IPL 2022- 1st Week : ಸದ್ದು ಮಾಡಿ ಸುಮ್ಮನಾದ ಬೌಲರ್ ಗಳು ಇವರೇ..
ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾಗಿ ಇಂದಿಗೆ ಒಂದು ವಾರ ಕಳೆದಿದೆ. ಈ ವಾರದಲ್ಲಿ ಎಂಟು ಪಂದ್ಯಗಳು ನಡೆದಿವೆ. ಈ ಬಾರಿಯ ಐಪಿಎಲ್ ನಲ್ಲಿ ಕೆಲ ಬೌಲರ್ ಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದ್ರೆ ಆ ಬೌಲರ್ ಗಳು ಎಲ್ಲರ ಚಿತ್ತ ಕದಿಯುವಲ್ಲಿ ವಿಫಲರಾಗಿದ್ದಾರೆ.
ಡೇನಿಯಲ್ ಸ್ಯಾಮ್ಸ್
ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನಾಲ್ಕು ಓವರ್ ಬೌಲ್ ಮಾಡಿದ ಡೇನಿಯಲ್ ಸ್ಯಾಮ್ಸ್ 57 ರನ್ ನೀಡಿದರು. ಅದರಲ್ಲೂ 18ನೇ ಓವರ್ನಲ್ಲಿ ಡೆಲ್ಲಿ ಬ್ಯಾಟ್ಸ್ಮನ್ಗಳು ಒಟ್ಟು 24 ರನ್ (6,1,6,4,1,6) ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಜಸ್ಪ್ರೀತ್ ಬುಮ್ರಾ
ಮುಂಬೈ ಇಂಡಿಯನ್ಸ್ ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು 12 ಕೋಟಿ ರೂ.ಗೆ ಉಳಿಸಿಕೊಂಡಿದೆ. ತಂಡಕ್ಕೆ ಆಧಾರ ಸ್ತಂಭವಾಗಿದ್ದ ಬೌಲರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದರು. 3.2 ಓವರ್ ಬೌಲ್ ಮಾಡಿದ ಬುಮ್ರಾ 43 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾದರು.
ನಾಥನ್ ಕೌಲ್ಟರ್ ನೈಲ್
ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 61 ರನ್ಗಳ ಭರ್ಜರಿ ಜಯ ಸಾಧಿಸಿದೆ. ಆದ್ರೆ ಈ ಗೆಲುವಿನಲ್ಲಿ ತನ್ನ ಪಾತ್ರವನ್ನ ಪೋಷಿಸುವಲ್ಲಿ ನಾಥನ್ ವಿಫಲರಾದ್ರು. 3 ಓವರ್ ಬೌಲ್ ಮಾಡಿದ ನಾಥನ್, ಒಟ್ಟು 48 ರನ್ ಗಳಿಸಿದರು. ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಶಿವಂ ಮಾವಿ
ಶಿವಂ ಮಾವಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ 35 ರನ್ ನೀಡಿದರು. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಶಿವಂ ಮಾವಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ವಾಪಸ್ ಆದರು. ಆದರೆ, ಎರಡು ಓವರ್ಗಳಲ್ಲಿ 39 ರನ್ ನೀಡಿದ್ರು. ಆದರೆ ಒಂದೇ ಒಂದು ವಿಕೆಟ್ ಪಡೆದಿಲ್ಲ.