ವಿದ್ಯುತ್ ಕೇಬಲ್ ಮೂಲಕ ಇಂಟರ್ ನೆಟ್ ಸೇವೆ – ಇಂಟೆಲ್ ಇಂಡಿಯಾದ ಹೊಸ ಅವಿಷ್ಕಾರ
ಇಂಟೆಲ್ ಇಂಡಿಯಾ ಕಂಪನಿ ಹೊಸದೊಂದು ಐಡಿಯಾದೊಂದಿಗೆ ಬಂದಿದ್ದು… ಅಪ್ಟಿಕಲ್ ಫೈಬರ್ ಬದಲು ವಿಧ್ಯುತ್ ವೈರ್ ಗಳ ಮೂಲಕ ಇಂಟರ್ ನೆಟ್ ತಲುಪಿಸುವ ಸಾಹಸವನ್ನ ಮಾಡುತ್ತಿದೆ. ಇದಕ್ಕೆ WOW (ವೈಯರಲೆಸ್ ಓವರ್ ವೈಯರ್) ಎಂದು ಹೆಸರಿಡಲಾಗಿದೆ. ಈ ಬಗ್ಗೆ ಇಂಟೆಲ್ ಇಂಡಿಯಾದ ಮುಖ್ಯಸ್ಥೆ ನಿವೃತ್ತಿ ರೈ ಮಾಹಿತಿ ನೀಡಿದ್ದಾರೆ.
ಎಲ್ಲಾ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಹಾಕುವುದು ದುಬಾರಿ ಮತ್ತು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚಿನ ಹಳ್ಳಿಗಳು ವಿದ್ಯುತ್ ಸಂಪರ್ಕಗಳನ್ನು ಹೊಂದಿರುವುದರಿಂದ, ಈ ತಂತ್ರಜ್ಞಾನವು ಕಾರ್ಯಸಾಧ್ಯವೆಂದು ಸಾಬೀತಾದರೆ ದೂರದ ಪ್ರದೇಶಗಳಿಗೆ ಇಂಟರ್ನೆಟ್ ಲಭ್ಯವಾಗುವಂತೆ ಮಾಡುವಲ್ಲಿ ಇದು ದೊಡ್ಡ ಕ್ರಾಂತಿಯನ್ನ ತರಲಿದೆ.
ಈ ಕುರಿತು ಮಾಹಿತಿ ನೀಡಿರುವ ಇಂಟೆಲ್ ಇಂಡಿಯಾ ಮುಖ್ಯಸ್ಥೆ ನಿವೃತಿ ರೈ, ಎಲ್ಲೆಲ್ಲಿಗೆ ವಿದ್ಯುತ್ ತಲುಪುತ್ತದೆಯೋ ಅಲ್ಲಿಗೆಲ್ಲ ಇಂಟರ್ನೆಟ್ ತಲುಪಿಸಲು ಸಾಧ್ಯವಾಗಲಿದೆ. ದೇಶದ 6 ಲಕ್ಷ ಹಳ್ಳಿಗಳಿಗೆ ಇಂಟರ್ನೆಟ್ ಲಭಿಸಿದರೆ ಇಡೀ ದೇಶ ಜಾಗತಿಕ ಮಾರುಕಟ್ಟೆಯ ಸಂಪರ್ಕಕ್ಕೆ ಬರಲಿದೆ. ಅದರಿಂದ ಭಾರತ ಬೆಳೆಯುತ್ತದೆ, ಜೊತೆಗೇ ನಾವೂ ಬೆಳೆಯುತ್ತೇವೆ’ ಎಂದು ಹೇಳಿದ್ದಾರೆ.








