IPL 2021 | ಅಬುಧಾಬಿಯಲ್ಲಿ CSK vs RR ನಡುವಿನ ಹಣಾಹಣಿ

1 min read
CSK vs RR saaksha tv

ಚೆನ್ನೈ ಸೂಪರ್​​ ಕಿಂಗ್ಸ್​​​ ಆಲ್​​ರೆಡಿ ಪ್ಲೇ-ಆಫ್​​ನಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ. ರಾಜಸ್ಥಾನ ರಾಯಲ್ಸ್​​ಗೆ ಇನ್ನುಳಿದ 3 ಪಂದ್ಯಗಳಲ್ಲಿ ಎಲ್ಲವನ್ನೂ ಗೆಲ್ಲಬೇಕಾದ ಸ್ಥಿತಿ. ಒಂದು ಪಂದ್ಯ ಸೋತರೂ ರಾಜಸ್ಥಾನ ಟೂರ್ನಿಯಿಂದ ಔಟ್​​. ಚೆನ್ನೈ ಸ್ಥಿತಿ ಹಾಗಲ್ಲ. ಆದರೆ ಟಾಪ್​​ ಟುನಲ್ಲಿ ಭದ್ರವಾಗಿ ಇರಬೇಕಾದರೆ ಇನ್ನೊಂದು ಪಂದ್ಯ ಗೆಲ್ಲಬೇಕು. ಹೀಗಾಗಿ ಅಬುಧಾಭಿಯಲ್ಲಿ ನಡೆಯುವ ಸಿಎಸ್​​ಕೆ ಮತ್ತು ರಾಜಸ್ಥಾನ ರಾಯಲ್ಸ್​ ನಡುವಿನ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ.

ತಂಡಗಳ ಲೆಕ್ಕಾಚಾರಕ್ಕೆ ಬಂದರೆ ಚೆನ್ನೈ ಆಲ್​​ಮೋಸ್ಟ್​​​ ಪರ್ಫೆಕ್ಟ್​​ ಟೀಮ್​​ ಅನ್ನುವ ಹಾಗಿದೆ. ಬೌಲಿಂಗ್​​ನ ಸ್ಟೆಬಿಲಿಟಿ ಮತ್ತು ಬ್ಯಾಟಿಂಗ್​​ನ ಡೆಪ್ತ್​​ ಚೆನ್ನೈ ತಂಡವನ್ನು ಸೋಲಿಲ್ಲದ ಸರದಾರ ಅನ್ನುವ ಹಾಗೆ ಮಾಡಿದೆ.  ಶಾರ್ದೂಲ್​​ ಠಾಕೂರ್​​​​​​​​ ಮತ್ತು ದೀಪರ್​​ ಚಹರ್​​ ಬ್ಯಾಟಿಂಗ್​​ನಲ್ಲಿ 9 ಮತ್ತು 10ನೇ ಸ್ಥಾನದಲ್ಲಿ ಬರ್ತಾಇರೋದು ಚೆನ್ನೈ ಬ್ಯಾಟಿಂಗ್​​ನ ಸ್ಥಿರ ಆಟಕ್ಕೆ ಸಾಕ್ಷಿ.

CSK vs RR saaksha tv

ಚೆನ್ನೈ ಬ್ಯಾಟಿಂಗ್​​ ಲೈನ್​​ ಅಪ್​​ನಲ್ಲಿ ಸುರೇಶ್​​ ರೈನಾ ಒಬ್ಬರೇ ಕೊಂಚ ಗಲಿಬಿಲಿಗೊಂಡಂತೆ ಇದೆ. ಉಳಿದವರು ಸೂಪರ್​. ಬೌಲಿಂಗ್​​ನಲ್ಲೂ ಅಷ್ಟೇ. ಕಂಟ್ರೋಲ್​​ ಮತ್ತು ಲೈನ್​​ ಅಂಡ್​​ ಲೆಂಗ್ತ್​​ ಚೆನ್ನಾಗಿ ಕಂಡು ಬರುತ್ತಿದೆ. ಚಹರ್​, ಶಾರ್ದೂಲ್​, ಬ್ರಾವೋ, ಜಡೇಜಾ ಮತ್ತು ಹ್ಯಾಜಲ್​​ವುಡ್​​ ಪಾರ್ಟನರ್​​ಶಿಪ್​​ ತಂಡವನ್ನು ಫರ್ಫೆಕ್ಟ್​​ ಮಾಡಿಬಿಟ್ಟಿದೆ. ಚೆನ್ನೈ 1 ಪಂದ್ಯಗಳಲ್ಲಿ 9ನ್ನು ಗೆದ್ದು 18 ಅಂಕ ಸಂಪಾದಿಸಿ ಪ್ಲೇ-ಆಫ್​​ಗೆ ಅರ್ಹತೆ ಪಡೆದಿದೆ.

ರಾಯಲ್ಸ್​​ ತಂಡದ ಚೆನ್ನೈ ತಂಡದ ವಿರುದ್ಧ ದಿಕ್ಕಿನಲ್ಲಿದೆ. ಬ್ಯಾಟಿಂಗ್​​ನಲ್ಲಿ ಸ್ಥಿರತೆ ಇಲ್ಲ. ಬೌಲಿಂಗ್​​ನಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ವಿಶ್ವಾಸವಿಲ್ಲ. ಹೀಗಾಗಿ ರಾಯಲ್ಸ್​​​ ಪರದಾಟ ನಡೆಸುತ್ತಿದೆ. ಎವಿನ್​​ ಲೆವಿಸ್​​ ಕ್ರೀಸ್​​ನಲ್ಲಿ ನಿಂತುಕೊಂಡ್ರೆ ಸ್ಪೋಟಕ ಆಟ ಆಡುತ್ತಾರೆ. ಸಂಜುಸ್ಯಾಮ್ಸನ್​​ ಕೂಡ ಅಷ್ಟೇ. ಆದರೆ ಸ್ಥಿರತೆ ಇಲ್ಲದಿರುವುದು ಹೊಡೆತ ನೀಡಿದೆ. ಬೌಲಿಂಗ್​​ನಲ್ಲಿ ಕ್ರಿಸ್​​ಮೊರಿಸ್​​ ದುಬಾರಿ ಆಗ್ತಿದ್ದಾರೆ.  ಉಳಿದ ಬೌಲರ್​​ಗಳು ಇಂಪಾಕ್ಟ್​​ ಆಗಿಲ್ಲ. ಹೀಗಾಗಿ ರಾಯಲ್ಸ್​​​ ತಂಡವೇ ಅಸ್ಥಿರವಾಗಿದೆ. ರಾಯಲ್ಸ್​​ 11 ಪಂದ್ಯಗಳಿಂದ 8 ಅಂಕ ಸಂಪಾದಿಸಿ ಟೂರ್ನಿಯಿಂದ ಹೊರ ಹೋಗುವ ಭೀತಿಯಲ್ಲಿದೆ.

ಸಂಭಾವ್ಯ XI

ಚೆನ್ನೈ ಸೂಪರ್​​ ಕಿಂಗ್ಸ್​​

  1. ಫಾಫ್ ಡು ಪ್ಲೆಸಿಸ್, 2. ರುತುರಾಜ್ ಗಾಯಕ್ವಾಡ್, 3 ಮೊಯಿನ್ ಆಲಿ, 4. ಅಂಬಟಿ ರಾಯುಡು, 5. ಸುರೇಶ್ ರೈನಾ, 6. ಎಂ.ಎಸ್.ಧೋನಿ, 7. ರವೀಂದ್ರ ಜಡೇಜಾ, 8. ಡ್ವೈನ್ ಬ್ರಾವೋ, 9. ಶಾರ್ದೂಲ್ ಠಾಕೂರ್, 10. ದೀಪಕ್ ಚಹರ್, 11. ಜೋಶ್ ಹ್ಯಾಜಲ್ವುಡ್/ ಸ್ಯಾಮ್ ಕರ್ರನ್/ ಇಮ್ರಾನ್ ತಾಹಿರ್

ರಾಜಸ್ಥಾನ ರಾಯಲ್ಸ್​​

  1. ಎವಿನ್​​ ಲೆವಿಸ್​​​​, 2. ಯಶಸ್ವಿ ಜೈಸ್ವಾಲ್​​, 3 ಸಂಜು ಸ್ಯಾಮ್ಸನ್​​, 4. ಲಿಯಂ ಲಿವಿಂಗ್​​ಸ್ಟೋನ್​​​, 5. ಮಹಿಪಾಲ್​​ ಲೊಮ್ರೊರ್​​, 6. ರಿಯಾನ್​​ ಪರಾಗ್​​, 7. ರಾಹುಲ್​​ ತೆವಾಟಿಯಾ, 8. ಕ್ರಿಸ್​​ ಮೊರಿಸ್​​, 9. ಚೇತನ್​​ ಸಕಾರಿಯಾ, 10. ಕಾರ್ತಿಕ್​ ತ್ಯಾಗಿ, 11. ಮುಸ್ತಫಿಝುರ್​​ ರೆಹಮಾನ್​​.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd