ಆರು ಪಂದ್ಯ- 48 ರನ್… 58 ಎಸೆತ.. 1 ಸಿಕ್ಸರ್.. ಇದು ಗ್ಲೇನ್ ಮ್ಯಾಕ್ಸ್ ವೆಲ್ ರಿಪೋರ್ಟ್ ಕಾರ್ಡ್
ಗ್ಲೇನ್ ಮ್ಯಾಕ್ಸ್ ವೆಲ್. ಆಸ್ಟ್ರೇಲಿಯಾದ ಆಲ್ ರೌಂಡರ್.
ಚುಟುಕು ಕ್ರಿಕೆಟ್ ನ ಅತಿರಥ ಆಟಗಾರ. ಸದ್ಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ.
ಆದ್ರೆ ಯಾಕೋ ಏನೋ ಗೊತ್ತಿಲ್ಲ. ಗ್ಲೇನ್ ಮ್ಯಾಕ್ಸ್ ವೆಲ್ ಐಪಿಎಲ್ ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ.
ಆದ್ರೂ ಪ್ರತಿ ವರ್ಷ ಫ್ರಾಂಚೈಸಿಗಳು ಸ್ಪರ್ಧೆಗೆ ಇಳಿದು ಮ್ಯಾಕ್ಸ್ ವೆಲ್ ಅವರನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ.
ಆಲ್ ರೌಂಡರ್ ಮತ್ತು ಬೀಸು ಹೊಡೆತಕ್ಕೆ ಹೆಸರುವಾಸಿಯಾಗಿರುವ ಮ್ಯಾಕ್ಸ್ ವೆಲ್, ಅದ್ಭುತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ.
ಇದೀಗ ಮ್ಯಾಕ್ಸ್ ವೆಲ್ ಅವರ ಐಪಿಎಲ್ ಸಾಧನೆಯನ್ನು ಟೀಮ್ ಇಂಡಿಯಾದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಪ್ರಶ್ನೆ ಮಾಡಿದ್ದಾರೆ.
ಗ್ಲೇನ್ ಮ್ಯಾಕ್ಸ್ ವೆಲ್‍ಗೆ ಅಷ್ಟೊಂದು ಬೇಡಿಕೆ ಯಾಕೆ ? ಪ್ರತಿ ವರ್ಷ ಬಿಡ್ಡಿಂಗ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಗೆ ಭಾರೀ ಡಿಮ್ಯಾಂಡ್ ಇರುತ್ತದೆ.
ಫ್ರಾಂಚೈಸಿಗಳು ಯಾಕೆ ಅವರ ಹಿಂದೆ ಬೀಳುತ್ತಿವೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಸೆಹ್ವಾಗ್ ಪ್ರಶ್ನೆ ಮಾಡುತ್ತಿದ್ದಾರೆ.
ನನಗೆ ಮ್ಯಾಕ್ಸ್ ವೆಲ್ ಅವರ ಮೈಂಡ್ ಸೆಟ್ ಏನು ಎಂಬುದೇ ಅರ್ಥವಾಗುತ್ತಿಲ್ಲ. ಟೂರ್ನಿಯಲ್ಲಿ ಅವರಿಗೆ ಯಾವುದೇ ಒತ್ತಡಗಳು ಇಲ್ಲ.
ಆದ್ರೂ ಅವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಬರುತ್ತಿಲ್ಲ ಎಂದು ಸೆಹ್ವಾಗ್ ಅವರು ಗ್ಲೇನ್ ಮ್ಯಾಕ್ಸ್ ವೆಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
2016ರಿಂದ ಇಲ್ಲಿಯವರೆಗೆ ಗ್ಲೇನ್ ಮ್ಯಾಕ್ಸ್ ವೆಲ್ ಅವರ ಬ್ಯಾಟ್ ನಿಂದ ಬಂದಿರುವುದು ಒಂದು ಅರ್ಧಶತಕ. ನನಗೆ ಅನ್ನಿಸುತ್ತಿದೆ ಆತನ ಬೆಲೆ 10 ಕೋಟಿಯಿಂದ 1ರಿಂದ 2 ಕೋಟಿಯಷ್ಟೇ ಎಂದು ಸೆಹ್ವಾಗ್ ಹೇಳಿದ್ರು.
2020ರ ಐಪಿಎಲ್ ನಲ್ಲಿ ಮ್ಯಾಕ್ಸ್ ವೆಲ್ ಅವರ ಪ್ರದರ್ಶನ ತೀರಾ ಕಳಪೆಯಾಗಿದೆ. ಆಡಿರುವ ಆರು ಪಂದ್ಯಗಳಲ್ಲಿ 1,5, 13, 11, ಅಜೇಯ 11, 7 ರನ್. ಒಟ್ಟು 48 ರನ್. ಎದುರಿಸಿದ್ದ ಎಸೆತಗಳು 58. ಇದ್ರಲ್ಲಿ ಒಂದು ಸಿಕ್ಸರ್ ಮಾತ್ರ ಸಿಡಿಸಿದ್ದಾರೆ.
ಒಟ್ಟಿನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಐಪಿಎಲ್ ನಲ್ಲಿ ಸದ್ದು ಮಾಡಲು ವಿಫಲರಾಗುತ್ತಿದ್ದಾರೆ. ಹೀಗಾಗಿ ಅವರ ಸ್ಥಾನವನ್ನು ಕ್ರೀಸ್ ಗೇಲ್ ಅಲಂಕರಿಸುವ ಸಾಧ್ಯತೆಗಳು ಹೆಚ್ಚಾಗಿವೆ.