ಐಪಿಎಲ್ 2020 ಸಿರಾಜ್ ದಾಳಿಗೆ ತತ್ತರಿಸಿದ ಕೆಕೆಆರ್ ಗೆ ಹೀನಾಯ ಸೋಲು
ಸುಂಟರಗಾಳಿಯಂತೆ ಬೌಲಿಂಗ್ ಮಾಡಿದ ಮಹಮ್ಮದ್ ಸಿರಾಜ್ ಅವರು ಆರ್ ಸಿಬಿ ತಂಡಕ್ಕೆ ಸುಲಭ ಗೆಲುವನ್ನು ತಂದುಕೊಡುವಲ್ಲಿ ಸಫಲರಾಗಿದ್ದಾರೆ.
8 ರನ್ ಗೆ ಮೂರು ವಿಕೆಟ್ ಕಬಳಿಸಿದ ಸಿರಾಜ್ ಕೆಕೆಆರ್ ತಂಡಕ್ಕೆ ಆಘಾತ ನೀಡಿದ್ರು.
ಸೀರಾಜ್ ನೀಡಿದ ಶಾಕ್‍ಗೆ ಕೆಕೆಆರ್ ತಂಡ ಎಂಟು ವಿಕೆಟ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತಲೆಬಾಗಿತ್ತು.
ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆದ್ರೆ ಕೆಕೆಆರ್ ತಂಡದ ಗೇಮ್ ಪ್ಲಾನ್ ಅನ್ನು ಉಲ್ಟಪಲ್ಟಾ ಮಾಡಿದ್ದು ಸೀರಾಜ್.
ಮೊದಲಿಗೆ ರಾಹುಲ್ ತ್ರಿಪಾಠಿ (1 ರನ್) ಪೆವಿಲಿಯನ್ ದಾರಿ ತೋರಿಸಿದ್ರು. ನಂತರ ನಿತೇಶ್ ರಾಣಾ ಅವರನ್ನು ಡಕೌಟ್ ಮಾಡಿದ್ರು.
ಇನ್ನೊಂದೆಡೆ ಶುಬ್ಮನ್ ಗಿಲ್ ಗೆ (1 ರನ್) ನವದೀಪ್ ಸೈನಿ ಪೆವಿಲಿಯನ್ ದಾರಿ ತೋರಿಸಿದ್ರು.
ಹಾಗೇ ಟಾಮ್ ಬಂಟನ್ ಅವರು 10 ರನ್ ಗಳಿಸುವಷ್ಟರಲ್ಲಿ ಸಿರಾಜ್ ಮತ್ತೊಮ್ಮೆ ಮಾರಕವಾಗಿ ಪರಿಣಮಿಸಿದ್ರು.
ಈ ಹಂತದಲ್ಲಿ ಕೆಕೆಆರ್ ತಂಡ ಮೊದಲ ನಾಲ್ಕು ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗಳಿಸಿದ್ದ ರನ್ 17.
ಮತ್ತೊಂದೆಡೆ ದಿನೇಶ್ ಕಾರ್ತಿಕ್ ಹೋರಾಟ 4 ರನ್ ಗೆ ಸೀಮಿತವಾಯ್ತು. ಪ್ಯಾಟ್ ಕಮಿನ್ಸ್ ಕೂಡ 4 ರನ್ ಗೆ ಸುಸ್ತಾದ್ರು.
ಈ ನಡುವೆ ನಾಯಕ ಇಯಾನ್ ಮೊರ್ಗಾನ್ 30 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಕುಲದೀಪ್ ಯಾದವ್ 12 ರನ್ ಗಳಿಸಿ ಔಟಾದ್ರೆ, ಫಗ್ರ್ಯುಸನ್ ಅಜೇಯ 19 ರನ್ ದಾಖಲಿಸಿದ್ರು.
ಆರ್ ಸಿಬಿಯ ಮಾರಕ ದಾಳಿಗೆ ತತ್ತರಿಸಿದ ಕೆಕೆಆರ್ ತಂಡ ಎಂಟು ವಿಕೆಟ್ ಕಳೆದುಕೊಂಡು 84 ರನ್ ಪೇರಿಸಿತ್ತು.
ಮಹಮ್ಮದ್ ಸಿರಾಜ್ 8 ರನ್ ಗೆ ಮೂರು ವಿಕೆಟ್ ಉರುಳಿಸಿದ್ರು. ಯುಜುವೇಂದ್ರ ಚಾಹಲ್ 15 ರನ್ ಗೆ ಎರಡು ವಿಕೆಟ್ ಕಬಳಿಸಿದ್ರು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತ್ತು.
ದೇವದತ್ತ್ ಪಡಿಕ್ಕಲ್ 25 ರನ್ ಗಳಿಸಿ ರನೌಟಾದ್ರು. ಆರೋನ್ ಫಿಂಚ್ 16 ರನ್ ಗಳಿಸಿದ್ರು.
ಇನ್ನು ಗುರುಕೀರತ್ ಸಿಂಗ್ ಅಜೇಯ 21 ಮತ್ತು ವಿರಾಟ್ ಕೊಹ್ಲಿ ಅಜೇಯ 18 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ಅದ್ಭುತ ಬೌಲಿಂಗ್ ದಾಳಿ ಮಾಡಿದ ಮಹಮ್ಮದ್ ಸಿರಾಜ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು.