VIRAT ಕೊಹ್ಲಿ ಕೈಯಲ್ಲಿರುವ ಟ್ಯಾಟ್ಯೂಗಳ ನಿಮಗೆಷ್ಟು ಗೊತ್ತು..
ವಿರಾಟ್ ಕೊಹ್ಲಿ… ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್.. ಸ್ಟಾರ್ ಕ್ರಿಕೆಟರ್.. ಇದು ಮಾತ್ರವಲ್ಲದೇ ಸಚಿನ್ ತೆಂಡ್ಯೂಲ್ಕರ್ ನಂತರ ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾ ಕಿಂಗ್ ಆಗಿ ವಿರಾಟ್ ಕೊಹ್ಲಿ ಎಷ್ಟೋ ಸಾಧನೆಗಳನ್ನು ಮಾಡಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ತುಂಬಾ ಫುಲ್ ಫಿಟ್ ಆಗಿರುವ ವಿರಾಟ್ ಕೊಹ್ಲಿ ಮೈದಾನದಲ್ಲಿ ಅಷ್ಟೇ ಅಗ್ರೆಸಿವ್ ಆಗಿದ್ದಾರೆ. ಅಂತಾರಾಷ್ಟ್ರೀಯಕ ಕ್ರಿಕೆಟ್ ನಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಸಾಧಿಸಿರುವ ಕೊಹ್ಲಿ ಈಗಿನ ಯೂತ್ ಐಕಾನ್.
ಇನ್ನೂ ಅಷ್ಟು ಪಾಪುಲಾರಿಟಿ ಸಾಧಿಸಿರುವ ಕೊಹ್ಲಿ ಕೈ ಮೇಲೆ 11 ಟ್ಯಾಟ್ಯೂಗಳ ಬಗ್ಗೆ ನಿಮಗೆಷ್ಟು ಗೊತ್ತು..? ಕೊಹ್ಲಿ ಎರಡೂ ಕೈಗಳ ಮೇಲೆ 11 ಟ್ಯಾಟ್ಯೂಗಳಿವೆ. ಇದರಲ್ಲಿ ಒಂದೊಂದು ಟ್ಯಾಟ್ಯೂಗೂ ಒಂದೊಂದು ಅರ್ಥವಿರುತ್ತದೆ.
ಮೊದಲ ಟ್ಯಾಟ್ಯೂ ಕೊಹ್ಲಿ ಅವರ ತಂದೆ ತಾಯಿಯವರದ್ದು. ಸರೋಜ್,ಪ್ರೇಮ್ ಎಂದು ಕೊಹ್ಲಿ ಎಡಗೈ ಭುಜದ ಭಾಗದಲ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿ 18 ವರ್ಷದಲ್ಲಿದ್ದಾಗ ತಂದೆ ಕೊನೆಯುಸಿರೆಳೆದಿದ್ದರು. ತಂದೆ ಅಂದ್ರೆ ವಿರಾಟ್ ಗೆ ತುಂಬಾ ಪ್ರೀತಿ, ಅವರ ನೆನಪಿನಲ್ಲಿ ವಿರಾಟ್ ಟ್ಯಾಟ್ಯೂ ಹಾಕಿಸಿಕೊಂಡಿದ್ದಾರೆ. ಮಾತಿನಲ್ಲಿ ಹೇಳಲಾಗದ ಒಂದು ಕನೆಕ್ಷನ್ ನನ್ನ ತಾಯಿ ತಂದೆ ಜೊತೆ ಇದೆ. ಅದನ್ನು ಅನುಭವಿಸಲು ಅವರ ಹೆಸರನ್ನ ಟ್ಯಾಟ್ಯೂ ಹಾಕಿಸಿಕೊಂಡಿದ್ದೇನೆ. ನಾನು ಸಾಯುವವರೆಗೂ ಅವರ ಹೆಸರುಗಳು ನನ್ನ ಕೈ ಮೇಲೆ ಶಾಶ್ವತವಾಗಿ ಇರಬೇಕು ಎಂದು ಒಂದು ಸಂದರ್ಶನದಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ.

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಟ್ಯಾಟ್ಯೂ ಹಾಕಿಸಿಕೊಂಡಿದ್ದರು. 2008 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು. ಅವರ ಕ್ಯಾಪ್ ನಂಬರ್ 175. ಇನ್ನು 2011 ರಲ್ಲಿ269ನೇ ಆಟಗಾರನಾಗಿ ವಿರಾಟ್ ಕೊಹ್ಲಿಟೆಸ್ಟ್ ಗೆ ಎಂಟ್ರಿ ಕೊಟ್ಟರು. ಏಕದಿನ, ಟೆಸ್ಟ್ ಗೆ ಎಂಟ್ರಿ ಕೊಟ್ಟ ನೆನಪಿಗಾಗಿ 175, 269 ನಂಬರ್ ಗಳನ್ನು ಕೈ ಮೇಲೆ ಹಾಕಿಸಿಕೊಂಡಿದ್ದಾರೆ.

ಕೊಹ್ಲಿ ಮೂರನೇ ಟ್ಯಾಟ್ಯೂ ದೇವರ ಕಣ್ಣಿನಂತೆ ಇರುತ್ತದೆ. ದೇವರು ಆ ಕಣ್ಣನಿಂದ ತನ್ನನ್ನ ನೋಡುತ್ತಿರುತ್ತಾನೆ.. ಆ ಟ್ಯಾಟ್ಯೂ ಸಾರಾಂಶ ಏನಂದರೇ ಒಬ್ಬ ಮನುಷ್ಯ ಜೀವನವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ನಾನು ಏನು ಮಾಡಬೇಕು ಅನ್ನೋದನ್ನ ತೋರಿಸುತ್ತದೆ ಎಂದು ಕೊಹ್ಲಿ ಒಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.

ಓಂಕಾರ ಶಬ್ದ ಕೇಳಿದ್ರೆ ಭಕ್ತರು ಪುಲಕಿತಗೊಳ್ಳುತ್ತಾರೆ. ನನ್ನನ್ನು ಕೂಡ ಓಂ ಅನ್ನೋದು ಅಷ್ಟೇ ಆಕರ್ಷಿಸುತ್ತದೆ. ವಿಶ್ವದಲ್ಲಿ ಓಂ ಅನ್ನೋದಕ್ಕೆ ತುಂಬಾ ಅರ್ಥಗಳಿವೆ ಅನ್ನೋದು ವಿರಾಟ್ ನಂಬಿಕೆ. ಅಷ್ಟೆ ಅಲ್ಲದೇ ಓಂ ಅಂತಾ ಟ್ಯಾಟ್ಯೂ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಈ ಟ್ಯಾಟ್ಯೂ ಕೊಹ್ಲಿಯನ್ನ ನೀನು ಕೂಡ ಸಾಮಾನ್ಯ ಎಂದು ಗುರುತು ಮಾಡುತ್ತಂತೆ.

ವಿರಾಟ್ ಕೊಹ್ಲಿ ರಾಶಿ ವೃಶ್ಚಿಕ.. ಈ ರಾಶಿಯಲ್ಲಿ ಹುಟ್ಟಿದವರು ಜೀವನದಲ್ಲಿ ತುಂಬಾ ಸ್ಟ್ರಾಂಗ್ ಆಗಿ ಇರುತ್ತಾರೆ ಅಂತೆ. ಎಂತಹ ಚಾಲೆಂಜ್ ಅನ್ನು ಕೂಡ ಸಮರ್ಥವಾಗಿ ಎದುರಿಸುತ್ತಾರೆ ಅನ್ನೋದು ವಿರಾಟ್ ನಂಬಿಕೆ. ಹೀಗಾಗಿಯೇ ವೃಶ್ಚಿಕ ರಾಶಿಯ ಇಂಗ್ಲೀಷ್ ಪದ ಸ್ಕಾರ್ಪಿಯೋ ಅನ್ನೋದನ್ನ ಟ್ಯಾಟ್ಯೂ ಹಾಕಿಸಿಕೊಂಡಿದ್ದಾರೆ.

ಕೊಹ್ಲಿ ಕೈಮೇಲೆ ಇರುವ ಆರನೇ ಟ್ಯಾಟ್ಯೂ ಜಪಾನಿಸ್ ಸಮುರಾಯ್. ಜಪಾನಿಸ್ ಸಮುರಾಯ್ ಅಂದ್ರೆ ಒಬ್ಬ ಮಿಲಿಟರಿ ಅಧಿಕಾರಿ. ಇವರು ಒಂದು ಯುದ್ಧದ ನಂತರ ಮತ್ತೊಂದು ಯುದ್ಧಕ್ಕೆ ರೆಡಿಯಾಗಿರುತ್ತಾರೆ. ಆದ್ರೆ ಈ ಯುದ್ಧಕ್ಕೆ ಹೋಗುವಾಗ ಏಳೂ ಧರ್ಮಗಳನ್ನು ಪಾಲಿಸುತ್ತಾರೆ. ಅವು ನ್ಯಾಯ, ಧೈರ್ಯ, ಪ್ರಾಮಾಣಿಕತೆ, ಹಿಚ್ಛಾಶಕ್ತಿ, ಪರೋಪಕಾರ, ಮರ್ಯಾದೆ.. ಇವುಗಳನ್ನು ತಮ್ಮ ಜೀವನದಲ್ಲಿ ಇರುವಂತೆ ನೋಡಿಕೊಳ್ಳಲು ಸಮುರಾಯ್ ಟ್ಯಾಟ್ಯೂ ಹಾಕಿಸಿಕೊಂಡಿರುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿ ಬೆಳಗ್ಗೆ ಎದ್ದ ಕೂಡಲೇ ಹೇಳುವ ಪದ ಜಪನಿಸ್ ಸಮುರಾಯ್.

ವಿರಾಟ್ ಕೊಹ್ಲಿಗೆ ಶಿವ ಎಂದರೇ ತುಂಬಾ ಇಷ್ಟ. ಯಾವುದೇ ಕಷ್ಟ ಬಂದರೂ ವಿರಾಟ್ ಕೊಹ್ಲಿ ಶಿವನನ್ನು ನೆನಪಿಸಿಕೊಳ್ಳುತ್ತಾರಂತೆ. ಅದಕ್ಕಾಗಿಯೇ ಅವರು ಶಿವನ ಟ್ಯಾಟ್ಯೂ ಹಾಕಿಸಿಕೊಂಡಿದ್ದಾರಂತೆ. ಇವು ಮಾತ್ರವಲ್ಲದೇ ಕೊಹ್ಲಿ ಕೈಗಳ ಮೇಲೆ ಮುನಾಸ್ಟ್ರಿ, ಟ್ರೈಬಲ್ ಆರ್ಟ್ ಅಂದ್ರೆ ತನ್ನ ಮೇಲೆ ತನಗೆ ನಂಭಿಕೆ ಟ್ಯಾಟ್ಯೂಗಳಿವೆ.









