ಐಪಿಎಲ್ 2021- ಮುಂದುವರಿದ ಆರ್ ಸಿಬಿ ಗೆಲುವಿನ ಓಟ.. ಪಡಿಕ್ಕಲ್ ಅಜೇಯ ಶತಕ- ಕೋಹ್ಲಿ ಅಜೇಯ 72 ರನ್

1 min read
devdutt padikkal rcb saakshatv ipl 2021

ಐಪಿಎಲ್ 2021- ಮುಂದುವರಿದ ಆರ್ ಸಿಬಿ ಗೆಲುವಿನ ಓಟ.. ಪಡಿಕ್ಕಲ್ ಅಜೇಯ ಶತಕ- ಕೋಹ್ಲಿ ಅಜೇಯ 72 ರನ್

virat kohli saakshatv rcb ipl 2021ನಾಯಕ ವಿರಾಟ್ ಕೊಹ್ಲಿ ಮತ್ತು ಯುವ ಬ್ಯಾಟ್ಸ್ ಮೆನ್ ದೇವ್ ದತ್ ಪಡಿಕ್ಕಲ್ ಅವರ ಜಬರ್ ದಸ್ತ್ ಆಟದ ನೆರವನ್ನು ಪಡೆದ ಆರ್ ಸಿಬಿ ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 16ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಮುಂಬೈ ನಲ್ಲಿ ಗೆಲ್ಲಲು 178 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಆರ್ ಸಿಬಿಗೆ ರಾಯಲ್ಸ್ ಬೌಲರ್ ಗಳು ಪರಿಣಾಮಕಾರಿಯಾಗಲೇ ಇಲ್ಲ.
ಆರಂಭಿಕರಾದ ದೇವ್ ದತ್ ಪಡಿಕ್ಕಲ್ ಅಜೇಯ 101 ರನ್ ಸಿಡಿಸಿದ್ರೆ, ವಿರಾಟ್ ಕೊಹ್ಲಿ ಅಜೇಯ 72 ರನ್ ದಾಖಲಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದ್ರು.
ರಾಜಸ್ತಾನ ರಾಯಲ್ಸ್ ತಂಡದ ಬೌಲಿಂಗ್ ದಾಳಿಯನ್ನು ಧೂಳಿ ಪಟ ಮಾಡಿದ್ದ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ 16.3 ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 181 ರನ್ ದಾಖಲಿಸಿತ್ತು.

ipl 2021 – Padikkal hits 101 as RCB whip Rajasthan Royals

ದೇವ್ ದತ್ ಪಡಿಕ್ಕಲ್ 52 ಎಸೆತಗಳಲ್ಲಿ 11 ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ಅಜೇಯ 101 ರನ್ ಗಳಿಸಿದ್ರೆ, ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ನೆರವಿನಿಂದ ಅಜೇಯ 72 ರನ್ ಸಿಡಿಸಿದ್ರು.\
riyan parag rajastan royals saakshatv ipl 2021ಇದಕ್ಕು ಮೊದಲು ಟಾಸ್ ಸೋತ್ರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡ ರಾಜಸ್ತಾನ ರಾಯಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿತ್ತು.
ಜೋಸ್ ಬಟ್ಲರ್ 8 ರನ್, ಮನನ್ ವೋಹ್ರಾ 7 ರನ್ ಹಾಗೂ ನಾಯಕ ಸಂಜು ಸಾಮ್ಸನ್ 21 ರನ್ ಮತ್ತು ಡೇವಿಡ್ ಮಿಲ್ಲರ್ ಶೂನ್ಯ ಸುತ್ತಿ ಪೆವಿಲಿಯನ್ ದಾರಿ ಹಿಡಿದಾಗ ರಾಜಸ್ತಾನ ರಾಯಲ್ಸ್ ತಂಡ 43 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಂತರ ಶಿವಮ್ ದುಬ್ ಮತ್ತು ರಿಯಾನ್ ಪರಾಗ್ ಐದನೇ ವಿಕೆಟ್ ಗೆ 56 ರನ್ ಕಲೆ ಹಾಕಿ ತಂಡಕ್ಕೆ ಚೇತರಿಕೆ ನೀಡಿದ್ರು. ರಿಯಾನ್ ಪರಾಗ್ 25 ರನ್ ಗಳಿಸಿದ್ರೆ, ಶಿವಮ್ ದುಬ್ 46 ರನ್ ದಾಖಲಿಸಿದ್ರು.
ಬಳಿಕ ರಾಹುಲ್ ಟೆವಾಟಿಯಾ ಮಿಂಚಿನ 40 ರನ್ ದಾಖಲಿಸಿದ್ರೆ, ಕ್ರಿಸ್ ಮೋರಿಸ್ 10 ರನ್ ಗಳಿಸಿದ್ರು. ಶ್ರೇಯಸ್ ಗೋಪಾಲ್ ಅಜೇಯ 7 ರನ್ ದಾಖಲಿಸಿದ್ರು. ಅಂತಿಮವಾಗಿ ರಾಜಸ್ತಾನ ರಾಯಲ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ದಾಖಲಿಸಿತು.
ಐಪಿಎಲ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ದೇವ್ ದತ್ ಪಡಿಕ್ಕಲ್ ಅವರಿಗೆ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು. ಅಲ್ಲದೆ ಆರ್ ಸಿಬಿ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd