IPL 2022 | ಕೆಕೆಆರ್ ತಂಡದ ಪ್ಲೇಯಿಂಗ್ ಇಲೆವೆನ್
IPL-2022 ಗೆ ಕ್ಷಣಗಣನೆ ಆರಂಭವಾಗಿದೆ.
ಶನಿವಾರ (ಮಾರ್ಚ್ 26) ವಾಂಖೆಡೆಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಪಂದ್ಯ ರಾತ್ರಿ 7:30ಕ್ಕೆ ಆರಂಭವಾಗಲಿದೆ. ಆದರೆ, ವಿದೇಶಿ ಸ್ಟಾರ್ ಆಟಗಾರರು ಕೋಲ್ಕತ್ತಾದಿಂದ ದೂರ ಉಳಿಯಲಿದ್ದಾರೆ. ಪ್ಯಾಟ್ ಕಮಿನ್ಸ್ ಮತ್ತು ಆರನ್ ಫಿಂಚ್ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಎಸ್ ಕೆಯನ್ನು ಎದುರಿಸಲಿರುವ ಕೆಕೆಆರ್ ಪ್ಲೇಯಿಂಗ ಇಲೆವೆನ್ ಅನ್ನು ಭಾರತ ತಂಡದ ಮಾಜಿ ನಾಯಕ ಆಕಾಶ್ ಚೋಪ್ರಾ ಅಂದಾಜಿಸಿದ್ದಾರೆ.
ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಆರಂಭಿರು.
ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ನಿತೀಶ್ ರಾಣಾ.
ಸ್ಯಾಮ್ ಬಿಲ್ಲಿಂಗ್ಸ್ ವಿಕೆಟ್ ಕೀಪರ್.
ಆಲ್‌ರೌಂಡರ್‌ಗಳ ಕೋಟಾದಲ್ಲಿ ರಸೆಲ್, ಸುನಿಲ್ ನರೈನ್ ಮತ್ತು ಚಾಮಿಕಾ ಕರುಣರತ್ನ.
ವೇಗದ ಬೌಲರ್‌ಗಳ ಕೋಟಾದಲ್ಲಿ ಉಮೇಶ್ ಯಾದವ್, ವರುಣ್ ಚಕ್ರವರ್ತಿ ಮತ್ತು ಶಿವಂ ಮಾವಿ ಇದ್ದಾರೆ.