ಐಪಿಎಲ್ 2021- ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡ ಅಕ್ಷರ್ ಪಟೇಲ್

1 min read
axar patel delhli capitals ipl 2021 saakshatv

ಐಪಿಎಲ್ 2021- ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡ ಅಕ್ಷರ್ ಪಟೇಲ್

axar patel delhli capitals ipl 2021 saakshatvಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಕೋವಿಡ್ -19 ಸೋಂಕಿನಿಂದ ಗುಣಮುಖರಾಗಿದ್ದಾರೆ.
20 ದಿನಗಳ ಕ್ವಾರಂಟೈನ್ ಬಳಿಕ ಅಕ್ಷರ್ ಪಟೇಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಅಕ್ಷರ್ ಪಟೇಲ್ ಅವರಿಗೆ ಏಪ್ರಿಲ್ 3ರಂದು ಕೋವಿಡ್ ಸೋಂಕು ದೃಢವಾಗಿತ್ತು. ನಂತರ ಅವರು ವೈದ್ಯರ ಚಿಕಿತ್ಸೆ ಮತ್ತು ಸಲಹೆಯಂತೆ 20 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದರು. 27ರ ಹರೆಯದ ಅಕ್ಷರ್ ಪಟೇಲ್ ಮಾರ್ಚ್ 28ರಂದು ಕೋವಿಡ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಆ ನಂತರ ಏಪ್ರಿಲ್ 3ರಂದು ಪಾಸಿಟಿವ್ ಬಂದಿತ್ತು. ಹೀಗಾಗಿ ಅಕ್ಷರ್ ಪಟೇಲ್ ಅವರು ಐಪಿಎಲ್ ನ ನಾಲ್ಕು ಪಂದ್ಯಗಳಿಂದ ವಂಚಿತರಾಗಿದ್ದರು.
ಇದೀಗ ಕೋವಿಡ್ ನಿಂದ ಚೇತರಿಸಿಕೊಂಡಿರುವ ಅಕ್ಷರ್ ಪಟೇಲ್ ಅವರು ಲಘುವಾಗಿ ಅಭ್ಯಾಸ ನಡೆಸುತ್ತಿದ್ದಾರೆ.

ipl 2021 – Axar recovers from COVID-19; joins Delhi Capitals

20 ದಿನಗಳ ನಂತರ ಹೊರ ಜಗತ್ತನ್ನು ನೋಡುತ್ತಿದ್ದೇನೆ. ಕ್ವಾರಂಟೈನ್ ಮುಗಿಸಿ ಹೊರಬಂದಿರುವುದು ಖುಷಿ ನೀಡಿದೆ. ತಂಡದ ಆಟಗಾರರನ್ನು ಭೇಟಿ ಮಾಡಿದ್ದೇನೆ. ಇದು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ನಂತರ ನನ್ನ ಬದುಕಿನ ಅವಿಸ್ಮರಣೀಯ ಕ್ಷಣ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.
axar patel delhli capitals ipl 2021 saakshatvನಾನು ರೂಮ್ ನಲ್ಲಿ ಒಬ್ಬಂಟಿಯಾಗಿದ್ದೆ. 20 ದಿನಗಳಿಂದ ನಾನು ಏನು ಮಾಡಿಲ್ಲ. ಐಪಿಎಲ್ ಪಂದ್ಯಗಳನ್ನು ನೋಡುತ್ತಿದ್ದೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಹುತೇಕ ಪಂದ್ಯಗಳನ್ನು ಗೆದ್ದಿದೆ. ಇದೀಗ ತಂಡವನ್ನು ಮತ್ತೆ ಸೇರಿಕೊಂಡಿರುವುದು ನನಗೆ ಸ್ಪೂರ್ತಿ ನೀಡಿದೆ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.
ಸದ್ಯ ನಾನು ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ಮಾಡುತ್ತಿದ್ದೇನೆ. ವೈದ್ಯರ ಹಾಗೂ ಟೀಮ್ ಮ್ಯಾನೇಜ್ ಮೆಂಟ್ ಸಲಹೆಯಂತೆ ಅಭ್ಯಾಸದಲ್ಲಿ ನಿರತನಾಗಿದ್ದೇನೆ. ನಾಯಕ ರಿಷಬ್ ಪಂತ್ ಮತ್ತು ಕೋಚ್ ರಿಕಿ ಪಾಂಟಿಂಗ್ ಸರ್ ಸಲಹೆಯಂತೆ ಮುಂದಿನ ಮೂರು ದಿನಗಳ ಕಾಲ ಲಘುವಾಗಿ ಅಭ್ಯಾಸ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಈಗಾಗಲೇ ಕೆಕೆಆರ್ ತಂಡದ ನಿತೇಶ್ ರಾಣಾ, ಆರ್ ಸಿಬಿ ತಂಡದ ದೇವ್ ದತ್ ಪಡಿಕ್ಕಲ್ ಕೂಡ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಈಗ ಐಪಿಎಲ್ ನಲ್ಲಿ ಆಡುತ್ತಿದ್ದಾರೆ.
ಮುಂದಿನ ಭಾನುವಾರ ಅಂದ್ರೆ ಏಪ್ರಿಲ್ 27ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಮುಖಾಮುಖಿಯಾಗಲಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd