ಐಪಿಎಲ್ ೨೦೨೧ ಫೈನಲ್- ಪ್ರಶಸ್ತಿಗಾಗಿ ಸಿಎಸ್ ಕೆ ಮತ್ತು ಕೆಕೆಆರ್ ಫೈಟ್
೧೪ನೇ ಆವೃತ್ತಿಯ ಐಪಿಎಲ್ ಟ್ರೋಫಿಗಾಗಿ ಚೆನ್ನೆöÊ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಒಂದು ಹೋರಾಟ ನಡೆಸಲಿವೆ.
ದುಬೈ ಇಂಟರ್ ನ್ಯಾಷನಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಹಾಗೇ ನೋಡಿದ್ರೆ ಐಪಿಎಲ್ ಟೂರ್ನಿಯ ಆರಂಭದಲ್ಲಿ ಚೆನ್ನೆöÊ ಹಾಗೂ ಕೆಕೆಆರ್ ತಂಡಗಳು ಫೈನಲ್ ಟಾಫ್ ಫೋರ್ ನಲ್ಲಿ ಕಾಣಿಸಿಕೊಳ್ಳುವುದೇ ಅನುಮಾನವಾಗಿತ್ತು. ಆದ್ರೆ ಉಭಯ ತಂಡಗಳು ಗೆಲುವಿನ ಅಭಿಯಾನವನ್ನು ಮುಂದುವರಿಸಿಕೊAಡು ಇದೀಗ ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿವೆ.
ಧೋನಿ ಸಾರಥ್ಯದ ಚೆನ್ನೆöÊ ತಂಡ ೯ನೇ ಬಾರಿ ಫೈನಲ್ ಪ್ರವೇಶಿಸಿದೆ. ಇದರಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಐದು ಬಾರಿ ರನ್ನರ್ ಅಪ್ ಪ್ರಶಸ್ತಿಗೆ ಸಮಾಧಾನಪಟ್ಟುಕೊಂಡಿದೆ. ಅಲ್ಲದೆ ಇದೀಗ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.
ಕಳೆದ ೧೪ ಐಪಿಎಲ್ ಆವೃತ್ತಿಗಳಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ಒಂದು ಬಾರಿ ಮಾತ್ರ ಪ್ಲೇ ಆಫ್ ಮತ್ತು ಒಂದು ಬಾರಿ ಸೆಮಿಫೈನಲ್ ಹಾಗೂ ಒಂದು ಬಾರಿ ಲೀಗ್ ಹಂತದಲ್ಲಿ ಮುಗ್ಗರಿಸಿದೆ. ಹಾಗೇ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಎರಡು ವರ್ಷ ನಿಷೇಧ ಅನುಭವಿಸಿದ್ರೂ ಐಪಿಎಲ್ ನಲ್ಲಿ ಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ.
ಇನ್ನು ಕೆಕೆಆರ್ ತಂಡ ಕಳೆದ ೧೪ ಆವೃತ್ತಿಗಳಲ್ಲಿ ಹಲವು ಏಳು ಬೀಳುಗಳನ್ನು ಕಂಡಿದೆ. ಆದ್ರೂ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ೨೦೧೨ ಮತ್ತು ೨೦೧೪ರಲ್ಲಿ ಚಾಂಪಿಯನ್ ಆಗಿರುವ ಕೆಕೆಆರ್ ತಂಡ, ನಾಲ್ಕು ಬಾರಿ ಪ್ಲೇ ಆಫ್ ನಲ್ಲಿ ಹಿನ್ನಡೆ ಅನುಭವಿಸಿದೆ. ಇನ್ನುಳಿದಂತೆ ಏಳು ಬಾರಿ ಲೀಗ್ ಹಂತಕ್ಕೆ ಸಮಾಧಾನಪಟ್ಟುಕೊಂಡಿದೆ.
ಒಟ್ಟಿನಲ್ಲಿ ಕೆಕೆಆರ್ ಮತ್ತು ಸಿಎಸ್ ಕೆ ತಂಡಗಳ ಹೋರಾಟ ಕ್ರಿಕೆಟ್ ಅಭಿಮಾನಿಗಳ ಮನ ತಣಿಸುವುದರಲ್ಲಿ ಎರಡು ಮಾತಿಲ್ಲ. ಜಿದ್ದಾ ಜಿದ್ದಿನ ಪೈಪೋಟಿಯಲ್ಲಿ ಗೆಲುವನ್ನು ಯಾವ ತಂಡ ಒಲಿಸಿಕೊಳ್ಳುತ್ತದೆ ಎಂಬುದು ಸದ್ಯಕ್ಕಿರುವ ಕುತೂಹಲ