IPL 2021 – ಐಪಿಎಲ್ ನಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಟಾಪ್ -5 ಬ್ಯಾಟ್ಸ್ ಮೆನ್ ಗಳು..!

1 min read
ipl top-5 batesmens saakshatv

ಐಪಿಎಲ್ ನಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಟಾಪ್ -5 ಬ್ಯಾಟ್ಸ್ ಮೆನ್ ಗಳು..!

virat kohli saakshatv rcbಐಪಿಎಲ್ 2021. 14ನೇ ಆವೃತ್ತಿಯ ಟೂರ್ನಿ. ವಿಶ್ವದ ಶ್ರೀಮಂತ ದೇಸಿ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿ ನಮ್ಮ ಐಪಿಎಲ್.
ಕಳೆದ 13 ಆವೃತ್ತಿಯ ಐಪಿಎಲ್ ಟೂರ್ನಿಗಳಲ್ಲಿ ಸಾಕಷ್ಟು ರೋಚಕ ಪಂದ್ಯಗಳು ನಡೆದಿವೆ. ದಾಖಲೆಯ ಪಂದ್ಯಗಳು ನಡೆದಿವೆ. ವಿವಾದಾತ್ಮಕ ಪಂದ್ಯಗಳು ನಡೆದಿವೆ. ಬ್ಯಾಟ್ಸ್ ಮೆನ್ ಗಳು ಹರಿಯುವ ನೀರಿನಂತೆ ರನ್ ಗಳಿಸಿದ್ರೆ, ಕಿಂಡಿ ಅಣೆಕಟ್ಟುಗಳಂತೆ ಬೌಲರ್‍ಗಳು ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಹೀಗೆ ದಾಖಲೆಗಳು, ಅಂಕಿ ಅಂಶಗಳ ಮೂಲಕ ಕ್ರಿಕೆಟ್ ಆಟದ ಜೊತೆ ಮನರಂಜನೆಯನ್ನು ನೀಡುತ್ತಿರುವ ಐಪಿಎಲ್ ಟೂರ್ನಿ ಇದೀಗ ಮತ್ತೆ ಶುರುವಾಗಿದೆ. ಕೋವಿಡ್ ಆತಂಕದ ನಡುವೆಯೇ ಐಪಿಎಲ್ ಟೂರ್ನಿಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ.
ಅಂದ ಹಾಗೇ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ದಾಖಲಿಸಿದ್ದ ದಾಖಲೆಯ ಹೆಸರು ಯಾರ ಹೆಸರಿನಲ್ಲಿದೆ.. ರನ್ ಧಾರಣೆಯಲ್ಲಿ ಟಾಫ್ -5 ಸ್ಥಾನವನ್ನು ಯಾರು ಪಡೆದುಕೊಂಡಿದ್ದಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ.

IPL 2021: Who are the top 5 run-getters in Indian Premier League history?

ನಂಬರ್-1 – ವಿರಾಟ್ ಕೊಹ್ಲಿ..
ವಿರಾಟ್ ಕೊಹ್ಲಿ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ. ಕಳೆದ 13 ವರ್ಷಗಳಿಂದ ಆರ್ ಸಿಬಿ ತಂಡವನ್ನೇ ಪ್ರತಿನಿಧಿಸುತ್ತಿದ್ದಾರೆ. ವಿರಾಟ್ ಕೊಹ್ಲಿ 184 ಇನಿಂಗ್ಸ್ ಗಳಲ್ಲಿ 5878 ರನ್ ಕಲೆ ಹಾಕಿದ್ದಾರೆ. 38 ಸರಾಸರಿ.. 130 ಸ್ಟ್ರೈಕ್ ರೇಟ್. ಐದು ಶತಕಗಳನ್ನು ದಾಖಲಿಸಿದ್ದಾರೆ.
ನಂಬರ್ -2 – ಸುರೇಶ್ ರೈನಾ
ಸುರೇಶ್ ರೈನಾ.. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆವೃತ್ತಿಯ ಟೂರ್ನಿಯಲ್ಲಿ ಸುರೇಶ್ ರೈನಾ ಆಡಿಲ್ಲ. ಸುರೇಶ್ ರೈನಾ ಒಟ್ಟು 34ರ ಸರಾಸರಿಯಲ್ಲಿ 5368 ರನ್ ಪೇರಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಿಎಸ್ ಕೆ ತಂಡದ ಆಧಾರಸ್ತಂಭವಾಗಿದ್ದಾರೆ.

ipl top 5 batsmen saakshatvನಂಬರ್ -3- ಡೇವಿಡ್ ವಾರ್ನರ್
ಡೇವಿಡ್ ವಾರ್ನರ್ – ಸನ್ ರೈಸರ್ಸ್ ಹೈದ್ರಬಾದ್ ತಂಡದ ನಾಯಕ. ಈ ನಡುವೆ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಪರ ಕೂಡ ಆಡಿದ್ದಾರೆ. ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಅವರು 43ರ ಸರಾಸರಿಯಲ್ಲಿ 5354 ರನ್ ಪೇರಿಸಿದ್ದಾರೆ.

ನಂಬರ್ -4- ರೋಹಿತ್ ಶರ್ಮಾ
ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ತಂಡದ ನಾಯಕ. ಆರಂಂಭದ ಐಪಿಎಲ್ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡಿದ್ದರು. 2013ರಲ್ಲಿ ಮುಂಬೈ ತಂಡದ ಸಾರಥಿಯಾಗಿ ಐದು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಅಷ್ಡೇ ಅಲ್ಲ, ಈ ಬಾರಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. 195 ಇನಿಂಗ್ಸ್ ಗಳಲ್ಲಿ ರೋಹಿತ್ ಶರ್ಮಾ 5230 ರನ್ ದಾಖಲಿಸಿದ್ದಾರೆ. ಇದ್ರಲ್ಲಿ 39 ಅರ್ಧಶತಕ ಹಾಗೂ ಒಂದು ಶತಕವಿದೆ.

ನಂಬರ್ -5- ಶಿಖರ್ ಧವನ್
ಶಿಖರ್ ಧವನ್. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಹಾಗೂ ಆರಂಭಿಕ ಆಟಗಾರ. ಕಳೆದ ಬಾರಿಯ ಟೂರ್ನಿಯಲ್ಲಿ ಧವನ್ ಅವರು ಬ್ಯಾಕ್ ಟು ಬ್ಯಾಕ್ ಶತಕ ದಾಖಲಿಸಿ ತಂಡವನ್ನು ಫೈನಲ್‍ಗೇರುವಂತೆ ಮಾಡಿದ್ದರು. ಒಟ್ಟು ಐಪಿಎಲ್ ನಲ್ಲಿ ಶಿಖರ್ ಧವನ್ 5197 ರನ್ ಪೇರಿಸಿದ್ದಾರೆ. ಇದ್ರಲ್ಲಿ ಎರಡು ಶತಕ ಹಾಗೂ 41 ಅರ್ಧಶತಕಗಳಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd