ಐಪಿಎಲ್ 2021 – ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಅಮೋಘ ಗೆಲುವು

1 min read
Chennai Super Kings opener Faf du Plessis csk ipl 2021 saakshatv

ಐಪಿಎಲ್ 2021 – ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಅಮೋಘ ಗೆಲುವು

Ruturaj Gaikwad  csk ipl 2021 saakshatvಶತಕ ವಂಚಿತ ಫಾಫ್ ಡು ಪ್ಲೇಸಸ್ ಹಾಗೂ ಅರ್ಧಶತಕ ವೀರ ರುತುರಾಜ್ ಗಾಯಕ್ ವಾಡ್ ಮತ್ತು ದೀಪಕ್ ಚಾಹರ್ ಅವರ ಮಾರಕ ಬೌಲಿಂಗ್… ಧೋನಿಯ ಮಾಸ್ಟರ್ ಮೈಂಡ್.. ಇಷ್ಟು ಸಾಕಿತ್ತು.. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 15ನೇ ಪಂದ್ಯದಲ್ಲಿ ಕೆಕೆ ಆರ್ ವಿರುದ್ಧ ಸಿಎಸ್ ಕೆ ತಂಡಕ್ಕೆ ಗೆಲುವು ದಾಖಲಿಸಲು..!
ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 18 ರನ್ ಗಳಿಂದ ಕೆಕೆಆರ್ ತಂಡವನ್ನು ಪರಾಭವಗೊಳಿಸಿತ್ತು. ಈ ಮೂಲಕ ಸಿಎಸ್ ಕೆ ತಂಡ ಸದ್ಯ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಕೆಕೆಆರ್ ತಂಡ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿದೆ.
ಟಾಸ್ ಸೋತ್ರೂ ಸಿಎಸ್ ಕೆ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೇಸಸ್ ಕೆಕೆಆರ್ ಬೌಲಿಂಗ್ ದಾಳಿಯನ್ನು ಧ್ವಂಸಗೊಳಿಸಿದ್ರು. ರುತುರಾಜ್ 42 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 64 ರನ್ ಸಿಡಿಸಿದ್ರು.

ipl 2021 Faf, Chahar set up CSK’s thrilling win over KKR
ಇನ್ನೊಂದೆಡೆ ಫಾಫ್ ಡು ಪ್ಲೇಸಸ್ ಅವರು ಕೆಕೆಆರ್ ತಂಡದ ಬೌಲರ್ ಗಳನ್ನು ಮನಬಂದಂತೆ ದಡಿಸಿದ್ರು. ಈ ನಡುವೆ ಮೋಯಿನ್ ಆಲಿ 12 ಎಸೆತಗಳಲ್ಲಿ 25 ರನ್ ದಾಖಲಿಸಿದ್ರೆ, ಧೋನಿ 17 ರನ್ ಗಳಿಸಿದ್ರು.
ಅಂತಿಮವಾಗಿ ಫಾಫ್ ಡು ಪ್ಲೇಸಸ್ 60 ಎಸೆತಗಳಲ್ಲಿ 9 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ನೆರವಿನಿಂದ ಅಜೇಯ 95 ರನ್ ಗಳಿಸಿದ್ರು. ರವೀಂದ್ರ ಜಡೇಜಾ ಅಜೇಯ ಆರು ದಾಖಲಿಸಿದ್ರು. ಸಿಎಸ್ ಕೆ ತಂಡ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 220 ರನ್ ದಾಖಲಿಸಿತ್ತು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಕೆಕೆಆರ್ ತಂಡಕ್ಕೆ ಆರಂಭದಲ್ಲೇ ದೀಪಕ್ ಚಾಹರ್ ಶಾಕ್ ಮೇಲೆ ಶಾಕ್ ನೀಡಿದ್ರು. ದೀಪಕ್ ಚಾಹರ್ ಅವರ ವೇಗದ ಎಸೆತಗಳಿಗೆ ಕೆಕೆಆರ್ ನ ಸ್ಟಾರ್ ಬ್ಯಾಟ್ಸ್ ಮೆನ್ ಗಳಾದ ನಿತೀಶ್ ರಾಣಾ (9), ಶುಬ್ಮನ್ ಗಿಲ್ (0), ಇಯಾನ್ ಮೊರ್ಗಾನ್ (7), ಸುನೀಲ್ ನರೇನ್ (4) ಪೆವಿಲಿಯನ್ ದಾರಿ ಹಿಡಿಯಬೇಕಾಯ್ತು.
deepak chahar csk saakshatvಇನ್ನೊಂದೆಡೆ ಎನ್‍ಗಿಡಿ ರಾಹುಲ್ ತ್ರಿಪಾಠಿ (8), ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ನೀಡಿದ್ದ ದಿನೇಶ್ ಕಾರ್ತಿಕ್ (40 ರನ್) ಅವರನ್ನು ಪೆವಿಲಿಯನ್ ದಾರಿ ಹಿಡಿಸುವಂತೆ ಮಾಡಿದ್ದರು.
ಹಾಗೇ ಅಪಾಯಕಾರಿ ಆಂಡ್ರೆ ರಸೆಲ್ 40 ರನ್ ಗೆ ಹೋರಾಟವನ್ನು ಮುಗಿಸಿದ್ರು. ಇದೇ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಪ್ಯಾಟ್ ಕಮಿನ್ಸ್ 34 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ಅಜೇಯ 66 ರನ್ ದಾಖಲಿಸಿದ್ರು. ಆದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪ್ಯಾಟ್ ಕಮಿನ್ಸ್ ಅವರಿಗೆ ಕೆಕೆಆರ್ ತಂಡದ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಸಾಥ್ ನೀಡಲಿಲ್ಲ. ಬೌಲರ್ ಗಳಾದ ಕಮಲೇಶ್ ನಾಗರ್ ಕೋಟಿ (0) ಅವರು ಎನ್ ಗಿಡಿ ಅವರಿಗೆ ವಿಕೆಟ್ ಒಪ್ಪಿಸಿದ್ರು. ಅಲ್ಲದೆ ವರುಣ್ ಚಕ್ರವರ್ತಿ ಮತ್ತು ಪ್ರಸಿದ್ಧ್ ಕೃಷ್ಣ ರನ್ ಗಳಿಸುವ ಆತುರದಲ್ಲಿ ಶೂನ್ಯ ಸುತ್ತಿ ಔಟಾದ್ರು. ಅಂತಿಮವಾಗಿ ಕೆಕೆಆರ್ ತಂಡ 19.1 ಓವರ್ ಗಳಲ್ಲಿ 202 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಲ್ಲದೆ 18 ರನ್ ಗಳಿಂದ ಸೋಲೊಪ್ಪಿಕೊಂಡಿತ್ತು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಾಫ್ ಡು ಪ್ಲೇಸಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd