IPL 2022 | ಸಿಎಸ್ ಕೆಗೆ ಮತ್ತೊಂದು ಶಾಕ್.. ಆ ಪ್ಲೇಯರ್ ಕೂಡ…
ಐಪಿಎಲ್ 2022 ರ ಸೀಸನ್ ನಲ್ಲಿ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಘನಘೋರ ವಿಫಲವಾಗಿದೆ.
ಒಂದೆಡೆ ಸರಣಿ ಸೋಲು, ಮತ್ತೊಂದೆಡೆ ಗಾಯಗಳಿಂದಾಗಿ ತಂಡದ ಪ್ಲೇ-ಆಫ್ ನಿರೀಕ್ಷೆ ಬಹುತೇಕ ಹುಸಿಯಾಗಿದೆ.
ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ಚೆನ್ನೈಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.
ಮಿಡಲ್ ಆರ್ಡರ್ ನಲ್ಲಿ ಮಿಂಚಿನ ಆಟವಾಡುತ್ತಿದ್ದ ಅಂಬಟಿ ರಾಯುಡು ಗಾಯಗೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಅಂಬಟಿ ರಾಯುಡು ಗಾಯಗೊಂಡಿದ್ದಾರೆ ಎಂದು ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾಹಿತಿ ನೀಡಿದ್ದಾರೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ 39 ಎಸೆತಗಳಲ್ಲಿಅಂಬಾಟಿ ರಾಯುಡು 78 ರನ್ ಗಳಿಸಿದ್ದರು.
ಗಾಯದ ನಡುವೆಯೂ ಅಂಬಾಟಿ ಬ್ಯಾಟಿಂಗ್ ಮಾಡಿದ್ದು, ಗಾಯ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹೀಗಾಗಿ ಮುಂದಿನ ಪಂದ್ಯಗಳಿಗೆ ರಾಯುಡು ಲಭ್ಯವಾಗೋದು ಅನುಮಾನ ಎಂದು ಹೇಳಲಾಗುತ್ತಿದೆ.
ಈ ಋತುವಿನಲ್ಲಿ ರಾಯುಡು 8 ಪಂದ್ಯಗಳಲ್ಲಿ 35.14 ಸರಾಸರಿಯಲ್ಲಿ 129.47 ಸ್ಟ್ರೈಕ್ ರೇಟ್‌ನೊಂದಿಗೆ 246 ರನ್ ಗಳಿಸಿದ್ದಾರೆ. ipl-2022-ambati-rayudu-battled-injury-during