ನವದೆಹಲಿ: ಫ್ರಾನ್ಸ್ ನಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತೇವೆ ಎಂದು ಅಲ್ಲಿಯ ಅಧ್ಯಕ್ಷ ಮ್ಯಾಕ್ರನ್ (Emmanuel Macron) ಹೇಳಿದ್ದಾರೆ.
75ನೇ ಗಣರಾಜ್ಯೋತ್ಸವ ಆಚರಣೆಯ (Republic Day) ಮುಖ್ಯ ಅತಿಥಿಯಾಗಿ ದೇಶಕ್ಕೆ ಆಗಮಿಸಿದ ಅವರು, ಕಾರ್ಯಕ್ರಮಕ್ಕೂ ಮುನ್ನ ತಮ್ಮ ಸಾಮಾಜಿಕ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 2030ರೊಳಗೆ ಸುಮಾರು 30 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಆಹ್ವಾನಿಸುವುದಾಗಿ ಹೇಳಿದ್ದಾರೆ.
ಭಾರತಕ್ಕೆ ಆಗಮಿಸಿರುವ ಮ್ಯಾಕ್ರನ್ ಅವರು ಜೈಪುರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸ್ವಾಗತಿಸಿದ್ದರು. ನಂತರ ಪ್ರಧಾನಿ ಜೊತೆ ಜೈಪುರದಲ್ಲಿ ರೋಡ್ ಶೋ ನಲ್ಲಿ ಭಾಗವಹಿಸಿದ್ದರು. ಸಂಜೆ 7.10ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ನಂತರ ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ.