ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2021ರ ಐಪಿಎಲ್ ಫೈನಲ್ ಪಂದ್ಯ…?

1 min read
IPL Auction

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2021ರ ಐಪಿಎಲ್ ಫೈನಲ್ ಪಂದ್ಯ…?

bcci ipl saakshatv2021ರ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಇನ್ನೂ ಅಂತಿಮವಾಗಿಲ್ಲ. ಈಗಾಗಲೇ ತಂಡಗಳ ಹರಾಜು ಪ್ರಕ್ರಿಯೆ ಮುಗಿದಿದೆ. ಫ್ರಾಂಚೈಸಿಗಳು ಮಹತ್ವದ ಟೂರ್ನಿಗೆ ಸಿದ್ದತೆಗಳನ್ನು ನಡೆಸಿಕೊಳ್ಳುತ್ತಿವೆ.
ಈ ನಡುವೆ ಬಿಸಿಸಿಐ ಕೂಡ ಪ್ಲಾನ್ ಮಾಡಿಕೊಂಡಿದೆ. ಕೋವಿಡ್-19 ಅಂತಕವಿರುವ ಕಾರಣ ಟೂರ್ನಿಯನ್ನು ಹೇಗೆ ಆಯೋಜನೆ ಮಾಡಬೇಕು ಎಂಬುದರ ಬಗ್ಗೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿವೆ.
ಈ ಮೊದಲು ಟೂರ್ನಿಯನ್ನು ಎರಡು ನಗರಗಳಲ್ಲಿ ಆಯೋಜನೆ ಮಾಡಲು ಬಿಸಿಸಿಐ ತೀರ್ಮಾನ ಮಾಡಿತ್ತು. ಮುಂಬೈ ಮತ್ತು ಪುಣೆಯಲ್ಲಿ ಟೂರ್ನಿಯನ್ನು ಆಯೋಜನೆ ಮಾಡುವ ಲೆಕ್ಕಚಾರವನ್ನು ಹಾಕಿಕೊಂಡಿತ್ತು.
ಅಂದ ಹಾಗೇ ಈ ಬಾರಿಯ ಐಪಿಎಲ್ ಟೂರ್ನಿ ಏಪ್ರಿಲ್ ನಿಂದ ಜೂನ್ ತನಕ ನಡೆಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ. ಅದೇ ರೀತಿ ಎರಡು ನಗರಗಳ ಬದಲು ಆರು ನಗರಗಳಲ್ಲಿ ಪಂದ್ಯಗಳನ್ನು ಆಯೋಜನೆ ಮಾಡುವುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜೊತೆಗೆ ಪ್ಲೇ ಆಫ್ ಮತ್ತು ಫೈನಲ್ ಪಂದ್ಯವನ್ನು ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸುವ ಸಾಧ್ಯತೆಯೂ ಇದೆ.
ಆದ್ರೆ ಬಿಸಿಸಿಐನ ಈ ಹೊಸ ನಿರ್ಧಾರ ಖಂಡಿತವಾಗಿಯೂ ಫ್ರಾಂಚೈಸಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಯಾಕಂದ್ರೆ ಆರು ನಗರದಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಿದ್ರೆ ಆಟಗಾರರ ಸುರಕ್ಷತೆಗೆ ದಕ್ಕೆಯಾಗುವಂತಹ ಆತಂಕ ಕೂಡ ಫ್ರಾಂಚೈಸಿಗಳಿಗೆ ಇದೆ.
ಕಳೆದ ಬಾರಿ ದುಬೈನಲ್ಲಿ ಮೂರು ಅಂಗಣದಲ್ಲಿ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು. ಜೈವಿಕ ಸುರಕ್ಷತೆಯೊಂದಿಗೆ ಟೂರ್ನಿಯನ್ನು ಸಂಘಟಿಸಲಾಗಿತ್ತು.
ಅದೇ ರೀತಿ ಈ ಬಾರಿಯ ಐಪಿಎಲ್ ಕೂಡ ಜೈವಿಕ ಸುರಕ್ಷತೆಯಡಿಯಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಅದು ಅಲ್ಲದೆ ಮಹಾರಾಷ್ಟ್ರ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಕೊವಿಡ್ -19 ಭಯ ಮತ್ತೆ ಮೂಡಿಸಿದೆ. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶ ಸಿಗುತ್ತಾ ಅನ್ನೋದು ಕೂಡ ಅನುಮಾನವಾಗಿದೆ.
ಒಟ್ಟಿನಲ್ಲಿ ಬಿಸಿಸಿಐ ಇನ್ನೂ ಕೂಡ 2021ರ ಐಪಿಎಲ್ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಬಿಸಿಸಿಐ ನಿರ್ಧಾರ ಬಂದ ಮೇಲೆ ಅಂತಿಮ ರೂಪುರೇಷೆ ಸಿಗಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd