ರಿಷಬ್ ಪಂತ್ ನಾಯಕತ್ವದ ಬಗ್ಗೆ ನನಗೂ ಕುತೂಹಲವಿದೆ – ಡಿಸಿ ಹೆಡ್ ಕೋಚ್ ರಿಕಿ ಪಾಂಟಿಂಗ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕ ರಿಷಬ್ ಪಂತ್ ತನ್ನ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸುತ್ತಾರೆ ಅನ್ನೋದನ್ನು ನೋಡಲು ನಾನು ಕುತೂಹಲ ಹೊಂದಿದ್ದೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಗಾಯಗೊಂಡ ಕಾರಣ ರಿಷಬ್ ಪಂತ್ ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಬ್ ಪಂತ್ ತನಗೆ ಸಿಕ್ಕಿರುವ ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಯಾಕಂದ್ರೆ ರಿಷಬ್ ಪಂತ್ ಜವಾಬ್ದಾರಿಯನ್ನು ತುಂಬಾನೇ ಇಷ್ಟಪಡುತ್ತಾನೆ. ತಂಡದ ಪ್ರಮುಖ ಆಟಗಾರನಾಗುವುದನ್ನು ಬಯಸುತ್ತಾನೆ. ಹೊಸ ಜವಾಬ್ದಾರಿ ಆತನಿಗೆ ಸೂಕ್ತ ಎನಿಸುತ್ತಿದೆ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ರಿಷಬ್ ಪಂತ್ಗೆ ನಾವು ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತೇವೆ. ತಂಡದ ಹೆಡ್ ಕೋಚ್, ಟೀಮ್ ಮ್ಯಾನೇಜ್ ಮೆಂಟ್ ಹಾಗೂ ಹಿರಿಯ ಆಟಗಾರರು ನೆರವು ನೀಡುತ್ತಾರೆ. ಆದ್ರೆ ನನಗೆ ಅನ್ನಿಸುವ ಪ್ರಕಾರ ಆತನಿಗೆ ಹೆಚ್ಚಿನ ಸಹಾಯದ ಅಗತ್ಯ ಇರಲ್ಲ ಎಂದು ನಾನು ಭಾವಿಸುತ್ತೇನೆ. ಯಾಕಂದ್ರೆ ರಿಷಬ್ ಪಂತ್ ಪಂದ್ಯದ ಗತಿಯನ್ನು ಅರಿತುಕೊಳ್ಳುವ ಕಲೆಯನ್ನು ಅರಿತುಕೊಂಡಿದ್ದಾನೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.