ನಿತೀಶ್ ಆಕರ್ಷಕ ಅರ್ಧಶತಕ.. ಮಾವನಿಗೆ ಅರ್ಪಿಸಿ ಭಾವುಕರಾದ ರಾಣಾ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿತೀಶ್ ರಾಣಾ ಅವರು ಆಕರ್ಷಕ ಅರ್ಧಶತಕ ಸಿಡಿಸಿದ್ರು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಣಾ ಮಿಂಚಿನ ಆಟವನ್ನಾಡಿದ್ರು.
ಎಡಗೈ ಬ್ಯಾಟ್ಸ್ ಮೆನ್ ನಿತೀಶ್ ರಾಣಾ 53 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ 81 ರನ್ ದಾಖಲಿಸಿದ್ರು.
ಪಂದ್ಯದಲ್ಲಿ ಅರ್ಧಶತಕ ದಾಖಲಿಸುತ್ತಿದ್ದಂತೆ ನಿತೀಶ್ ರಾಣಾ ಅವರು ಭಾವುಕರಾದ್ರು. ಶುಕ್ರವಾರ ನಿತೀಶ್ ರಾಣಾ ಅವರ ಮಾವ ಸುರಿಂದರ್ ಮಾರ್ವಾಹ್ ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು.
ಮಾವನ ನಿಧನದ ನೋವಿನಲ್ಲೂ ನಿತೀಶ್ ರಾಣಾ ಅವರು ಕೆಕೆಆರ್ ತಂಡಕ್ಕೆ ಆಧಾರವಾಗಿ ನಿಂತ್ರು.
ಅರ್ಧಶತಕ ದಾಖಲಿಸುತ್ತಿದ್ದಾಗ ಕೆಕೆಆರ್ ತಂಡದ ಸಹ ಆಟಗಾರ ಸುರಿಂದರ್ ಹೆಸರಿನ ಜೆರ್ಸಿಯನ್ನು ನಿತೀಶ್ ರಾಣಾ ಅವರ ಕೈಗೆ ನೀಡಿದ್ದರು.
63 ನಂಬರ್ ನ ಸುರಿಂದರ್ ಹೆಸರಿನ ಜೆರ್ಸಿಯನ್ನು ತೋರಿಸುತ್ತಾ ಆಗಸದತ್ತ ಮುಖ ಮಾಡಿ ಒಂದು ಕ್ಷಣ ಭಾವುಕರಾದ್ರು. ಅಲ್ಲದೆ ಈ ಅರ್ಧಶತಕವನ್ನು ತನ್ನ ಮಾವನಿಗೆ ಅರ್ಪಣೆ ಮಾಡಿದ್ರು.
ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡ ಆರ್ ಸಿಬಿ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿತ್ತು.
ಆದ್ರೆ ಒಂದು ಹಂತದಲ್ಲಿ ಕೆಕೆಆರ್ ತಂಡ 42 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆಗ ಆರಂಭಿಕನಾಗಿ ಉತ್ತಮ ಲಯದಲ್ಲಿದ್ದ ನಿತೀಶ್ ರಾಣಾ ಜೊತೆ ಸೇರಿಕೊಂಡ ಸುನೀಲ್ ನರೇನ್ ಅವರ ಸ್ಪೋಟಕ ಆಟದಿಂದ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು.
ನಾಲ್ಕನೇ ವಿಕೆಟ್ ಗೆ ರಾಣಾ ಮತ್ತು ನರೇನ್ ಅವರು 115 ರನ್ ಪೇರಿಸಿದ್ದರು.
ಅಂತಿಮವಾಗಿ ಕೆಕೆಆರ್ ತಂಡ 194 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 135 ರನ್ ಗಳಿಸಿ ಸೋಲು ಒಪ್ಪಿಕೊಂಡಿತ್ತು.
ನಿತೀಶ್ ರಾಣಾ ಅವರ ಸ್ಪೋಟಕ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬರಲಿಲ್ಲ. ಯಾಕಂದ್ರೆ ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಅವರು ಐದು ವಿಕೆಟ್ ಪಡೆದು ಕೆಕೆಆರ್ ತಂಡದ ಗೆಲುವಿಗೆ ಸಹಕರಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಅಬ್ಬರಕ್ಕೆ ಕಡಿವಾಣ ಹಾಕಿದ್ದರು.