ಪ್ರಭಾಸ್ ರಾಧೆ ಶ್ಯಾಮ್ ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ
ಜುಲೈ 30 ಕ್ಕೆ ರಿಲೀಸ್ ಆಗಲಿರುವ ಪ್ರಭಾಸ್ ಅಭಿನಯದ ಬಿಗ್ ಬಜೆಟ್ ಬಹುನಿರೀಕ್ಷೆಯ ಸಿನಿಮಾ ರಾಧೆ ಶ್ಯಾಮ್ ಗಾಗಿ ಅಭಿಮಾನಿಗಳು ಕ್ಯೂರಿಯಾಸಿಟಿಯಿಂದ ಕಾಯ್ತಾಯಿದ್ದಾರೆ. ಈ ಸಿನಿಮಾದಲ್ಲಿ ಮಾಸ್ ಹೀರೋ ಪ್ರಬಾಸ್ ಕಂಪ್ಲೀಟ್ ಆಗಿ ಲವರ್ ಬಾಯ್ ಆಗಿ ದರ್ಶನ ನೀಡಲಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ಒಂದೇ ಒಂದು ಫೈಟ್ ಸೀನ್ಸ್ ಕೂಡ ಇರೋದಿಲ್ಲ. ಬದಲಾವಿ ಪಕ್ಕಾ ಲವ್ ಸ್ಟೋರಿ ಆಧಾರಿತ ಸಿನಿಮಾಗಿರಲಿದೆ ಎನ್ನಲಾಗ್ತಿದೆ.
ಆದ್ರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಿರುವ ವಿಚಾರ ಅಂದ್ರೆ ಪ್ರಬಾಸ್ ಗೆ ಪೂಜಾ ಹೆಗ್ಡೆಯ ಲವ್ ಸ್ಟೋರಿ ಹೇಗೆ ಶುರುವಾಗಬಹುದು ಅನ್ನೋದು.. ನೆಟ್ಟಿಗರ ಚರ್ಚೆಗಳ ಪ್ರಕಾರ ಪೂಜಾ ಹೆಗ್ಡೆ ಪ್ರೇರಣಾ ಎಮಬ ಪಾತ್ರದಲ್ಲಿ ಸಿನಿಮಾದಲ್ಲಿ ಮೆಡಿಕಲ್ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಅಪಗಾತದಲ್ಲಿ ಗಾಯಗೊಂಡಿರುವ ಒಂದು ಕೇಸ್ ಬರುತ್ತೆ. ಹೀಗೆ ಅಪಗಾತಕ್ಕೆ ಒಳಗಾಗಿರುವುದು ಬೇರ್ಯಾರು ಅಲ್ಲ ಖುದ್ದು ಪ್ರಬಾಸ್ ಅಂದ್ರೆ ಸಿನಿಮಾದಲ್ಲಿ ವಿಕ್ರಮಾದಿತ್ಯ.
ಆಗ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಗೆ ಲವ್ @ ಫಸ್ಟ್ ಸೈಟ್ ಆಗಲಿದೆ ಅಂತ ಚರ್ಚೆಗಳಾಗುತ್ತಿವೆ.. ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದನ್ನ ಸಿನಿಮಾ ರಿಲೀಸ್ ಆದ ನಂತರವೇ ನೋಡ್ಬೇಕಾಗಿದೆ. ಅಂದ್ಹಾಗೆ ಪ್ರಬಾಸ್ ಅವರು ಸಲಾರ್ ನಲ್ಲಿ ಬ್ಯುಸಿಯಿದ್ದಾರೆ. ನಂತರ ಆದಿಪುರುಷ್ ಅಲ್ಲದೇ ಇನ್ನೂ ಕೆಲ ಬಿಗ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಲಿದ್ದಾರೆ.
ಇತ್ತ ಪೂಜಾ ಹೆಗ್ಡೆ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರ 65 ನೇ ಸಿನಿಮಾಗೆ ನಾಯಕಿಯಾಗಿ ಅಧಿಕೃತವಾಗಿಯೋ ಘೋಷಣೆಯಾಗಿದೆ.










