ಐಪಿಎಲ್ 2020- ಡ್ವೇನ್ ಬ್ರೇವೋ 150 ವಿಕೆಟ್.. ಅಗ್ರ ವಿಕೆಟ್ ಪಡೆದವರ ಸಾಲಿನಲ್ಲಿ ಬ್ರೇವೋ
ಡ್ವೇನ್ ಬ್ರೇವೋ… ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯುತ್ತಮ ಆಲ್ ರೌಂಡರ್.
ಆಟಕ್ಕೂ ಸೈ.. ಮನರಂಜನೆಗೂ ಜೈ ಅನ್ನೋ ಡ್ವೇನ್ ಬ್ರೇವೋ ಅವರಿಗೆ ಅಕ್ಟೋಬರ್ 7ರಂದು ತನ್ನ 37ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ್ರು.
ಆದ್ರೆ ಬ್ರೇವೋ ಹುಟ್ಟು ಹಬ್ಬದಂದು ತಂಡಕ್ಕೆ ಜಯ ಸಿಗಲಿಲ್ಲ. ಕೆಕೆಆರ್ ವಿರುದ್ಧ ಹತ್ತು ರನ್ ಗಳಿಂದ ಸೋಲು ಅನುಭವಿಸಿದ ಸಿಎಸ್ ಕೆ ತಂಡ ನಿರಾಸೆ ಅನುಭವಿಸಿತ್ತು.
ಆದ್ರೂ ತನ್ನ 37ನೇ ಹುಟ್ಟುಹಬ್ಬದಂದು ಬ್ರೇವೋ ಅವರು ಐಪಿಎಲ್ ನಲ್ಲಿ ಹೊಸ ಸಾಧನೆಯೊಂದನ್ನು ಮಾಡಿದ್ದರು. ಐಪಿಎಲ್ ನಲ್ಲಿ 150 ವಿಕೆಟ್ ಪಡೆದ ಐದನೇ ಬೌಲರ್ ಆಗಿ ಬ್ರೇವೋ ಅವರು ಹೊರಹೊಮ್ಮಿದ್ರು.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬ್ರೇವೋ ಅವರು ಮೂರು ವಿಕೆಟ್ ಉರುಳಿಸಿದ್ರು. ಬ್ರೇವೋ ಅವರ ಸಾಧನೆಗೆ ಧೋನಿ ಕೂಡ ಸಾಥ್ ನೀಡಿದ್ರು. ಬ್ರೇವೋ ಪಡೆದ ಎರಡು ವಿಕೆಟ್ ಗಳಲ್ಲಿ ಧೋನಿ ಅದ್ಭುತವಾದ ಕ್ಯಾಚ್ ಕೂಡ ಹಿಡಿದಿದ್ರು.
ಇನ್ನು ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಇರೋದು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ಲಸಿತ್ ಮಾಲಿಂಗಾ ಅವರ ಹೆಸರಿನಲ್ಲಿದೆ.
ಲಸಿತ್ ಮಾಲಿಂಗ ಅವರು 170 ವಿಕೆಟ್ ಪಡೆದ್ರೆ, ಅಮಿತ್ ಮಿಶ್ರಾ ಅವರು 160 ವಿಕೆಟ್ ಉರುಳಿಸಿದ್ದಾರೆ. ಹಾಗೇ ಪಿಯೂಷ್ ಚಾವ್ಲಾ 156 ವಿಕೆಟ್‍ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 150 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದ ಹರ್ಭಜನ್ ಜೊತೆ ಇದೀಗ ಡ್ವೇನ್ ಬ್ರೇವೋ ಕೂಡ ಸೇರಿಕೊಂಡಿದ್ದಾರೆ.
ಸದ್ಯ ಈ ಬಾರಿಯ ಐಪಿಎಲ್ ನಲ್ಲಿ ಲಸಿತ್ ಮಾಲಿಂಗಾ, ಹರ್ಭಜನ್ ಸಿಂಗ್ ಆಡುತ್ತಿಲ್ಲ. ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಅವರು ಕೈ ಬೆರಳಿನ ಗಾಯದಿಂದ ಟೂರ್ನಿಯಿಂದ ಹೊರನಡೆದಿದ್ದಾರೆ.
ಬ್ರೇವೋ ಅವರ ಸಾಧನೆಯನ್ನು ಸಿಎಸ್ ಕೆ ಆಟಗಾರರು ಸಂಭ್ರಮಿಸುವಂತಿಲ್ಲ. ಯಾಕಂದ್ರೆ ಟೂರ್ನಿಯಲ್ಲಿ ಸಿಎಸ್‍ಕೆ ನೀರಸ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಆಡಿರುವ ಆರು ಪಂದ್ಯಗಳಲ್ಲಿ ಸಿಎಸ್‍ಕೆ ತಂಡ ಎರಡು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
https://youtu.be/utNH_VMFiYA?t=18