ಐಪಿಎಲ್ 2021- ಪ್ರತಿಷ್ಠಿತ ಟೂರ್ನಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಎಂಟು ಆಟಗಾರರು ಇವ್ರೇ…!

1 min read
Shreyas Iyer, Delhi Capitals saakshatv

ಐಪಿಎಲ್ 2021- ಪ್ರತಿಷ್ಠಿತ ಟೂರ್ನಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಎಂಟು ಆಟಗಾರರು ಇವ್ರೇ…!

ಕೋವಿಡ್ -19 ಆತಂಕದ ನಡುವೆಯೂ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯುವುದು ಪಕ್ಕಾ. ಈಗಾಗಲೇ ಫ್ರಾಂಚೈಸಿಗಳು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.
ಈ ನಡುವೆ, ಐಪಿಎಲ್ ನಲ್ಲಿ ಆಡಬೇಕಿದ್ದ ಕೆಲವು ಆಟಗಾರರು ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಕೆಲವರು ಗಾಯದ ಸಮಸ್ಯೆ, ಇನ್ನು ಕೆಲವರು ವೈಯಕ್ತಿಕ ಕಾರಣಗಳನ್ನು ನೀಡಿ ಪ್ರತಿಷ್ಠಿತ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಒಟ್ಟು ಎಂಟು ಮಂದಿ ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯಿಂದ ವಂಚಿತರಾಗಿದ್ದಾರೆ.

IPL 2021- 8 players who will miss Indian Premier League is the biggest cricketing extravaganza

Josh Hazlewood, Chennai Super Kings saakshatvಶ್ರೇಯಸ್ ಅಯ್ಯರ್ – ಡೆಲ್ಲಿ ಕ್ಯಾಪಿಟಲ್ಸ್
ಇಂಗ್ಲೆಂಡ್ ಏಕದಿನ ಸರಣಿಯ ವೇಳೆ ಗಾಯ ಮಾಡಿಕೊಂಡಿರುವ ಶ್ರೇಯಸ್ ಅಯ್ಯರ್ ಟೂರ್ನಿಯಿಂದ ವಂಚಿತರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ಶ್ರೇಯಸ್,79 ಐಪಿಎಲ್ ಪಂದ್ಯಗಳನ್ನು ಆಡಿದ್ದು, 2200 ರನ್ ಗಳಿಸಿದ್ದಾರೆ. 2020ರಲ್ಲಿ ಅಯ್ಯರ್ ಸಾರಥ್ಯದ ಡೆಲ್ಲಿ ತಂಡ ಫೈನಲ್ ನಲ್ಲಿ ಮುಗ್ಗರಿಸಿತ್ತು. ಆದ್ರೆ ಶ್ರೇಯಸ್ ಅಯ್ಯರ್‍ಗೆ ನಷ್ಟವೇನೂ ಆಗಿಲ್ಲ, ಡೆಲ್ಲಿ ಫ್ರಾಂಚೈಸಿ ಅಯ್ಯರ್ ಗೆ ಏಳು ಕೋಟಿ ರೂ. ಸಂಭಾವಣೆಯನ್ನು ನೀಡಲಿದೆ.

ಜೋಶ್ ಹ್ಯಾಜಲ್‍ವುಡ್ – ಚೆನ್ನೈ ಸೂಪರ್ ಕಿಂಗ್ಸ್
ಟೂರ್ನಿ ಆರಂಭವಾಗುವುದಕ್ಕಿಂತ ಕೇವಲ 9 ದಿನಗಳು ಇರುವಾಗಲೇ ಜೋಶ್ ಹ್ಯಾಜಲ್ ವುಡ್ ಸಿಎಸ್ ಕೆ ತಂಡಕ್ಕೆ ಆಘಾತ ನೀಡಿದ್ದಾರೆ. ಆಶಷ್ ಮತ್ತು ಮುಂಬರು ವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಬೇಕು ಅನ್ನೋ ಕಾರಣಕ್ಕೆ ಆಸ್ಟ್ರೇಲಿಯಾದ ವೇಗಿ ಹ್ಯಾಜಲ್‍ವುಡ್ ಹಿಂದೆ ಸರಿದಿದ್ದಾರೆ.

ಮಿಟ್ಚೆಲ್ ಮಾರ್ಷ್ – ಸನ್ ರೈಸರ್ಸ್ ಹೈದ್ರಬಾದ್
ಆಸ್ಟ್ರೇಲಿಯಾದ ಆಲ್ ರೌಂಡರ್ ಆಗಿರುವ ಮಿಟ್ಚೆಲ್ ಮಾರ್ಷ್ ಅವರು ಕೂಡ ಕೊನೆ ಕ್ಷಣದಲ್ಲಿ ಹಿಂದೇಟು ಹಾಕಿದ್ದಾರೆ. ಏಳು ದಿನಗಳ ಕ್ವಾರಂಟೈನ್ ಮತ್ತು 50 ದಿನಗಳ ಜೈವಿಕ ಸುರಕ್ಷೆತೆಯಡಿಲ್ಲಿ ಆಡಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಮಿಟ್ಚೆಲ್ ಮಾರ್ಷ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮಿಟ್ಚೆಲ್ ಮಾರ್ಷ್ ಬದಲು ಎಸ್ ಆರ್ ಎಚ್ ತಂಡ ಜೇಸನ್ ರಾಯ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಜೋಶ್ ಫಿಲಿಪ್ಪೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಜೋಶ್ ಫಿಲಿಪ್ಪೆ. ಜೋಶ್ ಫಿಲಿಪ್ಪೆ ಕೂಡ ವೈಯಕ್ತಿಕ ಕಾರಣದಿಂದ ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿಲ್ಲ. ಹೀಗಾಗಿ ಆರ್ ಸಿಬಿ ಜೋಶ್ ಫಿಲಿಪ್ಪೆ ಬದಲು ನ್ಯೂಜಿಲೆಂಡ್ ನ ಫಿನ್ ಆಲೆನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

Jofra Archer, Rajasthan Royals saakshatvಜೋಫ್ರಾ ಆರ್ಚೆರ್ – ರಾಜಸ್ತಾನ ರಾಯಲ್ಸ್
ಭಾರತ ಸರಣಿಯ ವೇಳೆ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚೆರ್ ಅವರು ಗಾಯಗೊಂಡಿದ್ದರು. ಹೀಗಾಗಿ ಆರ್ಚೆರ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿಲ್ಲ.

ಮಾರ್ಕ್ ವುಡ್ – ಚೆನ್ನೈ ಸೂಪರ್ ಕಿಂಗ್ಸ್
ಇಂಗ್ಲೆಂಡ್ ನ ವೇಗಿ ಮಾರ್ಕ್ ವುಡ್ ಕೂಡ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಸ್ಕಿಪ್ ಆಗಿದ್ದಾರೆ. ಕುಟುಂಬದ ಜೊತೆ ಕಾಲ ಕಳೆಯಬೇಕು ಅನ್ನೋ ಕಾರಣ ನೀಡಿದ್ದಾರೆ.

ಡೇಲ್ ಸ್ಟೈನ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಕೂಡ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಗೆ ಕೈಕೊಟ್ಟಿದ್ದಾರೆ. 2019ರಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಕ್ರಿಕೆಟ್ ನಿಂದ ಸ್ವಲ್ಪ ದಿನ ದೂರ ಇರುವ ನಿರ್ಧಾರ ತೆಗೆದುಕೊಂಡಿರುವ ಸ್ಟೈನ್ 2021ರ ಐಪಿಎಲ್ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದಾರೆ.

ರಿಂಕು ಸಿಂಗ್ – ಕೊಲ್ಕತ್ತಾ ನೈಟ್ ರೈಡರ್ಸ್
ಮೊಣಕಾಲು ನೋವಿನಿಂದ ಬಳಲುತ್ತಿರುವ ರಿಂಕ್ ಸಿಂಗ್ ಕೆಕೆಆರ್ ತಂಡದಿಂದ ಹೊರಬಿದ್ದಿದ್ದಾರೆ, ಬ್ಯಾಟ್ಸ್ ಮೆನ್ ಆಗಿರುವ ರಿಂಕ್ ಸಿಂಗ್, 2017ರಲ್ಲಿ ಚೊಚ್ಚಲ ಐಪಿಎಲ್ ಆಡಿದ್ದು, ಇಲ್ಲಿಯ ತನಕ 11 ಪಂದ್ಯಗಳನ್ನು ಆಡಿದ್ದಾರೆ. ಕೆಕೆಆರ್ ತಂಡ ರಿಂಕ್ ಸಿಂಗ್ ಬದಲು ಗುರುಕೀರತ್ ಸಿಂಗ್ ಮಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ಮೂರು ಮಂದಿ ಆಟಗಾರರು ಗಾಯದಿಂದ ಪ್ರತಿಷ್ಠಿತ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದಾರೆ. ಇನ್ನುಳಿದ ಐದು ಮಂದಿ ಆಟಗಾರರು ವೈಯಕ್ತಿಕ ಕಾರಣ ನೀಡಿ ಐಪಿಎಲ್ ನಿಂದ ಸ್ಕಿಪ್ ಆಗಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd