IPL | ರಾಜಸ್ಥಾನ್ ಗೆ ಆರ್ ಸಿಬಿ ವಿಶ್.. ಹೃದಯ ಗೆದ್ದ RCB
ಐಪಿಎಲ್-2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಯಾನ ಶುಕ್ರವಾರ ಕೊನೆಕೊಂಡಿದೆ.
ನಿರ್ಣಾಯಕ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಬೆಂಗಳೂರು ಸೋತು ನಿರಾಸೆ ಅನುಭವಿಸಿದೆ.
ಈ ಪಂದ್ಯದಲ್ಲಿ ಆರ್ ಸಿಬಿ ಸೋಲುತ್ತಿದ್ದಂತೆ ಕೋಟ್ಯಾಂತರ ಅಭಿಮಾನಿಗಳ ಮತ್ತೆ ಮಂಕಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ RCB 7 ವಿಕೆಟ್ ಗಳಿಂದ ಸೋತಿದೆ. ಆದ್ರೂ ಸೋಲಿನ ನಡುವೆಯೂ ಆರ್ಸಿಬಿ ಕ್ರೀಡಾಸ್ಫೂರ್ತಿ ಮೆರೆದಿದೆ.
ಮೊದಲ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಟೈಟಲ್ ಗೆಲ್ಲಿಸಿಕೊಟ್ಟಿದ ಶೇನ್ ವಾರ್ನ್ ಅವರನ್ನು ನೆನಪಿಸಿಕೊಂಡು ಆಲ್ ದಿ ಬೆಸ್ಟ್ ಹೇಳಿದೆ.
ಆರ್ ಸಿಬಿ ಟ್ವಿಟ್ಟರ್ ನಲ್ಲಿ.. ‘‘ದಿ ಗ್ರೇಟ್ ಶೇನ್ ವಾರ್ನ್ ನಿನ್ನನ್ನು ನೋಡಿ ಸಂತೋಷ ಪಡುತ್ತಿರುತ್ತಾರೆ. ತುಂಬಾ ಚೆನ್ನಾಗಿ ಆಡಿದ್ದೀರಿ. ಫೈನಲ್ಗೆ ಗುಡ್ ಲಕ್ ಎಂದು ಆರ್ಸಿಬಿ ಟ್ವೀಟ್ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ್ ರಾಯಲ್ಸ್ ತಂಡ, ಎರಡು ತಂಡಗಳ ಜೆರ್ಸಿ ಕಲರ್ ಪ್ರತಿಬಿಂಬಿಸುವ ಎರಡು ಹಾರ್ಟ್ ಎಮೋಜಿಗಳನ್ನು ಟ್ವೀಟ್ ಮಾಡಿದೆ.