Instagram : Shocking : ಇನ್ಮುಂದೆ ಇನ್ಸ್ಟಾಗ್ರಾಮ್ ಬಳಕೆಗೆ ದುಡ್ಡು ಕೊಡಲೇಬೇಕು..!!!
ಪ್ರಸ್ತುತ ಸೋಷಿಯಲ್ ಮೀಡಿಯಾದೇ ಯುವ… ಯಾರು ನೋಡಿದ್ರೂ ಫೇಸ್ ಬುಕ್ ಇನ್ಸ್ಟಾಗ್ರಾಮ್ , ವಾಟ್ಸಾಪ್ , ಟ್ವಿಟ್ಟರ್ , ಯೂಟ್ಯೂಬ್ ಹೀಗೆ ಸೋಷಿಯಲ್ ಮೀಡಿಯಾಗೆ ಅಡಿಕ್ಟ್ ಆಗಿರೋದೇ ಹೆಚ್ಚು.. ಅದ್ರಲ್ಲೂ ಇನ್ಸ್ಟಾಗ್ರಾಮ್ ಕ್ರೇಜ್ ಸ್ವಲ್ಪ ಹೆಚ್ಚೇ ಇದೆ.. ಬಳಕೆಯೂ ಹೆಚ್ಚು.. ವಿಡಿಯೋಗಳ , ಫೋಟೋಗಳನ್ನ ಶೇರ್ ಮಾಡ್ತಾ ಅನೇಕರು ಜನಪ್ರಿಯತೆ ಗಳಿಸಿದ್ದಾರೆ.. ಅದ್ರಲ್ಲೂ ರೀಲ್ ಗಳಿಂದ ಅನೇಕರು ಪಾಪ್ಯುಲರ್ ಆಗಿದ್ದಾರೆ.. ಆದ್ರೀಗ ಇನ್ಸ್ಟಾಗ್ರಾಮ್ ಲವರ್ ಗಳಿಗೆ ಬಿಗ್ ಶಾಕ್ ಸಿಕ್ಕಿದೆ..
ಇನ್ಮುಂದೆ ಇನ್ಸ್ಟಾಗ್ರಾಮ್ ನಲ್ಲಿ ಕೆಲ ಕಂಟೆಂಟ್ ಗೆ ದುಡ್ಡು ಕೊಡಬೇಕು.. ಹೌದು ಫೋಟೋ , ವಿಡಿಯೋ , ರೀಲ್ ಗಳನ್ನ ನೋಡುವುದಕ್ಕೆ ದುಡ್ಡು ಪಾವತಿಸುವ ಹಾಗೇನಿಲ್ಲ.. ಆದ್ರೆ ಕೆಲ ಕಂಟೆಂಟ್ ಗಳು ಫ್ರೀ ಇರಲ್ಲ.. ದುಡ್ಡು ಕೊಟ್ಟು ನೋಬೇಕಾಗುತ್ತದೆ.. ಇನ್ ಸ್ಟಾಗ್ರಾಂ ಹೊಸದಾಗಿ ಮೂರು ಸಬ್ ಸ್ಕ್ರೈಬರ್ ಮಾದರಿಗಳನ್ನು ಪರಿಚಯಿಸುತ್ತಿದೆ. ಸಬ್ ಸ್ಕ್ರೈಬರ್ ಲೈವ್, ಸಬ್ ಸ್ಕ್ರೈಬರ್ ಸ್ಟೋರಿಸ್, ಸಬ್ ಸ್ಕ್ರೈಬರ್ ಬ್ಯಾಡ್ಜಸ್ ಎಂಬ ಮೂರು ಮಾದರಿಗಳನ್ನು ಪರಿಚಯಿಸಲಾಗುತ್ತಿದೆ. ಈ ಮೂರೂ ವಿಭಾಗದಲ್ಲಿ ಹಂಚಿಕೊಂಡ ಕಂಟೆಂಟ್ ಅದು ವಿಡಿಯೋ ಇರಬಹುದು , ಫೋಟೋಗಳು ಅಥವ ಲೈವ್ ಇರಬಹುದು ಅವುಗಳನ್ನ ನೋಡಬಹುದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇನ್ ಸ್ಟಾಗ್ರಾಂ CEO ಆಡಮ್ ಮೊಸ್ಸೇರಿ, ಸಬ್‌ಸ್ಕ್ರೈಬರ್ ಯೋಜನೆ ಮೂಲಕ ಖಾತೆದಾರರು, ಅಥವಾ ಕಂಟೆಂಟ್ ಕ್ರಿಯೇಟರ್ ಗಳು ತಮ್ಮ ಫಾಲೋವರ್ ಗಳ ಜೊತೆಗೆ ಇನ್ನಷ್ಟು ಆತ್ಮೀಯ ಸಂಪರ್ಕವನ್ನು ಹೊಂದಲು ಸಾಧ್ಯ. ಜೊತೆಗೆ ಕಂಟೆಂಟ್ ಕ್ರಿಯೇಟರ್ ಗಳು ತಮ್ಮ ಮಾಸಿಕ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಇದು ನೆರವಾಗಲಿದೆ ಎಂದಿದ್ದಾರೆ. ಪ್ರಸ್ತುತ ಇನ್ ಸ್ಟಾಗ್ರಾಂ ಮೂಲಕ ಕಂಟೆಂಟ್ ಕ್ರಿಯೇಟರ್ ಗಳು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತಿಲ್ಲ. ಸಬ್ ಸ್ಕ್ರಿಪ್ಷನ್ ಯೋಜನೆ ಆರಂಭವಾದರೆ ಸಣ್ಣ ಕಂಟೆಂಟ್ ಕ್ರಿಯೇಟರ್‌ಗಳು ಹಣ ಮಾಡಬಹುದಾಗಿದೆ.
instagram-shocking – users must pay to watch some of the content