ಟ್ಯಾರೋ ರೀಡರ್ ಶೋಭಾ.ಕೆ ಅವರ ಬಗೆಗಿನ ಒಂದಷ್ಟು ಮಾಹಿತಿ..!
ಶಾಂತತೆ , ಸಕಾರಾತ್ಮಕ ಚಿಂತನೆಯಿಂದಲೇ ಗ್ರಾಹಕರ ಮನಗೆದ್ದಿರುವ ವೃತ್ತಿಪರ ಟ್ಯಾರೋ ರೀಡರ್, ಜ್ಯೋತಿಷಿ ಮತ್ತು ಜೀವನ ತರಬೇತುದಾರರಾಗಿರುವ ಶೋಭಾ ಕೆ ಅವರು ಇತ್ತೀಚೆಗೆ ತಮ್ಮ ಬಗ್ಗೆ ಮಾತನಾಡಿದ್ದು, ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಇವರು ಕಳೆದ 5 ವರ್ಷಗಳಿಂದ ಟ್ಯಾರೋ ಓದುವಿಕೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಇವರ ಗ್ರಾಹಕರ ಪೈಕಿ ಹಲವರು ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ಉದ್ಯಮಿಗಳು, ರಾಜಕಾರಣಿಗಳು ಇದ್ದಾರೆ. ಹೀಗೆ ಅನೇಕ ಕ್ಷೇತ್ರದ ಉನ್ನತ ಹುದ್ದಿಗಳು ಸ್ಥಾನದಲ್ಲಿರುವ ದೊಡ್ಡ ದೊಡ್ಡ ಗ್ರಾಹಕರನ್ನು ಅವರು ಹೊಂದಿದ್ದಾರೆ.
ಅವಳಿ ಹೆಣ್ಣುಮಕ್ಕಳನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಂದ ತಾಯಿ: ಕಾರಣ..!
ಶೋಭಾ ಅವರು ಕೆಲ ಪ್ರಶ್ನೆಗಳಿಗೆ ಉತ್ತರಿಸಿರುವುದು ಹೀಗೆ..!
1. ನಿಮ್ಮ ಅರ್ಹತೆ ಏನು?
Business Graduation
2. ನಿಮ್ಮ ಸ್ಫೂರ್ತಿ.
ನನ್ನ ಸ್ನೇಹಿತ : ಸದಾ ನನ್ನ ಜೊತೆಯಲ್ಲಿದ್ದು, ಇದನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದ ಸ್ನೇಹಿತ.
3. ನೀವು ಯಾವ ವರ್ಷ ಟ್ಯಾರೋ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ್ರಿ..?
2018ರಲ್ಲಿ : ಟ್ಯಾರೋ
2012 ರಲ್ಲಿ ಜ್ಯೋತಿಷ್ಯ ಎನ್ ಆಧ್ಯಾತ್ಮಿಕ ಮಾರ್ಗದರ್ಶನ
ಸ್ನೇಹ ನಿರಾಕರಿಸಿದ ಮಹಳಿಗೆ ಎಂಥಾ ಗತಿ ತಂದ ನೋಡಿ ಈ ಕಿರಾತಕ..!
4. ನಿಮಗೆ ಟ್ಯಾರೋ ವಿದ್ಯಾಭ್ಯಾಸ, ಜ್ಯೋತಿಷ್ಯ ಮತ್ತು ಜೀವನ ತರಬೇತಿಯನ್ನು ಆಯ್ಕೆ ಮಾಡಬೇಕೆಂದು ಅನಿಸಿದ್ದಕ್ಕೆ ಕಾರಣವೇನು..?
ನಮ್ಮ ಪೋಷಕರು… ನಮ್ಮ ತಂದೆ ತಾಯಿ ಜ್ಯೋತಿಷಿಗಳನ್ನ ಭೇಟಿ ಮಾಡುತ್ತಿದ್ದದ್ದು, ಪೂಜೆ ಪುನಸ್ಕಾರಗಳಿಗೆ ಜ್ಯೋತಿಷಿಗಳಿಗೆ ಹಣವನ್ನ ಸುರಿಯುತ್ತಿದ್ದದ್ದು, ನೋಡಿಕೊಂಡೇ ನಾನು ಬೆಳೆದಿದ್ದು, ಜ್ಯೋತಿಷಿಗಳ ಮಾರ್ಗದರ್ಶನಗಳನ್ನ ನಮ್ಮ ಪೋಷಕರು ಪಾಲಿಸುತ್ತಿದ್ದರು. ಇದು ನನ್ನ ಆಸಕ್ತಿ ಹೆಚ್ಚಿಸಿತು. ಈ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಬೇಕು ಅನ್ನಿಸಿತು. ಹೀಗೆ ಈ ಬಗ್ಗೆ ಹೆಚ್ಚು ಹೆಚ್ಚು ತಿಳಿಯಬೇಕು ಅನ್ನೋ ಹಂಬಲದಲ್ಲಿ ಈ ವಿಚಾರದ ಬಗ್ಗೆ ವಿದ್ಯಾಭ್ಯಾಸ ಮಾಡೋದನ್ನ ತುಂಬ ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಿದೆ.
10 ವರ್ಷದ ಬಾಲಕಿಯ ಸಾಧನೆಗೆ ನೀವೂ ಸಹ ನಿಬ್ಬೆರಗಾಗ್ತಿರಾ..! ವಿಡಿಯೋ ವೈರಲ್..!
5. ಜನರ ಜೊತೆಗೆ ಸಂವಹನ ಮಾಡುವುದರಿಂದ ನೀವು ಕಲಿತದ್ದು ಏನು..?
ಹೌದು… ಇದರಿಂದ ನಾನು ತುಂಬ ವಿಚಾರಗಳನ್ನ ಕಲಿತಿದ್ದೇನೆ. ವಿಭಿನ್ನ ಜನರ , ವಿಭಿನ್ನ ವಿಚಾರದಾರೆಗಳು, ವಿಚಾರಲಹರಿಗಳು, ಆಲೋಚನೆಗಳು , ತತ್ವಗಳನ್ನ ಅರಿತೆ. ಪ್ರತಿಯೊಬ್ಬರು ಸಹ ಅವರದ್ದೇ ಆದ ವಿಚಾರಧಾರೆ ಹೊಂದಿರುತ್ತಾರೆ. ಎಲ್ಲರ ಮನಸ್ಸುಗಳು ಬೇರೆ ಬೇರೆ ರೀತಿ ಇರುತ್ತೆ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ಸಂವಹನದಿಂದಾಗಿ ನಾನು ಬೇರೆಯವರ ಬಗ್ಗೆಯೂ ಅರಿತೆ. ನನ್ನನ್ನೂ ನಾನು ಅರಿತುಕೊಂಡೆ.
ತುಂಬ ಜನರು ತುಂಬಾ ಪ್ರತಿಭೆಗಳನ್ನ ಹೊಂದಿರುತ್ತಾರೆ ಅನದ್ನೋದನ್ನೂ ನಾನು ತಿಳಿದುಕೊಂಡೆ. ಆದ್ರೆ ಅದು ಅವರಿಗೆ ತಿಳಿದಿರೋದಿಲ್ಲ. ಇನ್ನೂ ಸಂವಹನದಿಂದ ನನ್ನ ಆತ್ಮಸ್ಥೈರ್ಯ ಮತ್ತಷ್ಟು ಬಲವಾಗಿದೆ. ಜೀವನದ ಎಲ್ಲಾ ಬಾಗದಲ್ಲೂ ವಿಚಾರಗಳಲ್ಲೂ ಸಕಾರರಾತ್ಮಕವಾಗಿ ಯೋಚಿಸುವ ಶಕ್ತಿಯನ್ನ ನಾನು ಪಡೆದಿದಿದ್ದೇನೆ.
ಪ್ರೊಪೋಸ್ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಜೋಡಿ; ಮುಂದೇನಾಯ್ತ ನೋಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








