ಐಪಿಎಲ್ 2020- ಮನೆ ದಾರಿ ಹಿಡಿದ ರಾಯಲ್ಸ್.. ಪ್ಲೇ ಆಫ್‍ಗೆ ಎಂಟ್ರಿ ಪಡೆಯುತ್ತಾ ಕೆಕೆಆರ್ ?
ಐಪಿಎಲ್ ಟೂರ್ನಿಯ 54ನೇ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 60 ರನ್ ಗಳಿಂದ ಸೋತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಟಾಸ್ ಗೆದ್ದ ರಾಜಸ್ತಾನ ರಾಯಲ್ಸ ಮೊದಲು ಕೆಕೆಆರ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು.
ಕೆಕೆಆರ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. ನಿತೀಶ್ ರಾಣಾ ಅವರು ಡಕೌಟಾದ್ರು.
ನಂತರ ಶುಬ್ಮನ್ ಗಿಲ್ ಜೊತೆ ಸೇರಿಕೊಂಡ ರಾಹುಲ್ ತ್ರಿಪಾಠಿ ಎರಡನೇ ವಿಕೆಟ್ ಗೆ 71 ರನ್ ಕಲೆ ಹಾಕಿದ್ರು.
ಶುಬ್ಮನ್ ಗಿಲ್ 24 ಎಸೆತಗಳಲ್ಲಿ ಆರು ಬೌಂಡರಿಗಳ ಸಹಾಯದಿಂದ ಆಕರ್ಷಕ 36 ರನ್ ಸಿಡಿಸಿದ್ರು. ಈ ಹಂತದಲ್ಲಿ ಹೊಡಿಬಡಿ ಆಟಗಾರ ಸುನೀಲ್ ನರೇನ್ ಶೂನ್ಯ ಸುತ್ತಿದ್ರು.
ಇನ್ನೊಂದೆಡೆ ರಾಹುಲ್ ತ್ರಿಪಾಠಿ 34 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳ ಸಹಾಯದಿಂಧ 39 ರನ್ ದಾಖಲಿಸಿದ್ರು.
ಉತ್ತಮ ರನ್ ಧಾರಣೆ ಇದ್ರೂ ಕೂಡ ಕೆಕೆಆರ್ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ದಿನೇಶ್ ಕಾರ್ತಿಕ್ ಕೂಡ ಡಕೌಟಾದ್ರು. ಆದ್ರೂ ಇಯಾನ್ ಮೊರ್ಗಾನ್ ನಾಯಕನ ಆಟವನ್ನಾಡಿದ್ರು.
ಜವಾಬ್ದಾರಿಯುತ ಆಟವನ್ನಾಡಿದ್ದ ಇಯಾನ್ ಮೊರ್ಗಾನ್ 35 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ಅಜೇಯ 68 ರನ್ ದಾಖಲಿಸಿದ್ರು.
ಏತನ್ಮಧ್ಯೆ, ಆಂಡ್ರ್ಯೂ ರಸೆಲ್ ಮಿಂಚಿನ 25 ರನ್ ಸಿಡಿಸಿದ್ರೆ, ಪ್ಯಾಟ್ ಕಮಿನ್ಸ್ 15 ರನ್ ಗಳಿಸಿದ್ರು.
ಅಂತಿಮವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಏಳು ವಿಕೆಟ್ ನಷ್ಟಕ್ಕೆ 191 ರನ್ ದಾಖಲಿಸಿತ್ತು.
ರಾಜಸ್ತಾನ ರಾಯಲ್ಸ್ ತಂಡ ಪರ ರಾಹುಲ್ ತೆವಾಟಿಯಾ 25ಕ್ಕೆ 3 ವಿಕೆಟ್ ಹಾಗೂ ಕಾರ್ತಿಕ್ ತ್ಯಾಗಿ 36ಕ್ಕೆ 2 ವಿಕೆಟ್ ಕಬಳಿಸಿದ್ರು.
ಸವಾಲನ್ನು ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ನೀರಸ ಆಟವನ್ನಾಡಿತ್ತು.
ಆರಂಭಿಕರಾದ ರಾಬಿನ್ ಉತ್ತಪ್ಪ 6 ರನ್ ಹಾಗೂ ಬೆನ್ ಸ್ಟೋಕ್ಸ್ 18 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಹಾಗೇ ಸ್ಟೀವನ್ ಸ್ಮಿತ್ ನಾಲ್ಕು ರನ್ ಗೆ ಸೀಮಿತವಾದ್ರೆ, ಸಂಜು ಸ್ಯಾಮ್ಸನ್ 1 ರನ್ ಗಳಿಸಿದ್ರು.
ಇನ್ನುಳಿದಂತೆ ಜೋಸ್ ಬಟ್ಲರ್ ಸ್ವಲ್ಪ ಮಟ್ಟಿನ ಪ್ರತಿರೋಧ ಒಡ್ಡಿದ್ರು. ಬಟ್ಲರ್ 35 ರನ್ ಗಳಿಸಿದ್ರು.
ಹಾಗೇ ರಿಯಾನ್ ಪರಾಗ್ ಶೂನ್ಯ ಸುತ್ತಿದ್ರೆ, ರಾಹುಲ್ ತೆವಾಟಿಯಾ 31 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಜೋಫ್ರಾ ಆರ್ಚೆರ್ 6 ರನ್, ಕಾರ್ತಿಕ್ ತ್ಯಾಗಿ 2 ರನ್ ಗಳಿಸಿದ್ರು. ಶ್ರೇಯಸ್ ಗೋಪಾಲ್ ಅಜೇಯ 25 ರನ್ ದಾಖಲಿಸಿದ್ರು. ಪರಿಣಾಮ ರಾಜಸ್ತಾನ ರಾಯಲ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು.
ಕೆಕೆಆರ್ ತಂಡದ ಪರ ಪ್ಯಾಟ್ ಕಮಿನ್ಸ್ 34ಕ್ಕೆ 4 ವಿಕೆಟ್ ಉರುಳಿಸಿದ್ರು. ಶಿವಮ್ ಮಾವಿ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಕಬಳಿಸಿದ್ರು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಪ್ಯಾಟ್ ಕಮಿನ್ಸ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.