ನವದೆಹಲಿ: ಜಾಗತಿಕ ಟೆಲಿಕಾಂ ಸಂಸ್ಥೆಗಳು ಭಾರತದ ಜಿಯೋ ಮಾದರಿಯನ್ನು ಅನುಸರಿಸಬೇಕು ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಅಮೆರಿಕಾದ ಉನ್ನತ ಸೈಬರ್ ರಾಜತಾಂತ್ರಿಕರು ಜಾಗತಿಕ ಟೆಲಿಕಾಂ ಆಪರೇಟರ್ಗಳನ್ನು ಸ್ವಂತವಾಗಿ ಅಭಿವೃದ್ಧಿಪಡಿಸಿದ 5 ಜಿ ಪರಿಹಾರಗಳನ್ನು ಅನ್ವೇಷಿಸಲು ವಿಶ್ವಾಸಾರ್ಹ ಮಾರಾಟಗಾರರನ್ನು ಮಾತ್ರ ಬಳಸುವ ರಿಲಯನ್ಸ್ ಜಿಯೋ ತಂತ್ರಗಾರಿಕೆಯನ್ನೇ ಅನುಸರಿಸಬೇಕೆಂದು ತಿಳಿಸಿದ್ದಾರೆ. ಇಡೀ ಜಗತ್ತು ಈಗ 5 ಜಿ ನೆಟ್ವರ್ಕ್ ಬಗ್ಗೆ ಗಮನಹರಿಸಿದ್ದು, ಚೀನಾದ ಟೆಲಿಕಾಂ ಉಪಕರಣಗಳ ಮೇಲೆ ಅವಲಂಬಿಸದೇ 5 ಜಿ ನೆಟ್ವರ್ಕ್ ಗುರಿ ಸಾಧಿಸುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಿಂತನೆಗಳು ನಡೆಯುತ್ತಿವೆ.
ಜಿಯೋ ಸಂಸ್ಥೆಯ ಇತ್ತೀಚಿನ ನಡೆಗಳನ್ನು ವಿಶ್ವದ ದೊಡ್ಡಣ್ಣನೇ ಜಗತ್ತಿಗೆ ಮಾದರಿಯೆಂದು ಅಭಿಪ್ರಾಯಪಟ್ಟಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. 5 ಜಿ ಗಾಗಿ ಹುವಾಯಿ ಸೇರಿದಂತೆ ಚೀನಾದ ವಿಶ್ವಾಸಾರ್ಹವಲ್ಲದ ಟೆಲಿಕಾಂ ಉಪಕರಣಗಳ ಸಂಸ್ಥೆಗಳನ್ನು ಅವಲಂಬಿತವಾಗುವ ಬದಲಿಗೆ ಜಿಯೋ ಮಾದರಿಯಲ್ಲಿ ದೇಶೀಯವಾಗಿ 5 ಜಿ ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಯೋ ಮಾದರಿಯನ್ನು ಅನುಸರಿಸಬೇಕೆಂದು ಎಂದು ಸೈಬರ್ ರಾಯಭಾರಿ ರಾಬರ್ಟ್ ಎಲ್. ಸ್ಟ್ರೇಯರ್ ಅಭಿಪ್ರಾಯಪಟ್ಟಿದ್ದಾರೆ.