ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಪಮಾನ

1 min read
Mangalore Saaksha tv

ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಪಮಾನ

ಮಂಗಳೂರು: ತುಳುನಾಡಿನ ಜನಕ್ಕೆ ಕೊರಗಜ್ಜ ಆರಾಧ್ಯ ದೈವವಾಗಿದ್ದಾರೆ. ಅನಾದಿಕಾಲದಿಂದಲು ಪೂಜಿಸಿಕೊಂಡು ಬರುತ್ತಿದ್ದು, ಆದರೆ ಕೊರಗಜ್ಜನಿಗೆ ಅವಮಾನ ಮಾಡಿದ ಘಟನೆಯೊಂದು ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಮದುವೆಯ ದಿನ ಮದುಮಗ ಕೊರಗಜ್ಜನ ವೇಷಭೂಷಣ ಧರಿಸಿ ಕುಣಿದಿದ್ದಾನೆ.

ಅಪಮಾನ ಮಾಡಿದ ಯುವಕ ಉಪ್ಪಳದವನಾಗಿದ್ದು, ಇತನ ಜೊತೆ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ‌ ಮದುವೆ ನಿಶ್ಚಯಿಸಲಾಗಿತ್ತು. ಹಾಗಾಗಿ ವಧುವಿನ‌ ಮನೆಗೆ ರಾತ್ರಿ ವರ ಮತ್ತು ಆತನ ಸ್ನೇಹಿತ ಬಳಗ ಆಗಮಿಸಿತ್ತು. ಈ ಸಮಯದಲ್ಲಿ  ತಲೆಗೆ ಅಡಿಕೆ ಹಾಳೆ ಟೋಪಿ,ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ಕೊರಗಜ್ಜನ ವೇಷ ಭೂಷಣ ಧರಿಸಿಕೊಂಡು ಮದುಮಗ ಬಂದಿದ್ದಾರೆ.

ವಧುವಿನ ಮನೆ ಹತ್ತಿರ ಬರುತ್ತಿದ್ದಂತೆ ಹಾಡು ಹೇಳಿ ಕುಣಿಯುತ್ತಾ ಬಂದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು  ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ಹುಚ್ಚಾಟ ಪ್ರದರ್ಶಿಸಿದವರ ವಿರುದ್ದ ಕಠೀಣ ಕಾನೂನು ಕ್ರಮ ಜರುಗಿಸುವಂತೆ ಆಕ್ರೋಶ ವ್ಯಕ್ತಿಪಡಿಸಿದ ಭಕ್ತರು. ಘಟನೆಯು ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd