01 ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ನನಗೆ ಯಾವುದೇ ಆಂದೋಳನವಿಲ್ಲ. ಅತಿ ಶೀಘ್ರದಲ್ಲಿಯೇ ಭಾರತದ ಉತ್ತಮ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ ನಲ್ಲಿಲ್ಲ ಅನ್ನೋದು ನಾನು ಒಪ್ಪುವುದಿಲ್ಲ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ವಿಫಲವಾಗಿದ್ದು, ದೊಡ್ಡ ವಿಷಯವೇನಲ್ಲ ಎಂದಿದ್ದಾರೆ. Intrusting news in the Cricket world
02 . ಶ್ರೀಲಂಕಾ ತಂಡದ ಆಟಗಾರರನ್ನ ಖರೀದಿ ಮಾಡಿದ್ದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಚೆನ್ನೈ ತಂಡವನ್ನು ತಲೆ ಮೇಲೆ ಇಟ್ಟಿಕೊಂಡಿರುವ ತಮಿಳುನಾಡು ಜನರೇ ಸಿಎಸ್ ಕೆ ತಂಡದ ವಿರುದ್ಧ ಬುಸುಗುಡುತ್ತಿದ್ದಾರೆ. #Boycott_ChennaiSuperKings ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದಾರೆ.
03 ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ವಿರುದ್ಧ ಟಿ 20 ಸರಣಿಯಲ್ಲಿ ಕೇವಲ 75 ರನ್ ಗಳಿಸಿದ್ರೆ ವಿಶ್ವದಾಖಲೆ ನಿರ್ಮಿಸಲಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ 75 ರನ್ ಗಳಿಸಿದ್ರೆ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಲಿದ್ದಾರೆ.
04 ರೈನಾ ಅವರು ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದು, ಈ ಬಗ್ಗೆ ಸಿಎಸ್ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥ್ ಮಾತನಾಡಿದ್ದು, ‘ಸುರೇಶ್ ರೈನಾ ಹನ್ನೆರಡು ವರ್ಷಗಳಿಂದ ಐಪಿಎಲ್ನಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. ಆದ್ರೆ ಪ್ರತಿ ಆಟಗಾರನನ್ನು ಫಾರ್ಮ್ ಆಧಾರದ ಮೇಲೆ ತಂಡಕ್ಕೆ ನೇಮಕ ಮಾಡಲಾಗುತ್ತದೆ. ನಮ್ಮ ಟೀಂಗೆ ರೈನಾ ಫಿಟ್ ಆಗಿಲ್ಲ ಎಂದಿದ್ದಾರೆ.
05 ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಚುಟುಕು ಕ್ರಿಕೆಟ್ ನ ಸಮರಕ್ಕೆ ಸಜ್ಜಾಗಿದೆ.ಕೊಲ್ಕತ್ತಾದಲ್ಲಿ ನಾಳೆಯಿಂದ ಟಿ 20 ಸರಣಿ ಆರಂಭವಾಗಿದೆ. ಆದ್ರೆ ಈ ಸರಣಿಯಿಂದ ಗಾಯದ ಸಮಸ್ಯೆಯಿಂದಾಗಿ ಕೆ.ಎಲ್ .ರಾಹುಲ್ ಹೊರಗುಳಿದಿದ್ದಾರೆ. ಹೀಗಾಗಿ ನಾಯಕ ರೋಹಿತ್ ಶರ್ಮಾಗೆ ಡೆಪ್ಯೂಟಿಯಾಗಿ ವಿಕೆಟ್ ಕೀಪರ್ ರಿಷಬ್ ಪಂತ್ ನೇಮಕ ಆಗಿದ್ದಾರೆ.









