IPL 2022 | ಈ ಆಟಗಾರರಿಗೆ ಗುಡ್ ಬೈ ಹೇಳಲಿದೆ RCB..!
IPL-2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ-ಆಫ್ನಲ್ಲಿ ಮನೆಗೆ ಹೋಗಿದ್ದು ಗೊತ್ತೇ ಇದೆ.
ಆದಾಗ್ಯೂ, ಈ ಋತುವಿನಲ್ಲಿ ಫಾಫ್ ಡುಪ್ಲೆಸಿಸ್ ಅವರ ಹೊಸ ನಾಯಕತ್ವದಲ್ಲಿ RCB ಉತ್ತಮ ಪ್ರದರ್ಶನ ನೀಡಿದೆ.
ಇದು ಹೀಗಿದ್ದರೇ RCB ಫ್ರಾಂಚೈಸಿ ಮುಂದಿನ ಸೀಸನ್ ಗಾಗಿ ಕೆಲವು ಆಟಗಾರರನ್ನು ಬಿಟ್ಟುಕೊಡುವ ಸಾಧ್ಯತೆಗಳಿವೆ.
ಮೊಹ್ಮದ್ ಸಿರಾಜ್
2022ರ ಐಪಿಎಲ್ ಸೀಸನ್ ಗಾಗಿ ಆರ್ ಸಿಬಿ ಫ್ರಾಂಚೈಸಿ ಏಳು ಕೋಟಿ ರುಪಾಯಿಗೆ ರಿಟೈನ್ಡ್ ಮಾಡಿಕೊಂಡಿತ್ತು.
ಆದ್ರೆ ಸಿರಾಜ್ ಈ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲೇ ಇಲ್ಲ. ನಿರ್ಣಾಯಕ ಪಂದ್ಯದಲ್ಲಿ ಸಿರಾಜ್ ದುಬಾರಿಯಾಗಿದ್ದು, ತಂಡ ಟೂರ್ನಿಯಿಂದ ಹೊರಬರುವಂತೆ ಮಾಡಿದೆ.
ಈ ಸೀಸನ್ ನಲ್ಲಿ ಅತ್ಯಂತ ಕಳಫೆ ಪ್ರದರ್ಶನ ನೀಡಿದ ಕಾರಣ ಅವರನ್ನು ಆರ್ ಸಿಬಿ ಫ್ರಾಂಚೈಸಿ ಕೈಬಿಡುವ ಸಾಧ್ಯತೆಗಳಿವೆ.
ಸಿದ್ಧಾರ್ಥ್ ಕೌಲ್
ಆರ್ ಸಿಬಿ IPL-2022 ಮೆಗಾ ಹರಾಜಿನಲ್ಲಿ ಸಿದ್ಧಾರ್ಥ್ ಕೌಲ್ಗೆ ರೂ. 75 ಲಕ್ಷಕ್ಕೆ ಖರೀದಿಸಿದೆ. ಆದರೆ, ಕೌಲ್ ಈ ಋತುವಿನಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ.
ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಕೌಲ್ ಯಾವುದೇ ವಿಕೆಟ್ ಪಡೆಯದೆ 43 ರನ್ ನೀಡಿದರು. ಹೀಗಾಗಿ ಮುಂದಿನ ವರ್ಷದ ಸೀಸನ್ಗೂ ಮುನ್ನವೇ ಆರ್ಸಿಬಿ ಸಿದ್ಧಾರ್ಥ್ ಕೌಲ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.
ಡೇವಿಡ್ ವಿಲ್ಲಿ
ಆರ್ ಸಿಬಿ ಮೆಗಾ ಹರಾಜಿನಲ್ಲಿ ಡೆವಿಡ್ ವಿಲ್ಲಿಗೆ 2 ಕೋಟಿ ರುಪಾಯಿ ಕೊಟ್ಟು ಖರೀದಿಸಿತ್ತು. ಈ ಸೀಸನ್ ನಲ್ಲಿ ಆರಂಭಿಕ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಅಲಭ್ಯತೆ ಇದ್ದಾಗ ಪ್ಲೇಯಿಂಗ್ ಇಲೆವೆನ್ ನಲ್ಲಿ ಡೇವಿಡ್ ವಿಲ್ಲಿ ಕಾಣಿಸಿಕೊಂಡಿದ್ದರು.
ಆದರೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ನಾಲ್ಕು ಪಂದ್ಯಗಳನ್ನು ಆಡಿರುವ ವಿಲ್ಲಿ 18 ರನ್ ಗಳೊಂದಿಗೆ ಕೇವಲ ಒಂದು ವಿಕೆಟ್ ಪಡೆದರು.
ಕರಣ್ ಶರ್ಮಾ
IPL-2022 ಮೆಗಾ ಹರಾಜಿನಲ್ಲಿ ಕರಣ್ ಶರ್ಮಾಗೆ ರೂ. 50 ಲಕ್ಷಕ್ಕೆ ಖರೀದಿಸಲಾಯ್ತು. ಆದರೆ, ಕರಣ್ ಶರ್ಮಾ ಈ ಋತುವಿನಲ್ಲಿ ಒಂದೇ ಒಂದು ಪಂದ್ಯದಲ್ಲಿ ಕಾಣಿಸಿಕೊಳ್ಳಲಿಲ್ಲ.
ಶ್ರೀಲಂಕಾದ ಯುವ ಸ್ಪಿನ್ನರ್ ವನಿಂದು ಹಸರಂಗಾಗೆ ಈ ಋತುವಿನ ಎಲ್ಲಾ ಪಂದ್ಯಗಳಿಗೆ ಆರ್ಸಿಬಿ ಅವಕಾಶ ನೀಡಿದೆ. ಹಸರಂಗ ಇರುವ ಕಾರಣ ಕರಣ್ ಶರ್ಮಾ ಅವರನ್ನ ಆರ್ ಸಿಬಿ ಕೈಬಿಡಬಹುದು.