ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರ ಮಾಡಲು ಲಾಕ್ ಡೌನ್ ಮಾಡಲಾಗಿತ್ತು. ಇದ್ದರಿಂದಾಗಿ ಶುಭ ವೇಳೆಯಲ್ಲಿ ನಡೆಯಬೇಕಿದ್ದ ಮದುವೆಗಳು ನಿಂತು ಹೋಗಿದ್ದವು. ಅನ್ ಲಾಕ್ ಶುರುವಾದ ಮೇಲೆ ಮದುವೆ ಮಾಡಿಕೊಳ್ಳಲು ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.
ಮುಜರಾಯಿ ಇಲಾಖೆಯಿಂದ ನಡೆಯುವ ಸಾಮೂಹಿಕ ವಿವಾಹದಲ್ಲಿ ಪಾಲ್ಲೊಳ್ಳಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ. ಅಲ್ಲದೆ ಈ ಬಾರಿ ಏಳು ಹಂತದಲ್ಲಿ ಮದುವೆಯನ್ನು ನಡೆಸಲಿದೆ. ಜೂಲೈ 23,26,29 ಮತ್ತು ಆಗಸ್ಟ್ 10,14 ರಂದು ಸಾಮೂಹಿಕ ಮದುವೆ ಆಯೋಜಿಸಲಾಗಿದೆ.
ಮುಜರಾಯಿ ಇಲಾಖೆಯಿಂದ ನಡೆಯುವ ಸಾಮೂಹಿಕ ಮದುವೆಯಲ್ಲಿ ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ ಜೊತೆಗೆ ವಧೂವರರಿಗೆ ಮದುವೆ ಗೆ ಬೇಕಾದ ವಸ್ತುಗಳನ್ನು ಖರೀದಿಸಲು 55000 ರೂಪಾಯಿಗಳನ್ನು ನೀಡಲಾಗುತ್ತದೆ. ವರನಿಗೆ ಪಂಚೆ-ಶರ್ಟ್ ಹಾಗೂ ಶಲ್ಯ ನೀಡಲಾಗುತ್ತದೆ. ವಧುವಿಗೆ ಧಾರೆ ಸೀರೆ, ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು ಕೊಡಲಾಗುತ್ತದೆ.