IPL 2020 | ಲಖನೌ ಟೀಂಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್..!

1 min read

ಲಖನೌ ಟೀಂಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್..!

ಐಪಿಎಲ್ 2022 ಕ್ಕೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಗೊಂಡಿರುವುದರಿಂದ ಮುಂದಿನ ಐಪಿಎಲ್ ಮತ್ತಷ್ಟು ರೋಚಕತೆ ಪಡೆಯಲಿದೆ.

ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಮುಂದಿನ ವರ್ಷ ಐಪಿಎಲ್ ಗೆ ಎಂಟ್ರಿ ಕೊಡಲಿದ್ದು, ಮೆಗಾ ಹರಾಜಿನ ಲೆಕ್ಕಾಚಾರಗಳು ಜೋರಾಗಿವೆ.

ಮೆಗಾ ಹರಾಜಿಗೆ ಎಲ್ಲವೂ ಸಿದ್ಧವಾಗುತ್ತಿರುವ ಈ ಸಮಯದಲ್ಲಿ ಯಾವ ಫ್ರಾಂಚೈಸಿ ಯಾವ ಆಟಗಾರನನ್ನು ಉಳಿಸಿಕೊಳ್ಳಲಿದೆ? ಹೊಸ ತಂಡಗಳ ನಾಯಕರು ಯಾರಾಗುತ್ತಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

KL Rahul Saaksha tv

ಈ ಅನುಕ್ರಮದಲ್ಲಿ ಕುತೂಹಲಕಾರಿ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ. ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ತಂಡವನ್ನು ತೊರೆಯಲಿದ್ದು, ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರಂತೆ.

ಈಗಾಗಲೇ ಲಕ್ನೋ ಫ್ರಾಂಚೈಸಿ ಮೂರು ಸೀಸನ್‍ಗಳಿಗೆ ಟೀಮ್ ಇಂಡಿಯಾ ಟಿ20 ಉಪನಾಯಕ ರಾಹುಲ್ ಅವರ ಈ ಬಗ್ಗೆ ಮಾತನಾಡಿದೆಯಂತೆ. ಅಲ್ಲದೇ ಸಹಿ ಕೂಡ ಮಾಡಿಸಿಕೊಂಡಿದೆ ಎನ್ನೋದು ಬಲ್ಲ ಮೂಲಗಳ ಸಮಾಚಾರ.

ಆದಾಗ್ಯೂ, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಅವರ ಮುಂಬೈ ಇಂಡಿಯನ್ಸ್ ಅವರನ್ನು ಅನುಸರಿಸುತ್ತಿರುವುದರಿಂದ, ಅವರು ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ ಎಂಬ ಊಹಾಪೆÇೀಹಗಳು ಹರಡಿವೆ.

ಇದಲ್ಲದೇ ಒಂದು ವೇಳೆ ಕೆ.ಎಲ್ ಹರಾಜಿಗೆ ಬಂದ್ರೆ ಲಕ್ನೋ ಫ್ರಾಂಚೈಸಿ ಎಷ್ಟು ಬೇಕಾದರೂ ಪಾವತಿಸಲು ಸಿದ್ಧವಾಗಿದೆಯಂತೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ರಾಹುಲ್ ಮೇಲೆ ಕಣ್ಣಿಟ್ಟಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd