IOCL: 1535 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ…
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 1535 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸೆಪ್ಟೆಂಬರ್ 24 ರಂದು ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 23 ಕೊನೆಯ ದಿನಾಂಕವಾಗಿದೆ.
ಆಸಕ್ತ ಅಭ್ಯರ್ಥಿಗಳು iocl.com/apprenticeships ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಲಿಖಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ ನವೆಂಬರ್ 6 ಮತ್ತು ಫಲಿತಾಂಶವನ್ನು ನವೆಂಬರ್ 21 ರಂದು ನಿಗದಿಪಡಿಸಲಾಗಿದೆ.
“ಇಂಡಿಯನ್ ಆಯಿಲ್ ನಿಂದ ಗುವಾಹಟಿ, ದಿಗ್‌ಬೋಯಿ, ಬೊಂಗೈಗಾಂವ್ ಬರೌನಿ ವಡೋದರಾ ಹಲ್ದಿಯಾ, ಮಥುರಾ ಪಾಣಿಪತ್ ನಲ್ಲಿರುವ ರಿಫೈನರಿಗಳಲ್ಲಿ ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
IOCL ಅಪ್ರೆಂಟಿಸ್ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 24 ವರ್ಷಗಳು ಮೀರಿರಬಾರದು.
IOCL ನೇಮಕಾತಿ 2022 ಗಾಗಿ ಖಾಲಿ ವಿವರಗಳು
ಒಟ್ಟು ಹುದ್ದೆಗಳ ಸಂಖ್ಯೆ- 1535
ಟ್ರೇಡ್ ಅಪ್ರೆಂಟಿಸ್ – ಅಟೆಂಡೆಂಟ್ ಆಪರೇಟರ್-396
ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್)-161
ಟ್ರೇಡ್ ಅಪ್ರೆಂಟಿಸ್ (ಬಾಯ್ಲರ್)-54
ತಂತ್ರಜ್ಞ ಅಪ್ರೆಂಟಿಸ್ ಕೆಮಿಕಲ್-332
ತಂತ್ರಜ್ಞ ಅಪ್ರೆಂಟಿಸ್ – ಮೆಕ್ಯಾನಿಕಲ್-163
ತಂತ್ರಜ್ಞ ಅಪ್ರೆಂಟಿಸ್ ಮೆಕ್ಯಾನಿಕಲ್-198
ತಂತ್ರಜ್ಞ ಅಪ್ರೆಂಟಿಸ್ ಎಲೆಕ್ಟ್ರಿಕಲ್-198
ತಂತ್ರಜ್ಞ ಅಪ್ರೆಂಟಿಸ್ ಇನ್‌ಸ್ಟ್ರುಮೆಂಟೇಶನ್-74
ಟ್ರೇಡ್ ಅಪ್ರೆಂಟಿಸ್- ಸೆಕ್ರೆಟರಿ ಅಸಿಸ್ಟೆಂಟ್-39 ಟ್ರೇಡ್ ಅಪ್ರೆಂಟಿಸ್- ಅಕೌಂಟೆಂಟ್-45
ಟ್ರೇಡ್ ಅಪ್ರೆಂಟಿಸ್- ಡೇಟಾ ಎಂಟ್ರಿ ಆಪರೇಟರ್-41
ಟ್ರೇಡ್ ಅಪ್ರೆಂಟಿಸ್- ಡೇಟಾ ಎಂಟ್ರಿ ಆಪರೇಟರ್ (ಕೌಶಲ್ಯ ಪ್ರಮಾಣಪತ್ರ ಹೊಂದಿರುವವರು)-32
IOCL Recruitment 2022: Golden opportunity to get job in these 1535 posts in IOCL,