IPL 2022 : ಲಕ್ನೋ ಸೋಲಿಗೆ ಕೆ.ಎಲ್.ರಾಹುಲ್ ಕಾರಣ…

1 min read
lsg-vs-kkr-match-Lucknow Super Giants Beat Kolkata Knight Riders By 75 Runs saaksha tv

lsg-vs-kkr-match-Lucknow Super Giants Beat Kolkata Knight Riders By 75 Runs saaksha tv

IPL 2022 : ಲಕ್ನೋ ಸೋಲಿಗೆ ಕೆ.ಎಲ್.ರಾಹುಲ್ ಕಾರಣ…

ರಾಮೇಶ್ವರಕ್ಕೆ ಹೋದ್ರೂ ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತೆ ತಂಡ ಬದಲಾದ್ರೂ ಕೆ.ಎಲ್.ರಾಹುಲ್ ನಸೀಬು ಬದಲಾಗಿಲ್ಲ.

2022ರ ಐಪಿಎಲ್ ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡ ಕೆಎಲ್ ರಾಹುಲ್ ತಮ್ಮ ಮೊದಲ ಪಂದ್ಯದಲ್ಲೇ ನಿರಾಸೆ ಅನುಭವಿಸಿದ್ದಾರೆ.

ಐಪಿಎಲ್-2022 ರ ಅಂಗವಾಗಿ ಸೋಮವಾರ (ಮಾರ್ಚ್ 28) ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ 5 ವಿಕೆಟ್‌ ಗಳಿಂದ ಸೋಲುಂಡಿದೆ.

ಪಂದ್ಯದಲ್ಲಿ ಲಖನೌ ಸೋಲಿನ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ತಮ್ಮ ತಂಡದ ಸ್ಟಾರ್ ಬೌಲರ್ ದುಷ್ಮಂತ ಚಮೀರಾ ಅವರೊಂದಿಗೆ ನಾಲ್ಕು ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸದಿದ್ದಕ್ಕಾಗಿ ಚೋಪ್ರಾ ಬೇಸರ ಹೊರಹಾಕಿದ್ದಾರೆ.

ಅದೇ ರೀತಿ.. ಚಮೀರ ನಾಲ್ಕು ಓವರ್ ಬೌಲ್ ಮಾಡಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ipl-2022-aakash-chopra-kl-rahuls-captaincy saaksha tv

“ಚಮೀರಾ ಲಕ್ನೋ ಸೂಪರ್ ಜೈಂಟ್ಸ್‌ನ ಅತ್ಯುತ್ತಮ ಬೌಲರ್. ಈ ಪಂದ್ಯದಲ್ಲಿ ಅವರು ತಮ್ಮ ನಾಲ್ಕು ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಲಿಲ್ಲ. ರಾಹುಲ್ ಅವರನ್ನು ಬೇಗನೆ ಬೌಲಿಂಗ್‌ಗೆ ಕರೆತರಬೇಕಿತ್ತು.

ಚಮೀರಾ ತಮ್ಮ ವೇಗದ ಬೌಲಿಂಗ್‌ನೊಂದಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿ ಲಕ್ನೋಗೆ ಉತ್ತಮ ಆರಂಭವನ್ನು ನೀಡಿದರು.

ಅಂತಹ ಬೌಲರ್‌ಗೆ ರಾಹುಲ್ ಏಕೆ ನಾಲ್ಕು ಓವರ್‌ಗಳನ್ನು ನೀಡಲಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ.

ಅದು ರಾಹುಲ್ ಮಾಡಿದ ದೊಡ್ಡ ತಪ್ಪು. ಅವರು ನಾಲ್ಕು ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಿದ್ದರೆ ಫಲಿತಾಂಶವು ವಿಭಿನ್ನವಾಗಿರುತ್ತಿತ್ತು ”ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ipl-2022-aakash-chopra-kl-rahuls-captaincy

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd