾಳಿ – ಆಸ್ಪತ್ರೆಗೆ ದಾಖಲು
ಪಾದಚಾರಿಗಳ ಮೇಲೆ ಹುಚ್ಚು ನಾಯಿಗಳು ದಾಳಿ ನಡೆಸಿ 30ಕ್ಕೂ ಹೆಚ್ಚು ಮಂದಿಯನ್ನ ಕಚ್ಚಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ಹುಚ್ಚ ನಾಯಿಗಳ ದಾಳಿಯಿಂದಾಗಿ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹುಣಸೂರು ನಗರದ ಕಲ್ಪತರು ವೃತ್ತದ ಬಳಿ ನಡೆದಾಡುತ್ತಿದ್ದ ಜನರ ಮೇಲೆ ಹುಚ್ಚು ನಾಯಿಗಳು ಹಠಾತ್ತನೆ ದಾಳಿ ಮಾಡಿವೆ. ಹುಚ್ಚುನಾಯಿ ಕಡಿತಕ್ಕೆ ಒಳಗಾದ ಹಲವರು ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ಶಾಲಾ ಮಕ್ಕಳು ಸೇರಿದಂತೆ 18 ಮಂದಿ ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃದ್ಧ ಮಹಿಳೆ ಸೇರಿದಂತೆ 9 ಮಂದಿಯನ್ನ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಚ್ಚು ನಾಯಿಗಳ ದಾಳಿಂದ ಭಯ ಭೀತರಾಗಿರುವ ಜನರು ರಸ್ತೆ ಮೇಲೆ ನಡೆದಾಡಲು ಭಯಬೀತರಾಗಿದ್ದಾರೆ. ತಕ್ಷಣವೇ ನಾಯಿಯನ್ನ ಹಿಡಿಯುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ.
Insane dogs attacks on more than 30 people – hospitalized