ಐಪಿಎಲ್ 2021 – ಆರ್ ಸಿಬಿಗೆ ಕೋವಿಡ್ ಆಘಾತ.. ಡೇನಿಯಲ್ ಸ್ಯಾಮ್ಸ್ ಗೆ ಕೊರೋನಾ ಪಾಸಿಟಿವ್

1 min read

ಐಪಿಎಲ್ 2021 – ಆರ್ ಸಿಬಿಗೆ ಕೋವಿಡ್ ಆಘಾತ.. ಡೇನಿಯಲ್ ಸ್ಯಾಮ್ಸ್ ಗೆ ಕೊರೋನಾ ಪಾಸಿಟಿವ್

14ನೇ ಅವೃತ್ತಿಯ ಐಪಿಎಲ್ ಟೂರ್ನಿ ಶುರುವಾಗುವ ಮುನ್ನವೇ ಆರ್ ಸಿಬಿ ಮತ್ತೊಂದು ಆಘಾತವಾಗಿದೆ. ಈಗಾಗಲೇ ತಂಡದ ಸ್ಟಾರ್ ಬ್ಯಾಟ್ಸ್ ಮೆನ್ ದೇವದತ್ ಪಡಿಕ್ಕಲ್ ಕೋವಿಡ್ 19 ಪಾಸಿಟಿವ್ ಬಂದಿದ್ದು, ಎರಡನೇ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ. ಸದ್ಯ ಐಸೋಲೇಷನ್ ನಲ್ಲಿದ್ದಾರೆ. ಹೀಗಾಗಿ ಏಪ್ರಿಲ್ 9ರಿಂದ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ದೇವ್‍ದತ್ ಪಡಿಕ್ಕಲ್ ಆಡುವುದು ಅನುಮಾನವಾಗಿದೆ.

ipl 2021 – RCB’s Daniel Sams tests positive for COVID-19

ಇದ್ರ ಬೆನ್ನಲ್ಲೇ ಆರ್ ಸಿಬಿ ಮತ್ತೊಬ್ಬ ಆಟಗಾರ ಡೇನಿಯಲ್ ಸ್ಯಾಮ್ಸ್ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ.
ಆಸ್ಟ್ರೇಲಿಯಾದ ಆಲ್ ರೌಂಡರ್ ಆಗಿರುವ ಡೇನಿಯಲ್ ಸ್ಯಾಮ್ಸ್ ಅವರು ಕಳೆದ ಏಪ್ರಿಲ್ 3ರಂದು ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ನಡೆಸಿದ್ದ ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿತ್ತು. ಇದೀಗ ಎರಡನೇ ಟೆಸ್ಟ್ ನಲ್ಲಿ ಡೇನಿಯಲ್ ಸ್ಯಾಮ್ಸ್ ಅವರಿಗೆ ಪಾಸಿಟಿವ್ ಬಂದಿದೆ.
ಈ ವಿಚಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದೆ.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್, ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪಿಂಗ್ ಸಲಹೆಗಾರ ಕಿರಣ್ ಮೊರೆ ಸೇರಿದಂತೆ ವಾಂಖೇಡೆ ಮೈದಾನದ ಸಿಬ್ಬಂದಿಗಳಿಗೂ ಕೋವಿಡ್ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd