ಕೋವಿಡ್ ಲಸಿಕೆ ತೆಗೆದುಕೊಳ್ಳುವ ನಿರ್ಧಾರ ಆಟಗಾರರಿಗೆ ಬಿಟ್ಟ ವಿಚಾರ – ಬಿಸಿಸಿಐ

1 min read
bcci covid 19 ipl 2021 saakshatv

ಕೋವಿಡ್ ಲಸಿಕೆ ತೆಗೆದುಕೊಳ್ಳುವ ನಿರ್ಧಾರ ಆಟಗಾರರಿಗೆ ಬಿಟ್ಟ ವಿಚಾರ – ಬಿಸಿಸಿಐ

bcci covid 19 ipl 2021 saakshatvಕ್ರಿಕೆಟ್ ಆಡಿಸಬೇಕು.. ದುಡ್ಡು ಮಾಡಬೇಕು.. ಇದು ಬಿಸಿಸಿಐನ ಮುಖ್ಯ ಉದ್ದೇಶ. ಅದನ್ನು ಹೊರತುಪಡಿಸಿ ಆಟಗಾರರ ಆರೋಗ್ಯದ ಬಗ್ಗೆ ಒಂಚೂರು ತಲೆಕೆಡಿಸಿಕೊಳ್ಳುತ್ತಿಲ್ಲ.
ಇದಕ್ಕೆ ಉತ್ತಮ ನಿದರ್ಶನ ಇದೀಗ ಕೋವಿಡ್ ಲಸಿಕೆ ವಿಚಾರ. ಹೌದು, ಭಾರತದಲ್ಲಿ ಮೇ1ರಿಂದ 18 ವರ್ಷ ಮೆಲ್ಟಟ್ಟವರಿಗೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಬಹುದು ಎಂಬ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಹೀಗಾಗಿ ಕ್ರಿಕೆಟಿಗರು ಕೂಡ ಕೋವಿಡ್ ಲಸಿಕೆ ತೆಗೆದುಕೊಳ್ಳಬಹುದಾಗಿದೆ.
ಈಗಾಗಲೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಜೈವಿಕ ಸುರಕ್ಷತೆಯಡಿಲ್ಲಿ ನಡೆಯುತ್ತಿದೆ. ಬಿಸಿಸಿಐ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಬಹಳ ಎಚ್ಚರಿಕೆಯಿಂದ ಟೂರ್ನಿಯನ್ನು ಸಂಘಟಿಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಆದ್ರೆ ಐಪಿಎಲ್ ಆಟಗಾರರು ಕೋವಿಡ್ ಲಸಿಕೆ ಪಡೆದುಕೊಳ್ಳಲೇಬೇಕು ಎಂದು ಬಿಸಿಸಿಐ ತಾಕೀತು ಮಾಡಿಲ್ಲ. ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಆಟಗಾರರಿಗೆ ಬಿಟ್ಟ ವಿಚಾರ ಎಂದು ಬಿಸಿಸಿಐ ಹೇಳಿದೆ.

IPL 2021: BCCI to let players decide on COVID-19 vaccination

bcci covid 19 ipl 2021 saakshatvಭಾರತೀಯ ಆಟಗಾರರು ಮೇ 1ರಿಂದ ಲಸಿಕೆ ಪಡೆದುಕೊಳ್ಳಬಹುದು. ಆದ್ರೆ ಲಸಿಕೆ ಪಡೆದುಕೊಳ್ಳಬೇಕೋ ಬೇಡವೋ ಎಂಬುದನ್ನು ಕ್ರಿಕೆಟ್ ಆಟಗಾರರೇ ನಿರ್ಧಾರ ಮಾಡಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಇನ್ನು ಐಪಿಎಲ್ ನಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಅಫಘಾನಿಸ್ತಾನ, ಬಾಂಗ್ಲಾದೇಶದ ಆಟಗಾರರು ಆಡುತ್ತಿದ್ದಾರೆ. ಆದ್ರೆ ಬಿಸಿಸಿಐ ಪ್ರಕಾರ ಭಾರತೀಯ ಆಟಗಾರರು ಮಾತ್ರ ಕೋವಿಡ್ ಲಸಿಕೆ ಪಡೆದುಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd