ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020- ಸೂಪರ್ ಓವರ್ ನಲ್ಲಿ ಮುಂಬೈ ಇಂಡಿಯನ್ಸ್ ಸೋಲುಣಿಸಿದ ಆರ್ ಸಿಬಿ

admin by admin
September 29, 2020
in IPL 2020, Sports, ಐಪಿಎಲ್ 2020, ಕ್ರೀಡೆ
Share on FacebookShare on TwitterShare on WhatsappShare on Telegram

ಐಪಿಎಲ್ 2020- ಸೂಪರ್ ಓವರ್ ನಲ್ಲಿ ಮುಂಬೈ ಇಂಡಿಯನ್ಸ್ ಸೋಲುಣಿಸಿದ ಆರ್ ಸಿಬಿ

#rcb #mumbai indians #ipl 2020 #Devdutt Padikkal #ipl2020ರ ಐಪಿಎಲ್ ಟೂರ್ನಿಯ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಓವರ್ ನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ತಂಡದ ನೀಡಿದ್ದ 201 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯ್ತು. ನಂತರ ನಡೆದ ಸೂಪರ್ ಓವರ್ ನಲ್ಲಿ ಮುಂಬೈ ತಂಡ ಕೇವಲ ಏಳು ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಹೀಗಾಗಿ ಎಬಿಡಿ ವಿಲಿಯರ್ಸ್ ಅವರ ಸಮಯೋಚಿತ ಆಟದಿಂದ ಆರ್‍ಸಿಬಿ ತಂಡ ಗೆಲುವಿನ ನಗೆ ಬೀರಿತ್ತು
ಇದಕ್ಕೂ ಮೊದಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಮತ್ತು ಆರೋನ್ ಫಿಂಚ್ ಅವರು 9 ಓವರ್ ಗಳಲ್ಲಿ 81 ರನ್ ಕಲೆ ಹಾಕಿತ್ತು. ಆರೋನ್ ಫಿಂಚ್ 35 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ 52 ರನ್ ದಾಖಲಿಸಿದ್ರು. ಹಾಗೇ ದೇವದತ್ ಪಡಿಕ್ಕಲ್ ಅವರು 40 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 54 ರನ್ ಗಳಿಸಿದ್ರು.
ವಿರಾಟ್ ಕೊಹ್ಲಿ ಮೂರು ರನ್ ಗಳಿಸಿದ್ರೆ ಮತ್ತೆ ಆರ್ ಸಿಬಿ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ರು. ಆದ್ರೆ ಎಬಿಡಿ ವಿಲಿಯರ್ಸ್ ಮತ್ತು ಶಿವಂ ದುಬೆ ಮಿಂಚಿನ ಆಟವನ್ನಾಡಿದ್ರು. ಎಬಿಡಿ 24 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಅಜೇಯ 55 ರನ್ ಸಿಡಿಸಿದ್ರೆ, ಶಿವಂ ದುಬೆ 10 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿಯ ನೆರವಿನಿಂದ ಅಜೇಯ 27 ರನ್ ದಾಖಲಿಸಿದ್ರು. ಪರಿಣಾಮ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
#ishan kishan #ipl 2020 #ipl #rcb #mumbai indians ಸವಾಲನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. 39 ರನ್ ಗಳಿಸುಷ್ಟರಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ (8), ಕ್ವಿಂಟಾನ್ ಡಿ ಕಾಕ್ (14) ಮತ್ತು ಸೂರ್ಯ ಕುಮಾರ್ ಯಾದವ್ (0) ಪೆವಿಲಿಯನ್ ಸೇರಿಕೊಂಡ್ರು.
ಬಳಿಕ ಇಶಾನ್ ಕಿಶನ್ ಅವರನ್ನು ಸೇರಿಕೊಂಡ ಹಾರ್ದಿಕ್ ಪಾಂಡ್ಯ 15 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ಆಗ ಮುಂಬೈ ಇಂಡಿಯನ್ಸ್ ತಂಡದ ಮೊತ್ತ ನಾಲ್ಕು ವಿಕೆಟ್ ಗೆ 78 ರನ್.
ನಂತರ ಇಶಾನ್ ಕಿಶನ್ ಮತ್ತು ಕಿರಾನ್ ಪೊಲಾರ್ಡ್ ಜವಾಬ್ದಾರಿಯುತ ಆಟಕ್ಕೆ ಮುಂದಾದ್ರು. ಇನ್ನೇನೂ ಪಂದ್ಯ ಆರ್ ಸಿಬಿ ತಂಡ ಗೆಲ್ಲುತ್ತೆ ಅಂತ ಅಂದುಕೊಂಡುವಷ್ಟರಲ್ಲಿ ಇಶಾನ್ ಕಿಶನ್ ಆರ್ ಸಿಬಿ ಬೌಲರ್ ಗಳ ಮೇಲೆ ಪ್ರಹಾರ ನಡೆಸಿದ್ರು. ಮತ್ತೊಂದೆಡೆ ಕಿರಾನ್ ಪೊಲಾರ್ಡ್ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ರು. ಬೌಂಡರಿ ಮತ್ತು ಸಿಕ್ಸರ್ ಗಳ ಸಿಡಿಸುವ ಮೂಲಕ ಮುಂಬೈ ತಂಡ ಗೆಲುವಿನ ಹಾದಿ ಹಿಡಿಯಿತ್ತು. ಈ ಹಂತದಲ್ಲಿ ಮನಮೋಹಕ 99 ರನ್ ಗಳಿಸಿದ್ದ ಇಶಾನ್ ಕಿಶಾನ್ ಉದಾನಗೆ ವಿಕೆಟ್ ಒಪ್ಪಿಸಿದ್ರು.
ಇಶಾನ್ ಕಿಶನ್ ಅವರು 58 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು 9 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಮಿಂಚು ಹರಿಸಿದ್ರು. ಮತ್ತೊಂದೆಡೆ ಕಿರಾನ್ ಪೊಲಾರ್ಡ್ 24 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಐದು ಸಿಕ್ಸರ್ ಗಳ ಸಹಾಯದಿಂದ ಅಜೇಯ 60 ರನ್ ಗಳಿಸಿದ್ದಾಗ ಪಂದ್ಯ ಟೈಗೊಂಡಿತ್ತು. ಅಂತಿಮವಾಗಿ ಸೂಪರ್ ಓವರ್ ನಲ್ಲಿ ಆರ್ ಸಿಬಿ ತಂಡ ಗೆಲುವಿನ ನಗೆ ಬೀರಿತ್ತು. ಎಬಿಡಿ ವಿಲಿಯರ್ಸ್ ಪಂದ್ಯ ಶ್ರೇಷ್ಠ ಪ್ರಶಶ್ತಿಗೆ ಭಾಜನರಾದ್ರು.

Related posts

ಕೈಜಾರಿದ ಕ್ಯಾಚ್, ಕೈಕೊಟ್ಟ ಮ್ಯಾಚ್! ಜೈಸ್ವಾಲ್ ಎಡವಟ್ಟು, ಭಾರತಕ್ಕೆ ಸೋಲಿನ ಪೆಟ್ಟು

ಕೈಜಾರಿದ ಕ್ಯಾಚ್, ಕೈಕೊಟ್ಟ ಮ್ಯಾಚ್! ಜೈಸ್ವಾಲ್ ಎಡವಟ್ಟು, ಭಾರತಕ್ಕೆ ಸೋಲಿನ ಪೆಟ್ಟು

December 4, 2025
Karnataka Media Champion League 2026 – Hyper Sports and Welfare Trust

ಹೈಪರ್ ಸ್ಪೋರ್ಟ್ಸ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ -2026  

December 1, 2025
Tags: #A B de Villiers#Ishan Kishan#Kieron Pollard#Navdeep Saini#Royal Challengers bengaluruCricketHardik PandyaIPLIPL 2020mumbai indiansRCBrohith sharmavirat kohli
ShareTweetSendShare
Join us on:

Related Posts

ಕೈಜಾರಿದ ಕ್ಯಾಚ್, ಕೈಕೊಟ್ಟ ಮ್ಯಾಚ್! ಜೈಸ್ವಾಲ್ ಎಡವಟ್ಟು, ಭಾರತಕ್ಕೆ ಸೋಲಿನ ಪೆಟ್ಟು

ಕೈಜಾರಿದ ಕ್ಯಾಚ್, ಕೈಕೊಟ್ಟ ಮ್ಯಾಚ್! ಜೈಸ್ವಾಲ್ ಎಡವಟ್ಟು, ಭಾರತಕ್ಕೆ ಸೋಲಿನ ಪೆಟ್ಟು

by Shwetha
December 4, 2025
0

ರಾಯ್‌ಪುರ: ಕ್ರಿಕೆಟ್ ಜಗತ್ತಿನಲ್ಲಿ ಒಂದು ಮಾತಿದೆ, ಕ್ಯಾಚ್ ಡ್ರಾಪ್ ಆದರೆ ಮ್ಯಾಚ್ ಡ್ರಾಪ್ ಎಂದು. ರಾಯ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಈ...

Karnataka Media Champion League 2026 – Hyper Sports and Welfare Trust

ಹೈಪರ್ ಸ್ಪೋರ್ಟ್ಸ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ -2026  

by Saaksha Editor
December 1, 2025
0

ಬೆಂಗಳೂರು, ಡಿ.01: ಹೈಪರ್ ಸ್ಪೋರ್ಟ್ಸ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ -2026 (Champion League 2026) ಟೂರ್ನಿಯನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ರಾಂಚಿಯಲ್ಲಿ ರನ್ ಮಳೆ: ಕೊಹ್ಲಿ ವಿರಾಟ ದರ್ಶನ, ಕುಲ್ದೀಪ್-ರಾಣಾ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರ! ರೋಚಕ ಪಂದ್ಯದಲ್ಲಿ ಭಾರತಕ್ಕೆ ಜಯ

ರಾಂಚಿಯಲ್ಲಿ ರನ್ ಮಳೆ: ಕೊಹ್ಲಿ ವಿರಾಟ ದರ್ಶನ, ಕುಲ್ದೀಪ್-ರಾಣಾ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರ! ರೋಚಕ ಪಂದ್ಯದಲ್ಲಿ ಭಾರತಕ್ಕೆ ಜಯ

by Shwetha
December 1, 2025
0

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರು ರಾಂಚಿಯ ಜೆಎಸ್‌ಸಿಎ ಮೈದಾನದಲ್ಲಿ ನಡೆದ ರನ್​ಗಳ ಸುರಿಮಳೆಯ ಹೈವೋಲ್ಟೇಜ್ ಕಾದಾಟದಲ್ಲಿ ಟೀಂ ಇಂಡಿಯಾ ಅಂತಿಮವಾಗಿ ನಗು ಬೀರಿದೆ....

Why Team India Lost to South Africa in the 2025 Test Series

ಟೆಸ್ಟ್ ಕ್ರಿಕೆಟ್ ಅಂದ್ರೆ ಕಂಠ ಪಾಠ ಮಾಡ್ಕೊಂಡು ಹಾಡುವ ಪದ್ಯವಲ್ಲ..!

by Saaksha Editor
November 27, 2025
0

ಸೋತಾಗ ಹಿಗ್ಗಾಮುಗ್ಗ ಬೈಯುವುದು.. ಗೆದ್ದಾಗ ಸಿಕ್ಕಾಪಟ್ಟೆ ಹೊಗಳುವುದು... ಇದು ನಮ್ಮ ಜಾಯಮಾನವೂ ಹೌದು. ಮನುಷ್ಯನ ಸಹಜ ಸ್ವಭಾವವೂ ಹೌದು. ಇದೀಗ ಮುಗಿದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ...

ತವರಿನಲ್ಲಿ ಹರಿಣಗಳ ಎದುರು ವೈಟ್‌ವಾಷ್ ಮುಖಭಂಗ WTC ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತಲೂ ಕೆಳಗಿಳಿದ ಟೀಂ ಇಂಡಿಯಾ

ತವರಿನಲ್ಲಿ ಹರಿಣಗಳ ಎದುರು ವೈಟ್‌ವಾಷ್ ಮುಖಭಂಗ WTC ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತಲೂ ಕೆಳಗಿಳಿದ ಟೀಂ ಇಂಡಿಯಾ

by Shwetha
November 27, 2025
0

ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ಎರಡು ಪಂದ್ಯಗಳ ಸರಣಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram