ಐಪಿಎಲ್ 2021- ಆರ್ ಸಿಬಿಗೆ ಕೋವಿಡ್ ಶಾಕ್.. ದೇವದತ್ ಪಡಿಕ್ಕಲ್‍ಗೆ ಕೊರೋನಾ ಪಾಸಿಟಿವ್

1 min read

ಐಪಿಎಲ್ 2021- ಆರ್ ಸಿಬಿಗೆ ಕೋವಿಡ್ ಶಾಕ್.. ದೇವದತ್ ಪಡಿಕ್ಕಲ್‍ಗೆ ಕೊರೋನಾ ಪಾಸಿಟಿವ್

14ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕಿಂತ ಮುನ್ನವೇ ಆಟಗಾರರಿಗೆ ಕೋವಿಡ್ ಸೋಂಕು ಅಂಟಿಕೊಳ್ಳುತ್ತಿದೆ. ವಾಂಖೆಡೆ ಮೈದಾನದ ಎಂಟು ಮಂದಿ ಸಿಬ್ಬಂದಿಗಳಿಗೆ ಮತ್ತು ಮೂವರು ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಏಪ್ರಿಲ್ 3ರಂದು ಸುದ್ದಿಯಾಗಿತ್ತು.
ಇದೀಗ ಅದ್ರ ಬೆನ್ನಲ್ಲೇ ಆರ್ ಸಿಬಿ ಕ್ಯಾಂಪ್ ಗೂ ಕೋವಿಡ್ ಸೋಂಕು ಆವರಿಸಿಕೊಂಡಿದೆ. ಆರ್ ಸಿಬಿ ತಂಡದ ಸ್ಟಾರ್ ಬ್ಯಾಟ್ಸ್ ಮೆನ್ ದೇವದತ್ ಪಡಿಕ್ಕಲ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ದೇವದತ್ ಪಡಿಕ್ಕಲ್ ಆರ್ ಸಿಬಿ ತಂಡದ ಪ್ರಮುಖ ಬ್ಯಾಟ್ಸ್ ಮೆನ್. ಕಳೆದ ಐಪಿಎಲ್ ನಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಆರಂಭಿಕ ಬ್ಯಾಟ್ಸ್ ಮೆನ್ ಪಡಿಕ್ಕಲ್ ಅತ್ಯುತ್ತಮ ಫಾರ್ಮ್ ನಲ್ಲಿ ಕೂಡ ಇದ್ರು.
ಇತ್ತೀಚೆಗೆ ಮುಕ್ತಾಯಗೊಂಡ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರನ್ ಮಳೆಯನ್ನೇ ಸುರಿಸಿದ್ರು. 20ರ Mohammed Azharuddeenಹರೆಯದ ಪಡಿಕ್ಕಲ್ ಅವರು ಏಳು ಪಂದ್ಯಗಳಲ್ಲಿ 737 ರನ್ ಕಲೆ ಹಾಕಿದ್ದರು.
ಇದೀಗ ಐಪಿಎಲ್ ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ರು. ಏಪ್ರಿಲ್ 9ರಿಂದ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ 2021ರ ಐಪಿಎಲ್ ನ ಮೊದಲ ಪಂದ್ಯ ಚೆನ್ನೈ ನಲ್ಲಿ ನಡೆಯಲಿದೆ.
ಆದ್ರೆ ಪಡಿಕ್ಕಲ್ ಅವರು ಐಸೋಲೇಷನ್ ನಲ್ಲಿರುವುದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗುವುದು ಬಹುತೇಖ ಖಚಿತ.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್, ಕೆಕೆಆರ್ ತಂಡದ ನಿತೇಶ್ ರಾಣ, ಹಾಗೇ ಆರ್ ಸಿಬಿಯ ದೇವದತ್ ಪಡಿಕ್ಕಲ್ ಮತ್ತು ಚೆನ್ನೈ ತಂಡದ ಆಟಗಾರನಿಗೂ ಕೊರೊನಾ ಪಾಸಿಟಿವ್ ಬಂದಿದೆ.
ಒಟ್ಟಿನಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದರಿಂದ ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd