IPL 2022 | ಆರ್ ಸಿಬಿ ಪ್ಲೇ ಆಫ್ಸ್ ಬಗ್ಗೆ ಚೋಪ್ರಾ ಹೇಳಿದ್ದೇನು..?
ಐಪಿಎಲ್-2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 14 ಅಂಕಗಳೊಂದಿಗೆ ಪ್ಲೇ-ಆಫ್ ಗೆ ಅರ್ಹತೆ ಪಡೆಯುವುದಿಲ್ಲ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಅಲ್ಲದೆ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಭಾರಿ ಅಂತರದಿಂದ ಮಣಿಸಿದರೆ ಟೂರ್ನಿಯಲ್ಲಿ ಮುಂದುವರಿಯಲು ಅವಕಾಶವಿದೆ ಎಂದಿದ್ದಾರೆ.
ಆರ್‌ಸಿಬಿ ಈ ಋತುವಿನಲ್ಲಿ ಆಡಿದ 13 ಪಂದ್ಯಗಳಲ್ಲಿ ಏಳನ್ನು ಗೆದ್ದು 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ 7 ಪಂದ್ಯಗಳಲ್ಲಿ ಗೆದ್ದಿದರೂ ಸಹ ರನ್ ರೇಟ್ ಕಾರಣದಿಂದಾಗಿ RCB ಗಿಂತ ಉತ್ತಮ ಸ್ಥಾನದಲ್ಲಿದೆ.
ಹೀಗಾಗಿ ಪ್ಲೇ ಆಫ್ ರೇಸ್‌ನಲ್ಲಿ ಆರ್‌ಸಿಬಿಗಿಂತ ಒಂದು ಹೆಜ್ಜೆ ಮುಂದಿದೆ. ಇದರೊಂದಿಗೆ ಅಂತಿಮ ಪಂದ್ಯದಲ್ಲಿ ಗುಜರಾತ್ ತಂಡವನ್ನು ಭಾರಿ ಅಂತರದಿಂದ ಮಣಿಸಿದರೆ ಆರ್ ಸಿಬಿ ಪ್ಲೇ ಆಫ್ಸ್ ಆಸೆ ಜೀವಂತವಾಗಿರಲಿದೆ.
ಹೀಗಾಗಿ ಆಕಾಶ್ ಚೋಪ್ರಾ ಅವರು ಈ ಬಗ್ಗೆ ಮಾತನಾಡಿದ್ದು, ‘‘ಇಂದು (ಮೇ 19) ಆರ್‌ಸಿಬಿ ಗೆದ್ದರೆ 16 ಅಂಕ ಪಡೆಯಲಿದೆ. ಇದರಿಂದ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ. ಆದರೆ, ಡೆಲ್ಲಿಗೆ ಮತ್ತೊಂದು ಪಂದ್ಯ ಬಾಕಿ ಇದೆ.
ಅವರು ಗೆದ್ದರೆ, ಅವರು 16 ಅಂಕಗಳನ್ನು ಪಡೆಯುತ್ತಾರೆ. ಆದರೆ, ರನ್ ರೇಟ್ ನಲ್ಲಿ ಮುಂದಿರುವ ಡೆಲ್ಲಿ ಆರ್ ಸಿಬಿಯನ್ನು ಹಿಂದಿಕ್ಕಬಹುದು.
ಹೀಗಾಗಿ ಬೆಂಗಳೂರು ತಂಡ 16 ಅಂಕ ಗಳಿಸುವುದು ಎಷ್ಟು ಮುಖ್ಯವೋ.. ನೆಟ್ ರನ್ ರೇಟ್ ಮೇಲೆ ಗಮನ ಹರಿಸುವುದು ಅಷ್ಟೇ ಮುಖ್ಯ.
ಇದರ ಹೊರತಾಗಿ ಕೇವಲ 14 ಅಂಕಗಳೊಂದಿಗೆ ಅರ್ಹತೆ ಪಡೆಯುವುದು ಸಾಧ್ಯವೇ ಇಲ್ಲ,” ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
“ಆರಂಭದಲ್ಲಿ ಅವರು ಉತ್ತಮವಾಗಿ ಆಡಿದರು. ಆದರೆ ಅಸ್ಥಿರತೆ ಅವರ ಈ ಪರಿಸ್ಥಿತಿಗೆ ಕಾರಣವಾಗಿದೆ. ಅದರಲ್ಲೂ ಕೊಹ್ಲಿ, ಫಾಫ್ ಡುಪ್ಲೆಸಿಸ್ ಮತ್ತು ಮ್ಯಾಕ್ಸ್ ವೆಲ್ ಸ್ಕೋರ್ ಮಾಡದಿದ್ದರೆ ಗೆಲುವಿನ ಅವಕಾಶಕ್ಕೆ ಧಕ್ಕೆಯಾಗುತ್ತದೆ,” ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಗುಜರಾತ್ ಟೈಟಾನ್ಸ್ ಈಗಾಗಲೇ ಪ್ಲೇ-ಆಫ್ ಪ್ರವೇಶಿಸಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಕೂಡ ಕೆಕೆಆರ್ ವಿರುದ್ಧ ಅಮೋಘ ಜಯ ಸಾಧಿಸಿ ಅರ್ಹತೆ ಗಿಟ್ಟಿಸಿಕೊಂಡಿದೆ.
ರಾಜಸ್ಥಾನ 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆ ತಂಡಕ್ಕೂ ಇನ್ನೊಂದು ಪಂದ್ಯ ಬಾಕಿ ಇದೆ.
ipl-2022-aakash-chopra-guaranteed-rcb-not-going-qualify-just-14-points